ಧುಮ್ಮಿಕ್ಕಿ ಹರಿಯುತಿದೆ ಮುತ್ಯಾಲಮಡುವು ಜಲಪಾತ.. ಬೆಂಗಳೂರಿಗರನ್ನು ಕೈಬೀಸಿ ಕರೆಯುತಿದೆ!
ಬೆಂಗಳೂರು: ಆನೇಕಲ್ ಸುತ್ತಮುತ್ತ ಉತ್ತಮ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗರ ನೆಚ್ಚಿನ ಪ್ರವಾಸಿ ತಾಣವಾದ ಮುತ್ಯಾಲಮಡುವು ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಈ ಜಲಪಾತ ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಭೋರ್ಗರೆದು ಹರಿಯುತ್ತಿರುವ ಮುತ್ಯಾಲಮಡುವು ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಸುಮಾರು 30 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿರುವ ಮುತ್ಯಾಲಮಡು ಜಲಪಾತದ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ.

Published On - 1:05 pm, Wed, 21 October 20