AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತಿದೊಡ್ಡ ಕೆನ್ನೆ ಹೊಂದಿರುವ ಈಕೆ ಮೊದಲು ಹೇಗಿದ್ದಳು ಗೊತ್ತೇ? ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ಪಡೆದು ಹೇಗಾಗಿದ್ದಾಳೆ ನೋಡಿ

Viral Photo: ಶಸ್ತ್ರ ಚಿಕಿತ್ಸೆಗೂ ಮುನ್ನ ಮಾಡೆಲ್ ಹೇಗಿದ್ದರು... ಬಳಿಕ ಹೇಗಾಗಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವಿಶ್ವದ ಅತಿದೊಡ್ಡ ಕೆನ್ನೆ ಹೊಂದಿರುವ ಈಕೆ ಮೊದಲು ಹೇಗಿದ್ದಳು ಗೊತ್ತೇ? ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ಪಡೆದು ಹೇಗಾಗಿದ್ದಾಳೆ ನೋಡಿ
ವಿಶ್ವದ ಅತಿದೊಡ್ಡ ಕೆನ್ನೆ ಹೊಂದಿರುವ ಈಕೆ ಮೊದಲು ಹೇಗಿದ್ದಳು ಗೊತ್ತೇ?
TV9 Web
| Edited By: |

Updated on: Aug 19, 2021 | 12:44 PM

Share

ಮಾಡೆಲ್ ಆಗಿರುವ ಯುತಿಯೊಬ್ಬಳು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಅವರು ಬಳಿಕ ಹೇಗಾಗಿದ್ದಾರೆ ಎಂಬ ಫೋಟೋ ಫುಲ್ ವೈರಲ್ ಆಗಿದೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಮಾಡೆಲ್ ಹೇಗಿದ್ದರು… ಬಳಿಕ ಹೇಗಾಗಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಬಹಳ ಸುಂದರವಾಗಿ ಕಾಣುತ್ತೀರಿದ್ದೀರಿ ಎಂದು ಕೆಲವು ಪ್ರತಿಕ್ರಿಯೆ ಹಂಚಿಕೊಂಡರೆ ಇನ್ನು ಕೆಲವರು ವಿಚಿತ್ರವಾಗಿದೆ ಎಂಬ ಅಭಿಪ್ರಾಯಗಳನ್ನೂ ಸಹ ಹಂಚಿಕೊಂಡಿದ್ದಾರೆ.

ಉಕ್ರೇನ್​ನ 31 ವರ್ಷದ ಅನಸ್ತಾಸಿಯಾ ಪೊಕ್ರೇಶ್ಚುಕ್ ಎಂಬ ಹೆಸರಿನ ಯುವತಿ ವೃತ್ತಿಯಲ್ಲಿ ಮಾಡೆಲ್. ಅವರನ್ನು ಗಮನಿಸುವಂತೆ ಊದಿರುವ ಕೆನ್ನೆಗಳು ಮತ್ತು ಸೌಂದರ್ಯವರ್ಧಕಗಳಿಗಾಗಿ 1.53 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ.

View this post on Instagram

A post shared by Anastasiia? (@_just__queen_)

ಗುಲಾಬಿ ಬಣ್ಣದ ತಲೆಕೂದಲು, ಉಬ್ಬಿರುವ ಕೆನ್ನೆಗಳನ್ನು ಪಡೆಯುವ ಮೊದಲು ಅವರು ತೆಳುವಾದ ಹುಬ್ಬುಗಳನ್ನು ಹೊಂದಿದ್ದರು. ತಲೆ ಕೂದಲೂ ಸಹ ತುಂಬಾ ತೆಳುವಾಗಿತ್ತು. ನೈಸರ್ಗಿಕವಾದ ಕೆನ್ನೆಗಳೊಂದಿಗೆ ನೋಟ ಸಪ್ಪೆಯೆನಿಸುತ್ತಿತ್ತು, ಜತೆಗೆ ಇಲಿ ಮರಿಯಂತೆ ಕಾಣಿಸುತ್ತಿದ್ದೆ ಎಂದು ಪೊಕ್ರೇಶ್ಚುನ್ ಹೇಳಿದ್ದಾರೆ.

View this post on Instagram

A post shared by Anastasiia? (@_just__queen_)

ಈ ಪೋಸ್ಟ್ ಫುಲ್ ವೈರಲ್ ಆಗಿದೆ. 16,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಅನೇಕರು ಪೊಕ್ರೇಶ್ಚುಕ್ ಅವರ ನೋಟವನ್ನು ಇಷ್ಟಪಟ್ಟಿದ್ದರೆ ಇನ್ನು ಕೆಲವರು ಹೆಚ್ಚು ಇಷ್ಟಪಡಲಿಲ್ಲ. ನಾನು ಇಂಜಕ್ಷನ್ ತೆಗೆದುಕೊಂಡ ನಂತರ ನನ್ನ ಕೆನ್ನೆಗಳು ಬದಲಾವಣೆ ಹೊಂದಿದವು. ನನ್ನ ಮುಖ ಬದಲಾಯಿತು. ನೋಡುಗರಿಗೆ ವಿಚಿತ್ರವಾಗಿ ಕಾಣುತ್ತಿದ್ದೇನೆ ಎಂಬುದು ನನಗೆ ಅರ್ಥವಾಯಿತು. ಆದರೆ ನನ್ನ ಮನಸ್ಸಿಗೆ ಇಷ್ಟವಾಗಿದೆ ಎಂದು ಹೇಳಿದ್ದಾರೆ.

ಮೊದಲಿಗೆ ನಾನು ಹೆಚ್ಚು ನಾಚಿಕೆ ಪಡುತ್ತಿದ್ದೆ. ಕೆಲವು ಸ್ನೇಹಿತರು ನನ್ನ ನೋಟ ತುಂಬಾ ಸುಂದರವಾಗಿದೆ ಎಂದು ಹೇಳಿದ್ದಾರೆ. ಕೆಲವರು ನನ್ನನ್ನು ಹೆಚ್ಚು ಇಷ್ಟಪಟ್ಟಿಲ್ಲ. ನಾನು ಅಂತಹ ಮಾತುಗಳನ್ನು ನಿರ್ಲಕ್ಷಿಸುತ್ತೇನೆ ಎಂದು ಮಾಡೆಲ್ ಪೊಕ್ರೋಶ್ಚುಕ್ ಹೇಳಿದ್ದಾರೆ.

ಇದನ್ನೂ ಓದಿ:

Viral Video: ಟೋಲ್ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ ಬಿಜೆಪಿ ಶಾಸಕ; ವಿಡಿಯೋ ವೈರಲ್

ಸೌಂದರ್ಯ ವರ್ಧಕ ಬ್ಯೂಟಿ ಬ್ರ್ಯಾಂಡ್ ಮಾಡೆಲ್​ಆಗಿ ಆಯ್ಕೆಯಾದ 99 ವರ್ಷದ ವೃದ್ಧೆ! ಇವರ ಅಂದ ನೋಡಿ ಮನಸೋಲದೇ ಇರಲು ಸಾಧ್ಯವೇ?

(Model with world’s biggest cheeks photos goes viral in social media)

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?