2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ

ಪಶುವೈದ್ಯರ ಹತ್ತಿರ ನಾಯಿ ತಪಾಸಣೆ ನಡೆಸಿದ ನಂತರವೇ ಸಾಕುನಾಯಿ ಚೈನ್ ನುಂಗಿರುವುದು ಖಚಿತಗೊಂಡಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ
ಚಿನ್ನದ ಸರ ನುಂಗಿದ ಸಾಕುನಾಯಿ
Follow us
TV9 Web
| Updated By: Skanda

Updated on: Jun 12, 2021 | 7:34 AM

ಕೊಪ್ಪಳ: ರಾತ್ರಿ ಮಲಗುವ ಮುನ್ನ ಬಿಚ್ಚಿಟ್ಟ ಬಂಗಾರದ ಸರವನ್ನು ಮನೆಯ ಸಾಕುನಾಯಿ ನುಂಗಿದ ವಿಚಿತ್ರ ಘಟನೆಯೊಂದು ಕೊಪ್ಪಳದ ಜಿಲ್ಲೆ ಕಾರಟಗಿಯಲ್ಲಿ ನಡೆದಿದೆ. ಕಾರಟಗಿ ನಿವಾಸಿ ದಿಲೀಪ್ ಎನ್ನುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಸಾಕುನಾಯಿಯೇ ಸುಮಾರು 80 ಸಾವಿರ ಬೆಲೆಬಾಳುವ ಬಂಗಾರದ ಚೈನ್​ನ್ನು ನುಂಗಿಹಾಕಿತ್ತು.

ರಾತ್ರಿ ಮಲಗುವಾಗ ಕಾರಟಗಿ ನಿವಾಸಿ ದಿಲೀಪ್ ಅವರು ಬಂಗಾರದ ಚೈನ್​ ಅನ್ನು ತೆಗೆದು ಮಲಗಿದ್ದರು. ಆದರೆ ರಾತ್ರಿ ಅವರ ಸಾಕುನಾಯಿ ಆ ಬಂಗಾರದ ಚೈನ್​ನ್ನು ನುಂಗಿಬಿಟ್ಟಿದೆ. ಮಾರನೇ ದಿನ ಬಂಗಾರದ ಚೈನ್ ನಾಪತ್ತೆಯಾದದ್ದು ಬೆಳಕಿಗೆ ಬಂದ ತಕ್ಷಣವೇ ದಿಲೀಪ್ ಅವರಿಗೆ ಅನುಮಾನ ಬಂದಿತ್ತು. ಆದರೆ ಚೈನ್ ಕಳುವಾಗಿರಲು ಸಾಧ್ಯವಿರಲಿಲ್ಲ.  ರಾತ್ರಿ ಹತ್ತಿರವೇ ಇದ್ದ ನಾಯಿ ನುಂಗಿರುವ ಅನುಮಾನ ಬಂದು ಅವರು ಪಶು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದಾರೆ.

ಪಶುವೈದ್ಯರ ಹತ್ತಿರ ನಾಯಿ ತಪಾಸಣೆ ನಡೆಸಿದ ನಂತರವೇ ಸಾಕುನಾಯಿ ಚೈನ್ ನುಂಗಿರುವುದು ಖಚಿತಗೊಂಡಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಾಕುನಾಯಿಯ ಬಹಿರ್ದೆಸೆ ಮೂಲಕ ಬಂಗಾರದ ಚೈನ್ ಹೊರಬರಲು ಅವರು ಕಾದಿದ್ದಾರೆ. ಸದ್ಯ ಬಂಗಾರ ತುಂಡು ತುಂಡಾಗಿ ಅರ್ಧ ತೊಲೆಯಷ್ಟು ಬಂಗಾರ ಮಾತ್ರ ಹೊರಬಂದಿದೆ. ಇನ್ನೂ ಒಂದೂವರೆ ತೊಲೆಯಷ್ಟು ಬಂಗಾರ ಸಾಕುನಾಯಿಯ ಹೊಟ್ಟೆಯಲ್ಲಿದ್ದು, ನಾಯಿ ಬಹಿರ್ದೆಸೆಗೆ ಹೋಗುವುದನ್ನೇ ಕಾಯುವಂತಾಗಿದೆ.

ಇದನ್ನೂ ಓದಿ: ಸ್ವಚ್ಛತಾ ಕಾಮಗಾರಿ ಪರಿಶೀಲನೆಗೆ ಉಟ್ಟ ಸೀರೆಯಲ್ಲೇ ಮ್ಯಾನ್​ಹೋಲ್​ಗೆ ಇಳಿದ ಪಾಲಿಕೆ ಅಧಿಕಾರಿ: ವಿಡಿಯೋ ವೈರಲ್

Fact Check: ನೀತಾ ಅಂಬಾನಿಗೆ ನಮಸ್ಕಾರ ಮಾಡುತ್ತಿರುವ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮಗಳಲ್ಲಿ;ಫೇಕ್ ಫೋಟೊ; ವೈರಲ್ (Gold Chain swallowed by pet dog in Koppal)

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ