Karnataka SSLC Exam 2021: ಎಸ್ಎಸ್ಎಲ್​ಸಿ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

KSEB 10ನೇ ತರಗತಿ ಪರೀಕ್ಷೆ 2021: ಜುಲೈ 19, 22ರಂದು ಎರಡು ದಿನ ಆಯ್ಕೆ(objective) ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. 6 ದಿನದ ಬದಲು 2 ದಿನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ಪರೀಕ್ಷೆ ಬರೆಸಬಾರದು. ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದು.....

Karnataka SSLC Exam 2021: ಎಸ್ಎಸ್ಎಲ್​ಸಿ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಸಾಂಕೇತಿಕ ಚಿತ್ರ
Follow us
| Updated By: Digi Tech Desk

Updated on:Jul 12, 2021 | 3:14 PM

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಂಡಿದೆ. ಕರ್ನಾಟಕದಲ್ಲಿ ಶೇ.1.48ರಷ್ಟು ಮಾತ್ರ ಪಾಸಿಟಿವಿಟಿ ವರದಿ ಇದೆ. ಸದ್ಯಕ್ಕೆ ಕೊವಿಡ್ ಎರಡನೇ ಅಲೆ ಕಡಿಮೆ ಆಗಿರುವುದರಿಂದ ಮಾರ್ಗಸೂಚಿ ಪಾಲಿಸಿ ಪರೀಕ್ಷೆ ನಡೆಸಲಾಗುತ್ತಿದೆ.

ಜುಲೈ 19, 22ರಂದು ಎರಡು ದಿನ ಆಯ್ಕೆ(objective) ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. 6 ದಿನದ ಬದಲು 2 ದಿನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ಪರೀಕ್ಷೆ ಬರೆಸಬಾರದು. ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದು. ವಿದ್ಯಾರ್ಥಿಗಳು, ಶಿಕ್ಷಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರ ರೂಪಿಸಿದ ಎಸ್ಒಪಿ ಪಾಲಿಸಬೇಕು ಎಂದು ನ್ಯಾ.ಬಿ.ವಿ.ನಾಗರತ್ನ, ನ್ಯಾ. ಹಂಚಟೆ ಸಂಜೀವ್ ಕುಮಾರ್ರ ಪೀಠ ಆದೇಶ ಹೊರಡಿಸಿದೆ.

10 ನೇ ತರಗತಿ/ ಎಸ್‌ಎಸ್‌ಎಲ್‌ಸಿ ಮಂಡಳಿ ಪರೀಕ್ಷೆಗೆ ಪರ್ಯಾಯ ಮೌಲ್ಯಮಾಪನ ಮಾನದಂಡಗಳನ್ನು ಕೋರಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತು. ವರದಿಯ ಪ್ರಕಾರ, ಜುಲೈ 19, 20 ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ರಾಜ್ಯ ಸರ್ಕಾರ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. 10ನೇ ತರಗತಿ ಮತ್ತು ಮೊದಲ ಪಿಯುಸಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪಾಸ್ ಮಾಡಲಾಗುತ್ತೆ.

ಇದನ್ನೂ ಓದಿ: ಎಸ್‌ಎಸ್‌ಎಲ್​​ಸಿಗೆ ಪರೀಕ್ಷೆ: ಇದು ರಾಜ್ಯ ಸರ್ಕಾರದ ಬುದ್ಧಿಭ್ರಮಣೆ ನಿರ್ಧಾರ, ಬೃಹಸ್ಪತಿ ಶಿಕ್ಷಣ ಸಚಿವರ ನಿರ್ಧಾರ ಎಂದ ಹೆಚ್‌.ಡಿ. ಕುಮಾರಸ್ವಾಮಿ

Published On - 1:41 pm, Mon, 12 July 21