AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಆಕಸ್ಮಿಕವಾಗಿ ರೈಲ್ವೆ ಹಳಿಯ ಮಧ್ಯೆ ಬಿದ್ದ ವ್ಯಕ್ತಿ! ಆಘಾತಕಾರಿ ದೃಶ್ಯದ ವಿಡಿಯೋ ವೈರಲ್​

ಒಮ್ಮೆಲೆ ವಿಡಿಯೋ ನೋಡಿದಾಕ್ಷಣ ಮೈ ಜುಂ ಅನ್ನುವುದಂತೂ ಸತ್ಯ. ಒಂದು ವೇಳೆ ರೈಲು ಬಂದುಬಿಟ್ಟಿದ್ದರೆ? ಹೀಗೆಲ್ಲಾ ಪ್ರಶ್ನೆ ತಲ್ಲೆಯಲ್ಲಿ ಹಾದು ಹೋಗುವುದೂ ಸಹಜ. ಆದರೆ ಏನೂ ಅಪಾಯವಾಗದೇ ವ್ಯಕ್ತಿ ಬದುಕುಳಿದ್ದಾರೆ ಎಂಬುದು ಮನಸ್ಸಿಗೆ ಖುಷಿಯ ಜತೆಗೆ ಸಮಾಧಾನ.

Shocking Video: ಆಕಸ್ಮಿಕವಾಗಿ ರೈಲ್ವೆ ಹಳಿಯ ಮಧ್ಯೆ ಬಿದ್ದ ವ್ಯಕ್ತಿ! ಆಘಾತಕಾರಿ ದೃಶ್ಯದ ವಿಡಿಯೋ ವೈರಲ್​
ಆಕಸ್ಮಿಕವಾಗಿ ರೈಲ್ವೆ ಹಳಿಯ ಮಧ್ಯೆ ಬಿದ್ದ ವ್ಯಕ್ತಿ!
TV9 Web
| Edited By: |

Updated on:Aug 06, 2021 | 9:35 AM

Share

ವೀಲ್​ಚೇರ್​ನಲ್ಲಿ ಕುಳಿತ ವ್ಯಕ್ತಿಯೋರ್ವರು ರೈಲ್ವೆ ಹಳಿಯ ಮೇಲೆ ಬಿದ್ದ ಆಘಾತಕಾರಿ ಘಟನೆಯೊಂದು ನಡೆದಿದೆ. ತಕ್ಷಣವೇ ಅಲ್ಲೇ ಪಕ್ಕದಲ್ಲಿದ್ದ ಪ್ರಯಾಣಿಕರು ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ದೇವರು ಯಾವ ರೂಪದಲ್ಲಿಯೂ ಬಂದು ಜೀವ ಉಳಿಸಬಹುದು ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಈ ದೃಶ್ಯ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದು ಫುಲ್ ವೈರಲ್ ಆಗಿದೆ.

ಕಳೆದ ಬುಧವಾರ ಮಧ್ಯಾಹ್ನ ನ್ಯೂಯಾರ್ಕ್​ನಲ್ಲಿ ಈ ಘಟನೆ ನಡೆದಿದೆ. ವೀಲ್​ಚೇರ್​ನಲ್ಲಿ ಕುಳಿತ ವ್ಯಕ್ತಿ ರೈಲಿಗಾಗಿ ಕಾಯುತ್ತಾ ಇರುವಾಗ ಆಕಸ್ಮಿಕವಾಗಿ ರೈಲ್ವೇ ಹಳಿಯ ಮೇಲೆ ಬಿದ್ದು ಬಿಟ್ಟಿದ್ದಾರೆ. ಅಷ್ಟರಲ್ಲಿಯೇ ರೈಲು ಬರುತ್ತಿರುವ ಶಬ್ದ ಕೂಡಾ ಕೇಳಿಸಲು ಪ್ರಾರಂಭಿಸಿದೆ. ತಡಮಾಡದೇ ಅಲ್ಲಿದ್ದ ವ್ಯಕ್ತಿಯೋರ್ವರು ರೈಲ್ವೇ ಟ್ರ್ಯಾಕ್​ನತ್ತ ಇಳಿದು, ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಅಲ್ಲಿದ್ದ ಸುತ್ತಮುತ್ತಲಿನ ಜನ ಕೂಡಾ ಸಹಾಯ ಮಾಡಿದ್ದಾರೆ.

ಒಮ್ಮೆಲೆ ವಿಡಿಯೋ ನೋಡಿದಾಕ್ಷಣ ಮೈ ಜುಂ ಅನ್ನುವುದಂತೂ ಸತ್ಯ. ಒಂದು ವೇಳೆ ರೈಲು ಬಂದುಬಿಟ್ಟಿದ್ದರೆ? ಹೀಗೆಲ್ಲಾ ಪ್ರಶ್ನೆ ತಲ್ಲೆಯಲ್ಲಿ ಹಾದು ಹೋಗುವುದೂ ಸಹಜ. ಆದರೆ ಏನೂ ಅಪಾಯವಾಗದೇ ವ್ಯಕ್ತಿ ಬದುಕುಳಿದ್ದಾರೆ ಎಂಬುದು ಮನಸ್ಸಿಗೆ ಖುಷಿಯ ಜತೆಗೆ ಸಮಾಧಾನ. ಕಿಂಚಿತ್ತೂ ಯೋಚಿಸದೇ ವ್ಯಕ್ತಿಯನ್ನು ಬದುಕಿಸಿದ ಅಪರಿಚಿತ ವ್ಯಕ್ತಿಗೆ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಾದ್ದಾರೆ. ಜನರು ತುಂಬಾ ಹೃದಯವಂತರು ಎಂಬುದು ಖುಷಿಯ ವಿಚಾರ ಎಂದು ಕೆಲವರು ಹೇಳಿದ್ದಾರೆ. ಇನ್ನು ಪ್ರಾಣಾಪಾಯದಿಂದ ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್​; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು

Viral Video: ಚಲಿಸುತ್ತಿದ್ದ ರೈಲು ಹತ್ತಲು ಮುಂದಾದ ಮಹಿಳೆ…ಆಮೇನಾಯ್ತು?

Published On - 9:30 am, Fri, 6 August 21

Follow Us
TV9 Web
TV9 Web

TV9 Kannada

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ