Viral Video: ಇಲ್ಲೋರ್ವ ವೃದ್ಧರು ಸ್ಯಾನಿಟೈಸರ್ಅನ್ನು ಬಾಡಿಲೋಷನ್ ಅಂತಾ ತಿಳಿದಿದ್ದಾರೋ ಏನೋ? ಮೈಕೈಗೆಲ್ಲಾ ಸವರಿಕೊಳ್ಳುತ್ತಿದ್ದಾರೆ
ವಿಡಿಯೋ ನೋಡಿದ ನೆಟ್ಟಿಗರೋರ್ವರು, ಸ್ನಾನಿಟೈಸರ್ನೊಂದಿಗೇ ಸ್ನಾನ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ. ಕೊರೊನಾ ಅವರ ಹತ್ತಿರ ಬರಲೂ ಭಯ ಪಡುತ್ತದೆ ಎಂದು ಇನ್ನೋರ್ವರು ತಮಾಷೆ ಮಾಡಿದ್ದಾರೆ. ವಿಡಿಯೋ ಕಾಮೆಂಟ್ಸ್ ವಿಭಾಗದಲ್ಲಿ ನೆಟ್ಟಿಗರಿಂದ ಉಲ್ಲಾಸದ ಪ್ರತಿಕ್ರಿಯಗಳೇ ತುಂಬಿವೆ.
ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುತ್ತಿರುವುದು ಅವಶ್ಯಕ. ಹಾಗೆಯೇ ಹೊರಗಡೆ ಎಲ್ಲೇ ಹೋದರೂ ಸಹ ಸ್ಯಾನಿಟೈಸ್ ಮಾಡಿಯೇ ಒಳಗೆ ಕರೆದುಕೊಳ್ಳುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವ ಪರಿಸ್ಥಿತಿಯೂ ಇದೆ. ಹೀಗಿದ್ದಾಗ, ಇಲ್ಲೋರ್ವ ವೃದ್ಧರಿಗೆ ಸ್ಯಾನಿಟೈಸರ್ ನೀಡುತ್ತಿದ್ದಂತೆಯೇ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿಕೊಂಡಂತೆ ಹಚ್ಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಯನ್ನು ಮೈಕೈಗೆ ಹಚ್ಚಿಕೊಳ್ಳುತ್ತಾರೆ. ಅದರಲ್ಲಿಯೂ ವೃದ್ಧರು ಮೈ ಕೈಗೆ ಎಣ್ಣೆ ಹಚ್ಚಿಕೊಳ್ಳುವುದು ಹೀಗೆ. ಬಿಸಿಲಿನಲ್ಲಿ ದುಡಿದ ದೇಹ ಗಟ್ಟು-ಮುಟ್ಟಾಗಿರಲು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದು ರೂಢಿ. ಇದೇ ರೂಢಿಯಲ್ಲಿ ವೃದ್ಧರು ಸ್ಯಾನಿಟೈಸರ್ಅನ್ನು ಮೈಕೈಗೆ ತಿಕ್ಕಿಕೊಂಡರೋ ಏನೋ?
ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಹಂಚಿಕೊಂಡ ವಿಡಿಯೋದಲ್ಲಿ, ಹುಡುಗನೊಬ್ಬ ವೃದ್ಧರ ಕೈಗೆ ಸ್ಯಾನಿಟೈಸರ್ ನೀಡುತ್ತಿದ್ದಂತೆಯೇ ಮೊಣಕೈ, ಕಾಲುಗಳು, ತಲೆ-ಮುಖಕ್ಕೆಲ್ಲಾ ಹಚ್ಚಿಕೊಂಡಿದ್ದಾರೆ. ಇನ್ನೊಂದು ಬಾರಿ ಕೈಗೆ ಸ್ಯಾನಿಟೈಸ್ ಹಾಕಿಕೊಂಡು ಮತ್ತೊಮ್ಮೆ ಮೈಗೆಲ್ಲಾ ಸವರಿಕೊಂಡಿದ್ದಾರೆ. ವೃದ್ಧರ ರಿಯಾಕ್ಷನ್ ಇದೀಗ ಭಾರೀ ಸುದ್ದಿಯಲ್ಲಿದೆ.
*इसका Corona बाल भी बाका नहीं कर सकता ??*
पर #मास्क नीचे नहीं करना था चाचा pic.twitter.com/WVXxGCpMfS
— Rupin Sharma IPS (@rupin1992) May 29, 2021
ವಿಡಿಯೋ ನೋಡಿದ ನೆಟ್ಟಿಗರೋರ್ವರು, ಸ್ನಾನಿಟೈಸರ್ನೊಂದಿಗೇ ಸ್ನಾನ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ. ಕೊರೊನಾ ಅವರ ಹತ್ತಿರ ಬರಲೂ ಭಯ ಪಡುತ್ತದೆ ಎಂದು ಇನ್ನೋರ್ವರು ತಮಾಷೆ ಮಾಡಿದ್ದಾರೆ. ವಿಡಿಯೋ ಕಾಮೆಂಟ್ಸ್ ವಿಭಾಗದಲ್ಲಿ ನೆಟ್ಟಿಗರಿಂದ ಉಲ್ಲಾಸದ ಪ್ರತಿಕ್ರಿಯಗಳೇ ತುಂಬಿವೆ.
ಇದನ್ನೂ ಓದಿ:
Published On - 1:44 pm, Fri, 11 June 21