ಮಾಡೆಲಿಂಗ್ ಕ್ಷೇತ್ರದಲ್ಲಿ ಯುವತಿಯರಿಗೆ ಹೆಚ್ಚಿನ ಪ್ರಾಮುಖ್ಯತೆ. ಅದರಲ್ಲಿಯೂ ವಿಶೇಷವಾಗಿ ಸೌಂದರ್ಯ ವರ್ಧಕಗಳ ಜಾಹೀರಾತುಗಳಲ್ಲಿ ಯುವತಿಯರೇ ಹೆಚ್ಚು ಮಿಂಚುವುದು. ಹೆಚ್ಚಾಗಿ ಅಂದವಾದ ಮುಖ ಹೊಂದಿರುವ ಯುವತಿಯರು ಸೌಂದರ್ಯ ವರ್ಧಕ ಬ್ರ್ಯಾಂಡ್ ಜಾಹೀರಾತಿಗೆ ಆಯ್ಕೆಯಾಗುತ್ತಾರೆ. ಅಮೆರಿಕದಲ್ಲಿ ಎಲ್ಲರೂ ಬೆರಗಾಗಿ ನೋಡುವಂತಹ ಸುಂದರವಾದ ಮುಖ ಹೊಂದಿರುವ 99 ವರ್ಷದ ಅಜ್ಜಿ ಬ್ಯೂಟಿ ಬ್ರಾಂಡ್ಆಗಿ ಆಯ್ಕೆಯಾಗಿದ್ದಾರೆ. ಅಜ್ಜಿ ಸೌಂದರ್ಯ ವರ್ಧಕದ ಬ್ರ್ಯಾಂಡ್ ಮಾಡೆಲ್ಆಗಿ ಮಿಂಚುತ್ತಿದ್ದು ನೆಟ್ಟಿಗರ ಹೃದಯ ಗೆದ್ದಿದ್ದಾರೆ.
ವಯಸ್ಸು ಕೇವಲ ಸಂಖ್ಯೆ ಅಷ್ಟೆ. ಮನಸ್ಸಿದ್ದರೆ ಮಾರ್ಗ ಎನ್ನುವ ಮಾತಿಗೆ ಕ್ಯಾಲಿಫೋರ್ನಿಯಾದ ಹೆಲೆನೆ ಸಿಮೋನಾ ಹೆಸರಿನ 99 ವರ್ಷದ ಅಜ್ಜಿ ಸಾಕ್ಷಿ. ಅಮೆರಿಕಾದ ಬ್ಯೂಟಿ ಬ್ರ್ಯಾಂಡ್ ಕಂಪನಿಯ ಹೆಸರು ಸಾಯಿ. ಈ ಬ್ರ್ಯಾಂಡ್ಅನ್ನು ಇವರ ಮೊಮ್ಮಗಳು ಲ್ಯಾನೆ ಕ್ರೋವೆಲ್ ನಡೆಸುತ್ತಿದ್ದಾರೆ.
ಬ್ಯೂಟಿ ಬ್ರ್ಯಾಂಡ್ ಮಾಡೆಲ್ ಆಗಲು ಅಜ್ಜಿಯನ್ನು ಮನವೊಲಿಸಲು ಮೊಮ್ಮಗಳು ಕಷ್ಪಟ್ಟಿದ್ದಾರೆ. ನನಗೆ ವಯಸ್ಸಾಗಿದೆ, ಮಾಡೆಲಿಂಗ್ ಮತ್ತು ಬ್ಯೂಟಿ ಬ್ರ್ಯಾಂಡ್ ಜಾಹಿರಾತಿಗೆ ನನ್ನ ಮುಖ ಸರಿಹೊಂದುವುದಿಲ್ಲ ಎಂದು ಕಾರಣವೊಡ್ಡುತ್ತಿದ್ದರು. ಅಜ್ಜಿಯ ಮಾತುಗಳನ್ನು ಕೇಳಿದ ಮೊಮ್ಮಗಳು ಮನವೊಲಿಸಲು ಪ್ರಯತ್ನಿಸಿದ್ದಾರೆ. ಕೊನೆಗೂ ಅಜ್ಜಿ ಒಪ್ಪಿಕೊಂಡಿದ್ದು ಬ್ಯೂಟಿ ಬ್ರ್ಯಾಂಡ್ಆಗಿ ಹೆಸರು ಗಿಟ್ಟಿಸಿಕೊಂಡಿದ್ದಾರೆ.
ನಾನು ಸಿದ್ಧಪಡಿಸಿದ ಜತೆಗೆ ನಮ್ಮ ಕಂಪನಿಯ ಬ್ರ್ಯಾಂಡ್ಗೆ ಹೊಸ ಮುಖದ ಅವಶ್ಯಕತೆ ಇತ್ತು. ಆದೆ ನಮ್ಮ ಪರಿಕಲ್ಪನೆಗೆ ಯಾವ ಮಾಡೆಲ್ಗಳೂ ಅಷ್ಟಾಗಿ ಸರಿ ಹೊಂದುತ್ತಿರಲಿಲ್ಲ. ಸುಮಾರು 2 ತಿಂಗಳುಗಳ ಕಾಲ ಬ್ಯೂಟಿ ಬ್ರ್ಯಾಂಡ್ಗೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಆದರೆ ಯಾರೂ ಆಯ್ಕೆ ಆಗಿರಲಿಲ್ಲ. ಕೊನೆಗೆ ಮೊಮ್ಮಗಳಾದ ಲ್ಯಾನಿ ಕ್ರೋವೆಲ್ ತನ್ನ ಅಜ್ಜಿಯನ್ನು ಬ್ಯೂಟಿ ಬ್ರ್ಯಾಂಡ್ಆಗಿ ಆಯ್ಕೆ ಮಾಡಿದ್ದಾರೆ.
ಇನ್ಸ್ಟಾಗ್ರಾಂ ಸೆರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ವೈರಲ್ ಆಗಿದೆ. ಇವರು ನೆಟ್ಟಿಗರ ಹೃದಯ ಗೆದ್ದಿದ್ದು 99 ವರ್ಷ ವಯಸ್ಸಾಗಿದ್ದರೂ ಅಜ್ಜಿ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ಸುಂದರವಾಗಿದ್ದೀರಿ ಎಂದು ಕಾಮೆಂಟ್ ಮಾಡುವ ಮೂಲಕ ಅಜ್ಜಿ ಸೌಂದರ್ಯವನ್ನು ವರ್ಣಿಸಿದ್ದಾರೆ.
ಇದನ್ನೂ ಓದಿ:
ವೀಕೆಂಡ್ನಲ್ಲಿ ನಂದಿ ಹಿಲ್ಸ್ ಬಂದ್; ಸ್ಕಂದಗಿರಿಯತ್ತ ಪ್ರವಾಸಿಗರ ದಂಡು, ಪ್ರಕೃತಿ ಸೌಂದರ್ಯಕ್ಕೆ ಶರಣು
ಕೋಲಾರ: ಅಂತರಗಂಗೆ ಬೆಟ್ಟದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಜಲಪಾತ; ಜಲಧಾರೆ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು