Viral Video: ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್​; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು

ವ್ಯಕ್ತಿಯೋರ್ವ ತನ್ನ ಸ್ಕೂಟರ್​ ಜತೆ ರೈಲು ಹಳಿ ದಾಟುತ್ತಿರುತ್ತಾನೆ. ಹಳಿ ಮಧ್ಯದಲ್ಲಿ ಸ್ಕೂಟರ್​ ಸಿಲುಕಿಕೊಂಡಿದೆ. ಅದೇ ಸಮಯಕ್ಕೆ ಎದುರಿನಿಂದ ರೈ ಬರುವುದು ಕಾಣಿಸುತ್ತದೆ.

Viral Video: ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್​; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು
ರೈಲು ಹಳಿ ಮಧ್ಯೆ ಸಿಲುಕಿಕೊಂಡ ಸ್ಕೂಟರ್


ರೈಲು ಹಳಿಯಲ್ಲಿ ಸೆರೆಯಾದ ಭಯಾನಕ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಳಿಯ ಮಧ್ಯೆ ವ್ಯಕ್ತಿಯ ದ್ವಿಚಕ್ರ ವಾಹನ ಸಿಲುಕಿಕೊಂಡಿದೆ. ಎದುರು ರೈಲು ಬರುತ್ತಿದ್ದರೂ ವ್ಯಕ್ತಿ ಹಳಿ ಬಿಟ್ಟು ಬರುತ್ತಿಲ್ಲ. ಇನ್ನೇನು ರೈಲ್ವೆ ಹತ್ತಿರಕ್ಕೆ ಬಂದೇ ಬಿಟ್ಟಿದೆ ಅನ್ನುವಷ್ಟರಲ್ಲಿ ವ್ಯಕ್ತಿ ಪಾರಾಗುತ್ತಾನೆ. ಕೂದಲೆಳೆಯ ಅಂತರದಲ್ಲಿ ವ್ಯಕ್ತಿಯ ಪ್ರಾಣ ಉಳಿದಿದೆ. ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿ ಸ್ಟಂಟ್​ ಮಾಡುತ್ತಿದ್ದನಾ? ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು, ಜೀವಕ್ಕಿಂತ ಸ್ಕೂಟರ್​ ಮುಖ್ಯವಾಗಿತ್ತೆ ಎಂದು ಪ್ರಶ್ನಿಸಿದ್ದಾರೆ. 

ಗುಜರಾತ್​ನ ರೈಲು ಹಳಿ ಮಧ್ಯೆ ಈ ಘಟನೆ ಸಂಭವಿಸಿದೆ. ವ್ಯಕ್ತಿಯೋರ್ವ ತನ್ನ ಸ್ಕೂಟರ್​ ಜತೆ ಹಳಿ ದಾಟುತ್ತಿರುತ್ತಾನೆ. ಹಳಿ ಮಧ್ಯದಲ್ಲಿ ಸ್ಕೂಟರ್​ ಸಿಲುಕಿಕೊಂಡಿದೆ. ಒಂದಷ್ಟು ಸಮಯ ಸ್ಕೂಟರ್​ನ್ನು ಹಳಿಯಿಂದ ತಪ್ಪಿಸಲು ಪ್ರಯತ್ನಿಸುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಅದೇ ಸಮಯಕ್ಕೆ ಎದುರಿನಿಂದ ರೈಲು ಬರುವುದು ಕಾಣಿಸುತ್ತದೆ. ಆದರೂ ಸಹ ಹಳಿ ಬಿಟ್ಟು ಬರಲು ಆತ ಸಿದ್ಧನಿಲ್ಲ. ಭಯಾನಕ ದೃಶ್ಯ ನೋಡುತ್ತಿದ್ದಂತೆಯೇ ಮೈ ಜುಂ.. ಅನ್ನುವುದಂತೂ ಸತ್ಯ.

ವಿಡಿಯೋದಲ್ಲಿ ಗಮನಿಸುವಂತೆ, ಆದಷ್ಟು ಪ್ರಯತ್ನಿಸಿ ತನ್ನ ಸ್ಕೂಟರ್​ನ್ನು ಹಳಿಯಿಂದ ಬಿಡಿಸಲು ಯತ್ನಿಸಿದ್ದಾನೆ. ಆದರೂ ಕೂಡಾ ಆತನಿಂದ ಸ್ಕೂಟರ್ ಹಳಿಯಿಂದ ಈಚೆ ತರಲು ಸಾಧ್ಯವಾಗಲಿಲ್ಲ. ಹಳಿ ಎದುರು ಬರುತ್ತಿರುವುದನ್ನು ಕಂಡ ಆತ , ರೈಲಿನ ಚಾಲಕನಿಗೆ ನಿಲ್ಲಿಸುವಂತೆ ಕೈ ಮಾಡಿ ತೋರಿಸುತ್ತಾನೆ. ಅಷ್ಟರಲ್ಲಿಯೇ ರೈಲು ಹತ್ತಿರದಲ್ಲಿದೆ. ಕೂದಲೆಳೆಯ ಅಂತರದಲ್ಲಿ ಹಳಿ ಪಕ್ಕ ಹಾರಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ವಿಡಿಯೋದಲ್ಲಿ ಗಮನಿಸುವಂತೆ ವ್ಯಕ್ತಿಯ ಜೀವ ಉಳಿದಿದೆ. ಸ್ಕೂಟರ್​ ಹಳಿ ಮಧ್ಯದಲ್ಲೇ ಸಿಕ್ಕಿದ್ದರಿಂದ ರೈಲಿನ ಅಡಿಯಾಗಿದೆ.

ಇದನ್ನೂ ಓದಿ:

Viral Video: ಇಲ್ಲೋರ್ವ ವೃದ್ಧರು ಸ್ಯಾನಿಟೈಸರ್​ಅನ್ನು ಬಾಡಿಲೋಷನ್​ ಅಂತಾ ತಿಳಿದಿದ್ದಾರೋ ಏನೋ? ಮೈಕೈಗೆಲ್ಲಾ ಸವರಿಕೊಳ್ಳುತ್ತಿದ್ದಾರೆ

Viral Video: ರೈಲು ಹತ್ತುವಾಗ ಜಾರಿ ಬಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್​