AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್​ ತಯಾರಿಸಿರೋದು ಮಾತ್ರ ನಿಜ, ಆದರೆ ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!

ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್​ ತಯಾರಿಸಿರೋದು ಮಾತ್ರ ನಿಜ, ಆದರೆ ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!

TV9 Web
| Updated By: shivaprasad.hs

Updated on:Oct 16, 2021 | 6:39 AM

ಈ ಸ್ಕೂಟರ್ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಹೊಂದಿರುವ ಸಿ 400 ಜಿಟಿ ಸ್ಕೂಟರ್ ಕೇವಲ 9.5 ಸೆಕೆಂಡ್​ಗಳಲ್ಲಿ 100 ಕಿಮೀ/ ಗಂಟೆ ವೇಗವನ್ನು ಪಡೆದುಕೊಳ್ಳುತ್ತದೆ.

ಬಿ ಎಮ್ ಡಬ್ಲ್ಯು ಅಂದಾಕ್ಷಣ ನಮಗೆ ಐಷಾರಾಮಿ ಕಾರು ಮಾತ್ರ ನೆನಪಾಗುತ್ತದೆ. ಆದರೆ ವಿಶ್ವದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಈ ಕಂಪನಿಯು ಸ್ಕೂಟರ್​​ಗಳನ್ನು ಉತ್ಪಾದಿಸಲು ಆರಂಭಿಸಿರೋದು ಸೋಜಿಗ ಹುಟ್ಟಿಸುವ ಸಂಗತಿಯೇ. ಮತ್ತೂ ಸೋಜಿಗದ ಸಂಗತಿಯೆಂದರೆ, ಬಿ ಎಮ್ ಡಬ್ಲ್ಯು ಇಂಡಿಯ ಸ್ಕೂಟರ್ ತಯಾರಿಕೆಗೆ ಇಳಿದರೂ ಅದನ್ನು ಮಾರುತ್ತಿರೋದು ಮಾತ್ರ ಕಾರಿನ ಬೆಲೆಯಲ್ಲಿ!! ಯಾಕೆ ಹೀಗೆ ಹೇಳುತ್ತಿದ್ದೇವೆ ಅಂತ ಗೊತ್ತಾ? ಬಿ ಎಮ್ ಡಬ್ಲ್ಯು ಸಿ400 ಜಿಟಿ ಮ್ಯಾಕ್ಸಿ ಸ್ಕೂಟರ್ ಬೆಲೆ ರೂ 9.95 ಲಕ್ಷ ಮಾತ್ರ! ಸದ್ಯಕ್ಕೆ ಭಾರತದಲ್ಲಿ ಮಾರಾಟಕ್ಕಿರುವ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಸ್ಕೂಟರ್ ಎಂದರೆ ಇದೇ.

ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಸಿ400 ಜಿಟಿ ಮ್ಯಾಕ್ಸಿ ಸ್ಕೂಟರ್ 350 ಸಿಸಿ ಎಂಜಿನ್​ನಿಂದ 34 ಹೆಚ್ ಪಿ ಮತ್ತು 35 ಎನ್ ಎಮ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಹೊಂದಿರುವ ಸಿ 400 ಜಿಟಿ ಸ್ಕೂಟರ್ ಕೇವಲ 9.5 ಸೆಕೆಂಡ್​ಗಳಲ್ಲಿ 100 ಕಿಮೀ/ ಗಂಟೆ ವೇಗವನ್ನು ಪಡೆದುಕೊಳ್ಳುತ್ತದೆ.

ಇದರ ಟಾಪ್ ಸ್ಪೀಡ್ 139 ಕೆಎಮ್ಪಿಎಚ್ ಬಿಎಂಡಬ್ಲ್ಯು ಸಿ 400 ಜಿಟಿಯ ದೊಡ್ಡ ಬಾಡಿ ಪ್ಯಾನಲ್‌, ಎಲ್‌ಇಡಿ ದೀಪಗಳು ಮತ್ತು ಕಾಂಪ್ಯಾಕ್ಟ್ ಹಿಂಭಾಗವು ಅದರ ವಿನ್ಯಾಸವನ್ನು ಗಮನಾರ್ಹವಾಗಿಸುತ್ತವೆ. ಸ್ಕೂಟರ್ ಮುಂಭಾಗದಲ್ಲಿ 15 ಇಂಚಿನ ಚಕ್ರಗಳನ್ನು ಮತ್ತು ಹಿಂಭಾಗದಲ್ಲಿ 14 ಇಂಚಿನ ಚಕ್ರಗಳನ್ನು ಬಳಸಲಾಗಿದೆ. ಸಣ್ಣ ಹಿಂಬದಿ ಚಕ್ರ ಹೆಚ್ಚುವರಿ ಶೇಖರಣಾ ಸ್ಟೋರೇಜ್ ಒದಗಿಸುತ್ತದೆ ಎಂದು ಬಿ ಎಮ್ ಡಬ್ಲ್ಯೂ ಹೇಳಿದೆ.

ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡ್ ಮೋಡ್‌ಗಳು ಸೇರಿದಂತೆ ಸುರಕ್ಷತಾ ಸಾಧನಗಳೊಂದಿಗೆ ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಮೂಲಕ ಬ್ರೇಕಿಂಗ್ ಅನ್ನು ನಿರ್ವಹಿಸಲಾಗುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಫುಲ್-ಎಲ್ಇಡಿ ದೀಪಗಳು, ಕೀರಹಿತ ಇಗ್ನಿಷನ್, ಯುಎಸ್‌ಬಿ ಚಾರ್ಜಿಂಗ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಟಿಎಫ್‌ಟಿ ಡಿಸ್‌ಪ್ಲೇ ಸೇರಿವೆ.

ಇದನ್ನೂ ಓದಿ:  Nitin Gadkari: ಬೇರೆ ಪ್ರಯಾಣಿಕರೊಂದಿಗೆ ಕ್ಯೂನಲ್ಲಿ ನಿಂತು ವಿಮಾನ ಹತ್ತಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ವಿಡಿಯೋ ವೈರಲ್

Published on: Oct 16, 2021 01:20 AM