AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಅಂತರಗಂಗೆ ಬೆಟ್ಟದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಜಲಪಾತ; ಜಲಧಾರೆ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು

ಕಳೆದ ಎರಡು ಮೂರು ತಿಂಗಳಿಂದ ಕೊರೊನಾದಿಂದ ಮನೆಯಿಂದ ಹೊರಬಾರದೆ ಮನೆಯಲ್ಲೇ ಲಾಕ್​ ಆಗಿದ್ದ ಕೋಲಾರ ಜನರಿಗೆ ಇದ್ದಕ್ಕಿದಂತೆ ತಮ್ಮೂರಲ್ಲೇ ಮಲೆನಾಡಿನ ಅನುಭವ ಸಿಗುತ್ತಿದೆ. ಕಳೆದ ಕೆಲವು ದಿನಗಳಿಂದ ಕೋಲಾರ ಜಿಲ್ಲೆಯಾದ್ಯಂತ ಒಳ್ಳೆಯ ಮಳೆಯಾಗಿದೆ ಈ ಹಿನ್ನೆಲೆಯಲ್ಲಿ ಕೋಲಾರದ ಪ್ರಸಿದ್ಧ ಯಾತ್ರಾಸ್ಥಳ ಅಂತರಗಂಗೆ ಬೆಟ್ಟದಲ್ಲಿ ಪುಟ್ಟ ಪುಟ್ಟ ಜಲಪಾತಗಳು ಸೃಷ್ಟಿಯಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ.

ಕೋಲಾರ: ಅಂತರಗಂಗೆ ಬೆಟ್ಟದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಜಲಪಾತ; ಜಲಧಾರೆ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು
ಅಂತರಗಂಗೆ ಬೆಟ್ಟದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಜಲಪಾತ
TV9 Web
| Updated By: preethi shettigar|

Updated on: Jul 12, 2021 | 1:17 PM

Share

ಕೋಲಾರ: ಪ್ರಕೃತಿಯ ಐಸಿರಿಯೇ ಹಾಗೆ, ಮನಸೋಲದವರೇ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ (monsoon) ಗುಡ್ಡಗಾಡು ಪ್ರದೇಶಗಳು, ಜಲಪಾತಗಳು, ನದಿಗಳು ಮೈತುಂಬಿ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತವೆ. ಅದರಲ್ಲೂ ಮುಂಗಾರು ಮಳೆಯ ಸಿಂಚನದಿಂದ ನಿಸರ್ಗ ಮಾತೆಯ ನೈಜ ಸೊಬಗು ಮತ್ತಷ್ಟು ಸೌಂದರ್ಯಯುತವಾಗಿ ಅನಾವರಣಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ (water Falls) ನೋಡುಗರನ್ನು ತಣಿಸಿದೆ. ಒಂದು ಕಡೆ ಲಾಕ್​ಡೌನ್​ ಸಡಿಲಿಕೆಯ ತೃಪ್ತಿ ಇದ್ದರೆ. ಮತ್ತೊಂದು ಕಡೆ ತಮ್ಮೂರಿನ ಜಲಪಾತ ತುಂಬಿ ಹರಿಯುತ್ತಿರುವ ಸಂತಸ. ಸದ್ಯ ಕಳೆದ ಕೆಲವು ದಿನದಿಂದ ಸುರಿದ ಮಳೆ ಕೋಲಾರ ಜಿಲ್ಲೆಯಲ್ಲಿ ಜಾದೂ ಮಾಡಿದೆ, ಬರದ ನಾಡಿನ ಬೆಟ್ಟಗುಡ್ಡದಲ್ಲಿ ಸಣ್ಣಪುಟ್ಟ ಜಲಪಾತವನ್ನೇ ಸೃಷ್ಟಿಸಿದೆ. ಶತಶೃಂಗ ಗಿರಿ ಪರ್ವತದಲ್ಲಿನ ಪುಟ್ಟ ಪುಟ್ಟ ಜಲಪಾತ ಝರಿಗಳು ಜಿಲ್ಲೆಯಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಮಾಡಿವೆ.

ಕಳೆದ ಎರಡು ಮೂರು ತಿಂಗಳಿಂದ ಕೊರೊನಾದಿಂದ ಮನೆಯಿಂದ ಹೊರಬಾರದೆ ಮನೆಯಲ್ಲೇ ಲಾಕ್​ ಆಗಿದ್ದ ಕೋಲಾರ ಜನರಿಗೆ ಇದ್ದಕ್ಕಿದಂತೆ ತಮ್ಮೂರಲ್ಲೇ ಮಲೆನಾಡಿನ ಅನುಭವ ಸಿಗುತ್ತಿದೆ. ಕಳೆದ ಕೆಲವು ದಿನಗಳಿಂದ ಕೋಲಾರ ಜಿಲ್ಲೆಯಾದ್ಯಂತ ಒಳ್ಳೆಯ ಮಳೆಯಾಗಿದೆ ಈ ಹಿನ್ನೆಲೆಯಲ್ಲಿ ಕೋಲಾರದ ಪ್ರಸಿದ್ಧ ಯಾತ್ರಾಸ್ಥಳ ಅಂತರಗಂಗೆ ಬೆಟ್ಟದಲ್ಲಿ ಪುಟ್ಟ ಪುಟ್ಟ ಜಲಪಾತಗಳು ಸೃಷ್ಟಿಯಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ. ಇದೆಲ್ಲಾ ಒಂದು ಜಲಪಾತವೇ ಎಂದು ಅನಿಸಬಹುದು. ಆದರೆ ನೀರಿಲ್ಲದೆ ಹನಿ ಹನಿ ನೀರಿಗೂ ಪರದಾಡುತ್ತಿದ್ದ ಬರದನಾಡಿನ ಜನಕ್ಕೆ ನಿಜಕ್ಕೂ ಇದೇ ಜಲಪಾತದ ಅನುಭವ ಸಂತೋಷ ನೀಡುತ್ತಿದೆ.

water falls

ಅಂತರಗಂಗೆ ಬೆಟ್ಟದಲ್ಲಿ ಪುಟ್ಟ ಪುಟ್ಟ ಜಲಪಾತಗಳು ಸೃಷ್ಟಿ

ಕೋಲಾರ ಸೇರಿದಂತೆ ಅಕ್ಕ ಪಕ್ಕದೂರಿನ ಜನರು ಅಂತರಗಂಗೆ ಬೆಟ್ಟಕ್ಕೆ ಬಂದು ಅಲ್ಲಿನ ಬೃಹತ್ತಾದ ಬೆಟ್ಟ ಗುಡ್ಡಗಳ ನಡುವೆ, ಮುಗಿಲೆತ್ತರಕ್ಕೆ ನಿಂತಿರುವ ಮರಗಳ ನಡುವೆ ಹರಿಯುತ್ತಿರುವ ಜಲಪಾತಗಳ ಸೊಬಗನ್ನು ಸವಿಯುತ್ತಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಜನರು ಕೊರೊನಾ ಆತಂಕದಿಂದ ಮನೆಯಿಂದ ಹೊರ ಹೋಗದೆ ಜೀವ ಭಯದಿಂದ ಮನೆಯಲ್ಲೇ ಇದ್ದು ಮನೋರಂಜನೆ ಇಲ್ಲದಂತಾಗಿತ್ತು, ಆದರೆ ಎರಡು ಮೂರು ದಿನಗಳಲ್ಲಿ ಸುರಿದ ಮಳೆಯಿಂದ ಕೋಲಾರ ನಗರಕ್ಕೆ ಕೇವಲ ಕೂದಲಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಪುಟ್ಟ ಪುಟ್ಟ ಜಲರಾಶಿ ಕೋಲಾರ ಜನರನ್ನು ಕೈಬೀಸಿ ಕರೆಯುತ್ತಿದೆ ಎಂದು ಸ್ಥಳೀಯರಾದ ವಿಸ್ಮಯಾ ತಿಳಿಸಿದ್ದಾರೆ.

water falls

ಜಲಧಾರೆ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು

ನೂರಾರು ಸಂಖ್ಯೆಯಲ್ಲಿ ಜನರು ತಮ್ಮ ಕುಟುಂಬ ಸಮೇತರಾಗಿ, ಸ್ನೇಹಿತರೊಟ್ಟಿಗೆ ಅಂತರಗಂಗೆ ಬೆಟ್ಟಕ್ಕೆ ಬಂದು ಪ್ರಕೃತಿ ಸೊಬಗಿನ ನಡುವೆ, ಬೆಟ್ಟ ಗುಡ್ಡಗಳ ನಡುವೆ ಹರಿಯುತ್ತಿರುವ ಪುಟ್ಟ ಪುಟ್ಟ ಝರಿಗಳಲ್ಲಿ ಕುಣಿಯುತ್ತಾ, ಸೆಲ್ಫಿ ತೆಗೆದುಕೊಂಡು ಸಂತೋಷಪಡುತ್ತಿದ್ದಾರೆ. ಆದರೆ ಎಷ್ಟೇ ಸಂತೋಷವಿದ್ದರು, ಕೊವಿಡ್​ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂಬುವುದು ನಮ್ಮ ಆಶಯ.

ಇದನ್ನೂ ಓದಿ: ಮುಗಿಲೆತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನು ನೋಡಲು ಗೋಕಾಕ್ ಜಲಪಾತಕ್ಕೆ ಭೇಟಿ ನೀಡಿ

ಧುಮ್ಮಿಕ್ಕಿ ಹರಿಯುತಿದೆ ಮುತ್ಯಾಲಮಡು‌ವು ಜಲಪಾತ.. ಬೆಂಗಳೂರಿಗರನ್ನು ಕೈಬೀಸಿ ಕರೆಯುತಿದೆ!