AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್ನಲ್ಲಿ ನಂದಿ ಹಿಲ್ಸ್ ಬಂದ್; ಸ್ಕಂದಗಿರಿಯತ್ತ ಪ್ರವಾಸಿಗರ ದಂಡು, ಪ್ರಕೃತಿ ಸೌಂದರ್ಯಕ್ಕೆ ಶರಣು

ಆಗಸದಲ್ಲಿ ತೇಲುತ್ತಿರುವ ಬೆಳ್ಳಿ ಮೋಡಗಳ ಮಧ್ಯೆ ಕಳೆದು ಹೋಗುವ ಬೆಟ್ಟ, ಗುಡ್ಡಗಳು.. ಗಗನವೇ ಬಾಗಿ, ಬೃಹತ್ ಬೆಟ್ಟಗಳ ಮಧ್ಯೆ ತೂಗುಯ್ಯಾಲೆ ಆಡೋ ಮನಮೋಹಕ ದೃಶ್ಯ.. ಮೋಡಗಳ ಮಧ್ಯೆ ಮೇಲೇರಿ ಬರೋ ಸೂರ್ಯ ಇಂತಹ ಪ್ರಕೃತಿ ಮಾತೆಯ ಅಂದವನ್ನು ನೋಡುವುದೇ ಚಂದ.

ವೀಕೆಂಡ್ನಲ್ಲಿ ನಂದಿ ಹಿಲ್ಸ್ ಬಂದ್; ಸ್ಕಂದಗಿರಿಯತ್ತ ಪ್ರವಾಸಿಗರ ದಂಡು, ಪ್ರಕೃತಿ ಸೌಂದರ್ಯಕ್ಕೆ ಶರಣು
ಸ್ಕಂದಗಿರಿ
TV9 Web
| Updated By: ಆಯೇಷಾ ಬಾನು|

Updated on:Jul 25, 2021 | 9:46 AM

Share

ಚಿಕ್ಕಬಳ್ಳಾಪುರ: ವೀಕೆಂಡ್ ಬಂತು ಅಂದ್ರೆ ಸಾಕು ಜನ ಮೋಜು-ಮಸ್ತಿ, ಚರಣ, ರಿಲ್ಯಾಕ್ಸ್ ಆಗುವುದಕ್ಕೆ ಸುಂದರ ಪ್ರಕೃತಿ ತಾಣಗಳಿಗೆ ಹೊರಟು ಬಿಡ್ತಾರೆ. ಆದ್ರೆ ಕೊರೊನಾ ಸೋಂಕಿನ ಮೂರನೆ ಅಲೆಯ ಭೀತಿ ಹಿನ್ನಲೆ ಪ್ರತಿ ಶನಿವಾರ ಹಾಗೂ ಭಾನುವಾರ ನಂದಿಗಿರಿಧಾಮವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಬೆಳ್ಳಿ ಮೋಡಗಳ ಆಟ ನೋಡಲು ಪ್ರವಾಸಿಗರು ಸ್ಕಂದಗಿರಿಗೆ ಭೇಟಿ ನೀಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಕೊರೊನಾ ಸೋಂಕಿನ ಮೂರನೆ ಅಲೆಯ ಭೀತಿ ಹಿನ್ನಲೆ ಪ್ರತಿ ಶನಿವಾರ ಹಾಗೂ ಭಾನುವಾರ ನಂದಿಗಿರಿಧಾಮವನ್ನು ಬಂದ್ ಮಾಡಿದೆ. ಇದ್ರಿಂದ ಪಕ್ಕದಲ್ಲೇ ಇರುವ ಚಾರಣಿಗರ ಅಚ್ಚು ಮೆಚ್ಚಿನ ತಾಣ ಸ್ಕಂದಗಿರಿಯತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ನಂದಿಹಿಲ್ಸ್‌ಗೆ ಸೆಡ್ಡು ಹೊಡೆದಂತೆ ಕಾಣುವ ಸ್ಕಂದಗಿರಿಧಾಮ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರ ಮನಸೊರೆಗೊಂಡಿದೆ.

skandagiri

ಸ್ಕಂದಗಿರಿ

ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಸ್ಕಂದಗಿರಿಯಲ್ಲಿ ಜನ ಜಂಗುಳಿ ಆಗ್ತಿದೆ. ಬೆಳಗ್ಗೆ ನಾಲ್ಕು ಗಂಟೆಗೆ ಬರುವ ಪ್ರವಾಸಿಗರು ಪ್ರವೇಶ ದ್ವಾರದಲ್ಲಿ 250 ರೂಪಾಯಿ ಪ್ರವೇಶ ಶುಲ್ಕ ನೀಡಿ, ಎರಡು ಕೀಲೋ ಮೀಟರ್ ಅರಣ್ಯ, ಬೆಟ್ಟಗುಡ್ಡದಲ್ಲಿ ಕಾಲ್ನೆಡಿಗೆ ಪ್ರವಾಸ ಆರಂಭಿಸಬೇಕು. ಒಂದೆಡೆ ಕತ್ತಲು ಮತ್ತೊಂದೆಡೆ ಕೊರಕಲು ರಸ್ತೆ. ಸ್ವಲ್ಪ ಯಾಮಾರಿದ್ರೆ ಯಮಲೋಕಕ್ಕೆ ಹೋಗಬೇಕಾಗುತ್ತೆ. ಇನ್ನು ಇಲ್ಲಿ ಬರೋ ಪ್ರವಾಸಿಗರಿಗೆ ಬೇಕಾದ ಸೌಲಭ್ಯವಿಲ್ಲ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನೀರು ಕುಡಿಯೋಣ ಅಂದ್ರೆ ಎಲ್ಲಿಯೂ ನೀರು ಇಲ್ಲ. ಶೌಚಾಲಯವೂ ಇಲ್ಲ. ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ.

ಪ್ರಕೃತಿ ಸೌಂದರ್ಯವನ್ನೇ ಹೊದ್ದು ಮಲಗಿರುವ ಸ್ಕಂದಗಿರಿ ಬೆಟ್ಟಕ್ಕೆ, ಮೊದಲು ಚಾರಣಿಗರು ಮಾತ್ರ ಬರ್ತಿದ್ರು. ಆದ್ರೆ ಈಗ ವಿಕೇಂಡ್ನಲ್ಲಿ ಫ್ಯಾಮಿಲಿ ಜೊತೆ ಪ್ರವಾಸಿಗರು ಎಂಟ್ರಿಕೊಡುತ್ತಿದ್ದಾರೆ. ಆದ್ರೆ ಒಬ್ಬರಿಗೆ 250 ರೂಪಾಯಿ ಟಿಕೆಟ್ ತಗೊಂಡ್ರು, ಸೌಲಭ್ಯ ಇಲ್ಲದೇ ಇರೋದು ಮಾತ್ರ ದುರಂತ. ಹೀಗಾಗಿ ಇಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿದ್ರೆ.. ಮತ್ತಷ್ಟು ಪ್ರವಾಸಿಗರು ಇಲ್ಲಿಗೆ ಬರ್ತಾರೆ ಅನ್ನೋದು ನಮ್ಮ ಅನಿಸಿಕೆ.

ಇದನ್ನೂ ಓದಿ: Karnataka Tourism: ನೀವು ಭೇಟಿ ನೀಡಲೇ ಬೇಕಾದ ಕರ್ನಾಟಕದ 15 ಪ್ರವಾಸಿ ತಾಣಗಳು ಇಲ್ಲಿವೆ!

Published On - 8:53 am, Sun, 25 July 21