Petrol Price Today: ಏಪ್ರಿಲ್ 8ರಂದು ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ!
Petrol Diesel Price Today in Bengaluru: ಏಪ್ರಿಲ್ 8ನೇ ತಾರೀಕಿನಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ವಿವಿಧ ನಗರದಲ್ಲಿ ಇಂಧನ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಏಪ್ರಿಲ್ ತಿಂಗಳ ಪ್ರಾರಂಭದಿಂದ ಇಂದಿನವರೆಗೆ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸತತವಾಗಿ 9ನೇ ದಿನವೂ ಇಂಧನ ದರ ಬದಲಾಗಿಲ್ಲ. ಕಚ್ಚಾ ತೈಲ ಅಂತಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 63 ಡಾಲರ್ಗೆ ಕುಸಿದಿದೆ. ಇದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಯಬಹುದು ಎಂಬ ನಿರೀಕ್ಷೆಯಿದೆ. ಇದಕ್ಕೂ ಮೊದಲು ಮಾರ್ಚ್ ತಿಂಗಳಿನಲ್ಲಿ ಪೆಟ್ರೋಲ್ಮತ್ತು ಡೀಸೆಲ್ ದರವನ್ನು ಮೂರು ಬಾರಿ ಕಡಿತಗೊಳಿಸಲಾಗಿತ್ತು. ತದನಂತರ ಇಂಧನ ದರ ಇಳಿಯಲೇ ಇಲ್ಲ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.59 ರೂಪಾಯಿ ಹಾಗೂ ಪ್ರತಿಲೀಟರ್ ಡೀಸೆಲ್ ದರ 85.75 ರೂಪಾಯಿ ಇದೆ.
ಮಾರ್ಚ್ ತಿಂಗಳಿನಲ್ಲಿ 61 ಪೈಸೆಯಷ್ಟು ಪೆಟ್ರೋಲ್ ದರ ಕುಸಿತ ಮಾರ್ಚ್ ತಿಂಗಳ 30ನೇ ತಾರೀಕಿನಂದು ಕೊನೆಯದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗಿತ್ತು. ಆಗ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 22 ಕುಸಿತ ಕಂಡಿತು. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ದರ 23 ಪೈಸೆ ಇಳಿಕೆಯಾಗಿತ್ತು. ಮಾರ್ಚ್ನಲ್ಲಿ ಮೂರು ಸಲ ಇಂಧನ ದರ ಕುಸಿತ ಕಂಡಿದ್ದು, ಪೆಟ್ರೋಲ್ನಲ್ಲಿ ಒಟ್ಟೂ 61 ಪೈಸೆ ಹಾಗೂ ಡೀಸೆಲ್ ಒಟ್ಟೂ 60 ಪೈಸೆ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ ಕಂಡಿರುವುದರಿಂದ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು.
ಕಚ್ಚಾ ತೈಲ ದರ ಬ್ಯಾರೆಲ್ಗೆ 71 ಡಾಲರ್ನಿಂದ 63 ಡಾಲರ್ಗೆ ಕುಸಿದಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 16 ಬಾರಿ ಏರಿಕೆ ಕಂಡಿದೆ. ದರ ಏರಿಕೆಯಿಂದಾಗಿ ಇಂಧನ ಗರಿಷ್ಠ ಮಟ್ಟ ತಲುಪಿದೆ. ಕೆಲವು ನಗರಗಳಲ್ಲಿ ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು ಶತಕ ಬಾರಿಸಿದೆ.
9 ದಿನಗಳಿಂದಲೂ ಪೆಟ್ರೋಲ್, ಡೀಸೆಲ್ ದರ ಸ್ಥಿರ ದೆಹಲಿಯಲ್ಲಿ ಸತತ 9 ದಿನಗಳವರೆಗೆ ಪ್ರತಿ ಲೀಟರ್ ಪೆಟ್ರೋಲ್ ದರ 90.65 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು ಗ್ರಾಹಕರು 96.98 ರೂಪಾಯಿ ಕೊಟ್ಟು ಕೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 90.77 ರೂಪಾಯಿ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.58 ರೂಪಾಯಿ ಇದೆ.
ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್-ಡೀಸೆಲ್ ದರ ಇಲ್ಲಿಯವರೆಗೆ ಮಾರ್ಚ್ ತಿಂಗಳಿನಲ್ಲಿ ಒಟ್ಟು ಮೂರು ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಆದರೆ ಅದಕ್ಕೂ ಮೊದಲು ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್ ದರವನ್ನು 16 ಬಾರಿ ಹೆಚ್ಚಿಸಲಾಗಿದೆ. ಜೊತೆಗೆ ಕಳೆದ ಜನವರಿ ತಿಂಗಳಿನಲ್ಲಿ ಇಂಧನ ದರವನ್ನು 10 ಬಾರಿ ಹೆಚ್ಚಿಸಲಾಗಿತ್ತು. ಒಟ್ಟು ಇಲ್ಲಿಯವರೆಗೆ ಪೆಟ್ರೋಲ್, ಡೀಸೆಲ್ ದರವನ್ನು 26 ದಿನ ಹೆಚ್ಚಿಸಲಾಗಿದೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/diesel-price-today.html
(Petrol Price Today in Delhi Mumbai Chennai and Bangalore Diesel price on 8th April 2021)
Published On - 9:14 am, Thu, 8 April 21