ELSS Mutual Fund Tax Savings Planning: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ವರ್ಷದ ಆರಂಭದಲ್ಲೇ ಯೋಚಿಸಿ

ಆದಾಯ ತೆರಿಗೆ ಉಳಿತಾಯದ ಹೂಡಿಕೆ ಬಗ್ಗೆ ಆರ್ಥಿಕ ವರ್ಷದ ಕೊನೆಗೆ ಎದ್ದೇನೋ ಬಿದ್ದೇನೋ ಎಂದು ಯೋಜನೆ ರೂಪಿಸುವ ಬದಲು ಆರ್ಥಿಕ ವರ್ಷದ ಶುರುವಾದ ಏಪ್ರಿಲ್​ನಲ್ಲೇ ಆಲೋಚಿಸುವುದು ಉತ್ತಮ. ಇಲ್ಲಿ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಬಗ್ಗೆ ಮಾಹಿತಿ ಇದೆ.

ELSS Mutual Fund Tax Savings Planning: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ವರ್ಷದ ಆರಂಭದಲ್ಲೇ ಯೋಚಿಸಿ
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: Skanda

Updated on: Apr 08, 2021 | 6:23 AM

ಆದಾಯ ತೆರಿಗೆ ಅಥವಾ ಇನ್ ಕಮ್ ಟ್ಯಾಕ್ಸ್ ಸೇವಿಂಗ್ಸ್ ಅಂತ ನಾವೆಲ್ಲ ಸಾಮಾನ್ಯವಾಗಿ ಯೋಚನೆ ಮಾಡೋದು ಇನ್ನೇನು ಹಣಕಾಸು ವರ್ಷ ಕೊನೆ ಆಗ್ತಿದೆ ಅನ್ನುವಾಗಲೇ. ಆದರೆ ಆದಾಯ ತೆರಿಗೆಯನ್ನು ವರ್ಷಕ್ಕೆ ಮುಂಚೆಯೇ, ಅಂದರೆ ಆರ್ಥಿಕ ವರ್ಷದ ಆರಂಭದಲ್ಲಿನ ಏಪ್ರಿಲ್​ನಲ್ಲಿಯೇ ಮಾಡಿಕೊಳ್ಳುವುದು ಉತ್ತಮ. ಹೀಗೆ ವರ್ಷದ ಶುರುವಿನಲ್ಲೇ ಉಳಿತಾಯದ ಯೋಜನೆ ಮಾಡುವುದರಿಂದ ತೆರಿಗೆ ಉಳಿತಾಯದ ಹೂಡಿಕೆಗೆ ವರ್ಷದ ಕೊನೆಗೆ ಎದ್ದೇನೋ ಬಿದ್ದೇನೋ ಎಂಬ ಆತುರ ಪಡುವಂತೆ ಇರೋದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ನಾನಾ ಬಗೆಯ ತೆರಿಗೆ ವಿನಾಯಿತಿಗಳಿಗೆ ಅವಕಾಶ ಇದೆ. ಅಂಥದ್ದೇ ಒಂದು ಆಯ್ಕೆ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್. ಇದರ ಲಾಕ್- ಇನ್ ಅವಧಿ 3 ವರ್ಷಗಳದ್ದಾಗಿರುತ್ತದೆ (3 ವರ್ಷ ಹೂಡಿಕೆ ಹಣವನ್ನು ಹಿಂಪಡೆಯುವುದಕ್ಕೆ ಆಗಲ್ಲ). ಜತೆಗೆ ಒಂದು ಹಣಕಾಸು ವರ್ಷಕ್ಕೆ ಇದರಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಪಡೆಯಬಹುದು.

ಏನಿದು ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್? ಇಎಲ್​ಎಸ್​ಎಸ್ ಅಂದರೆ ಈಕ್ವಿಟಿ- ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಇದರ ಮೂಲಕ ತೆರಿಗೆಯನ್ನೂ ಉಳಿಸಬಹುದು, ಸಂಪತ್ತು ಸಂಗ್ರಹವೂ ಆಗುತ್ತದೆ ಮತ್ತು ಇತರ ತೆರಿಗೆ ಉಳಿತಾಯ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದಲ್ಲಿ ಲಾಕ್- ಇನ್ ಅವಧಿ ಕೂಡ ಕಡಿಮೆ. ಹೂಡಿಕೆದಾರರಿಗೆ ತೆರಿಗೆ ಉಳಿತಾಯದ ಹಣ ಎಲ್ಲಿ ಹೂಡಿಕೆ ಮಾಡಬೇಕು ಎಂಬ ಸ್ಪಷ್ಟತೆ ಇರಬೇಕು. ಒಂದು ವೇಳೆ ಈಕ್ವಿಟಿಯಲ್ಲಿ (ಷೇರು ಮಾರುಕಟ್ಟೆಯಲ್ಲಿನ ಷೇರುಗಳು) ಹಣ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಆಗ ಇಎಲ್​ಎಸ್​ಎಸ್ ಎಂಬುದು ಆಯ್ಕೆಯಾಗುತ್ತದೆ.

ಇಎಲ್​ಎಸ್​ಎಸ್​ನಲ್ಲಿ ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳೇನು ಎಂಬ ಬಗ್ಗೆ ತಜ್ಞರು ಹೇಳುವುದು ಹೀಗೆ: 1. ಲಾಕ್- ಇನ್ ಅವಧಿ 3 ವರ್ಷವಾಗಿರುತ್ತದೆ. ನೀವು ಆರಿಸಿಕೊಳ್ಳುವ ಯಾವುದೇ ಫಂಡ್ ದೀರ್ಘಾವಧಿ ಹೂಡಿಕೆ ಉದ್ದೇಶ ಹೊಂದಿರಬೇಕು. 2. ಆ ನಿರ್ದಿಷ್ಟ ಯೋಜನೆಯ “ಘೋಷವಾಕ್ಯ” ಅಥವಾ ಉದ್ದೇಶದ ಬಗ್ಗೆ ತಿಳಿಯಬೇಕು. ಮಲ್ಟಿ- ಕ್ಯಾಪ್ ಪೋರ್ಟ್​​ಫೋಲಿಯೋ ಜತೆಗೆ ಲಾರ್ಜ್- ಕ್ಯಾಪ್ ದೀರ್ಘಾವಧಿಗೆ ಉತ್ತಮ ಆಯ್ಕೆ. 3. ಆ ಯೋಜನೆಯ ಹಿಂದಿನ ದೀರ್ಘಾವಧಿಯ ಪರ್ಫಾರ್ಮೆನ್ಸ್ (ರಿಟರ್ನ್ಸ್) ಹೇಗಿದೆ ಎಂಬುದನ್ನು ಗಮನಿಸಿ, ಆ ನಂತರ ಆರಿಸಿಕೊಳ್ಳಿ. 4. ಖರ್ಚಿನ ಪ್ರಮಾಣವನ್ನು (ಎಕ್ಸ್​ಪೆನ್ಸ್ ರೇಷಿಯೋಸ್) ಹೋಲಿಕೆ ಮಾಡಿ. 5. ನೀವಾಗಿಯೇ ಹೂಡಿಕೆ ಮಾಡುತ್ತಿದ್ದಲ್ಲಿ ನೇರ ಆಯ್ಕೆಗೆ (ಡೈರೆಕ್ಟ್ ಆಪ್ಷನ್) ಹೋಗಿ. ಒಂದು ವೇಳೆ ಸಲಹೆಗಾರರ ಮೂಲಕ ಹೂಡುತ್ತಿದ್ದಲ್ಲಿ ಫೀ- ಓನ್ಲಿ ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರ ಬಳಿ ತೆರಳಿ. ಅಂಥವರು ಯಾವುದೇ ಪೂರ್ವಗ್ರಹ ಇಲ್ಲದ ಶಿಫಾರಸು ಮಾಡಲು ಸಾಧ್ಯವಿರುತ್ತದೆ.

ಮೊದಲ ಬಾರಿಯ ಹೂಡಿಕೆದಾರರಿಗೆ ಒಂದು ವೇಳೆ ಮೊದಲ ಬಾರಿಯ ಹೂಡಿಕೆದಾರರಾಗಿದ್ದರೆ, ಹೋದ ವರ್ಷ ಈಕ್ವಿಟಿ ಮಾರ್ಕೆಟ್ ಒಳ್ಳೆ ರಿಟರ್ನ್ಸ್ ಕೊಟ್ಟಿದೆ ಎಂಬ ಕಾರಣಕ್ಕೆ ಇಎಲ್​ಎಸ್​ಎಸ್ ಆಯ್ಕೆ ಮಾಡಿಕೊಳ್ಳುವುದು ತಪ್ಪು ಎನ್ನುತ್ತಾರೆ ವಿಶ್ಲೇಷಕರು. ನಿರ್ದಿಷ್ಟವಾದ ಅಸೆಟ್ ಕ್ಲಾಸ್ ಅಲ್ಪಾವಧಿಯಲ್ಲಿ ಎಷ್ಟು ರಿಟರ್ನ್ಸ್ ಕೊಟ್ಟಿದೆ ಅಂತಷ್ಟೇ ನೋಡುವುದು ತಪ್ಪು ಎಂಬುದನ್ನು ಸಹ ಸೇರಿಸುತ್ತಾರೆ.

ನೀವು ಹೂಡಿಕೆ ಮಾಡಬೇಕಾ? ಹೂಡಿಕೆ ಮಾಡುವುದಕ್ಕೆ ಮುನ್ನ ಆ ಫಂಡ್​ನ ಶೈಲಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಒಂದೊಂದು ಇಎಲ್​ಎಸ್​ಎಸ್ ಒಂದೊಂದು ಮಾರುಕಟ್ಟೆ ಬಂಡವಾಳ ಹೊಂದಿರುತ್ತದೆ. ಇನ್ನು ಅವುಗಳ ಹೂಡಿಕೆ ಶೈಲಿ ಕೂಡ ಭಿನ್ನವಾಗಿದ್ದು ಮತ್ತು ಒಂದೇ ಥರ ಇರುವುದಿಲ್ಲ. ಇತರ ಈಕ್ವಿಟಿ ಫಂಡ್​ಗಳನ್ನು ಹೋಲಿಸಿ ನೋಡಿದರೆ, ನೀವು ಆರಿಸಿಕೊಳ್ಳುವ ಫಂಡ್ ವ್ಯಾಲ್ಯೂ ಅಥವಾ ಗ್ರೋಥ್ ಅಥವಾ ಫೋಕಸ್ಡ್ ಈ ಪೈಕಿ ಯಾವುದು ಅಂತ ತಿಳಿಯಿರಿ. ಅದು ಲಾರ್ಜ್ ಕ್ಯಾಪ್ ಆಧಾರವಾಗಿದೆಯೋ ಅಥವಾ ಆಕ್ರಮಣಕಾರಿ ಮಿಡ್​ಕ್ಯಾಪ್ ಹೂಡಿಕೆಯದ್ದೋ ಎಂಬುದು ಹೂಡಿಕೆಗೆ ಮುಂಚೆ ತಿಳಿಯಬೇಕು. ಈ ಮೂಲಕ ಆ ಫಂಡ್​ನಲ್ಲಿರುವ ಅಪಾಯವನ್ನು ನಿರ್ವಹಿಸುವ ಸಾಮರ್ಥ್ಯ ಹೂಡಿಕೆದಾರರಾದ ನಿಮ್ಮಲ್ಲಿ ಇದೆಯಾ ಎಂದು ಗೊತ್ತಾಗುತ್ತದೆ.

ಮತ್ತೊಬ್ಬ ವಿಶ್ಲೇಷಕರು ಹೇಳುವಂತೆ, ಆರ್ಥಿಕ ಗುರಿ ಏನು ಎಂಬ ಬಗ್ಗೆ ಯಾವಾಗಲೂ ಸ್ಪಷ್ಟತೆ ಇದ್ದು, ಹೂಡಿಕೆ ಮಾಡಬೇಕು. ಇದನ್ನೇ ಮುಂದುವರಿಸಿ ಹೇಳುವ ಹಣಕಾಸು ತಜ್ಞರು, ಮೊದಲಿಗೆ ನಿಮ್ಮ ಆರ್ಥಿಕ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಿ. ಆ ನಂತರ ಅದರಲ್ಲಿ ತೆರಿಗೆ ಉಳಿತಾಯದ ಇನ್​ಸ್ಟ್ರುಮೆಂಟ್ಸ್ ಕಂಡುಬಂದಲ್ಲಿ ಆರಿಸಿಕೊಳ್ಳಿ. ಆದರೆ ಯಾವಾಗಲೂ ನಿಮ್ಮ ಆಲೋಚನೆ ವಿಶಾಲ ವ್ಯಾಪ್ತಿಯಲ್ಲಿ ಇರಲಿ ಎನ್ನುತ್ತಾರೆ.

ಇದನ್ನೂ ಓದಿ: Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?

(ELSS Mutual Fund: Plan your tax savings at the beginning of the financial year.)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ