AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜತೆ ರಿಯಾಲ್- ರೂಪಾಯಿ ಇಂಧನ ವಹಿವಾಟು ಪುನರಾರಂಭಕ್ಕೆ ಇರಾನ್ ಆಫರ್

ಭಾರತದ ಇಂಧನ ಅಗತ್ಯ ಪೂರೈಕೆಗೆ ನೆರವಾಗುವ ಉದ್ದೇಶದಿಂದ ಇರಾನ್- ಭಾರತ ಮಧ್ಯೆ ರಿಯಾಲ್- ರೂಪಾಯಿ ವಹಿವಾಟು ಆರಂಭಕ್ಕೆ ಆಫರ್ ನೀಡಲಾಗಿದೆ.

ಭಾರತದ ಜತೆ ರಿಯಾಲ್- ರೂಪಾಯಿ ಇಂಧನ ವಹಿವಾಟು ಪುನರಾರಂಭಕ್ಕೆ ಇರಾನ್ ಆಫರ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 19, 2022 | 4:28 PM

Share

ಭಾರತದ ಇಂಧನ (Energy) ಅಗತ್ಯಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇರಾನ್​ನಿಂದ ಆಫರ್​ ನೀಡಲಾಗಿದೆ. ಅದರ ಪ್ರಕಾರ, ಈ ಹಿಂದೆ ಇದ್ದ ರೂಪಾಯಿ- ರಿಯಾಲ್ ವಹಿವಾಟನ್ನು ಮತ್ತೆ ಆರಂಭಿಸುವುದಕ್ಕೆ ಮುಂದಾಗಿದೆ. ಭಾರತಕ್ಕೆ ಇರಾನ್​ನ ರಾಯಭಾರಿ ಆಗಿರುವ ಅಲಿ ಚೆಗೆನಿ ಈ ಬಗ್ಗೆ ಹೇಳಿದ್ದಾರೆ. ಎರಡೂ ದೇಶಗಳು ರೂಪಾಯಿ- ರಿಯಾಲ್ ವಹಿವಾಟು ಮತ್ತೆ ಆರಂಭಗೊಂಡರೆ ದ್ವಿಪಕ್ಷೀಯ ವಹಿವಾಟು 3000 ಕೋಟಿ ಅಮೆರಿಕನ್ ಡಾಲರ್ ತಲುಪಬಹುದು ಎಂಬ ಅಂದಾಜಿದೆ. ಭಾರತಕ್ಕೆ ಇರಾನ್ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರ ದೇಶ. ಆದರೆ ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಅಣ್ವಸ್ತ್ರ ಒಪ್ಪಂದವನ್ನು ಹಿಂಪಡೆದು, ಇರಾನ್​ ಮೇಲೆ ತೈಲ ರಫ್ತಿಗೆ ಮತ್ತೆ ನಿರ್ಬಂಧ ಹೇರಿದ ಮೇಲೆ ಭಾರತವು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕಾಯಿತು.

“ಭಾರತದ ಇಂಧನ ಭದ್ರತೆ ಅಗತ್ಯ ಪೂರೈಸಲು ಇರಾನ್ ಸಿದ್ಧವಾಗಿದ್ದು, ತೈಲ ಹಾಗೂ ಅನಿಲ ರಫ್ತಿಗೆ ರೂಪಾಯಿ- ರಿಯಾಲ್ ವಹಿವಾಟಿಗೆ ಸಿದ್ಧವಿದೆ,” ಎಂದು ಚೆಂಗೆನಿ ಹೇಳಿರುವುದನ್ನು ಉದಾಹರಿಸಿ, ಎಂವಿಐಆರ್​ಡಿಸಿ ವಿಶ್ವ ವಾಣಿಜ್ಯ ಕೇಂದ್ರ ಹೇಳಿಕೆ ನೀಡಿದೆ. ರೂಪಾಯಿ-ರಿಯಾಲ್ ವಹಿವಾಟು ಎರಡೂ ದೇಶಗಳ ಕಂಪೆನಿಗಳಿಗೆ ನೇರವಾಗಿ ವ್ಯವಹರಿಸಲು ಪರಸ್ಪರ ಸಹಾಯ ಮಾಡುತ್ತದೆ. ಥರ್ಡ್ ಪಾರ್ಟಿ ಮಧ್ಯವರ್ತಿ ವೆಚ್ಚವನ್ನು ತಡೆಯಲು ನೆರವಾಗುತ್ತದೆ ಎನ್ನಲಾಗಿದೆ. ಈ ಹಿಂದೆ ಭಾರತ ಹಾಗೂ ಇರಾನ್ ಮಧ್ಯೆ ವಸ್ತು ವಿನಿಮಯ ಪದ್ಧತಿ ಇತ್ತು. ಭಾರತದ ತೈಲ ರಿಫೈನರಿಗಳು ಸ್ಥಳೀಯ ಇರಾನಿಯನ್​ ಬ್ಯಾಂಕ್​ಗಳಿಗೆ ರೂಪಾಯಿಗಳಲ್ಲಿ ಪಾವತಿಸಲಾಗುತ್ತಿತ್ತು. ಆ ಹಣವನ್ನು ಬಳಸಿಕೊಂಡು, ಭಾರತದಿಂದ ಬೇಕಾದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

ಇದರಿಂದಾಗಿ ಭಾರತಕ್ಕೆ ಇರಾನ್​ ದೇಶವು ಕಚ್ಚಾ ತೈಲ ಆಮದಿಗೆ ಪ್ರಮುಖ ಮಾರುಕಟ್ಟೆ ಆಯಿತು. ಅದಕ್ಕೆ ಮುನ್ನ ಸೌದಿ ಅರೇಬಿಯಾ ಅತಿ ದೊಡ್ಡ ಪ್ರಮಾಣದ ಪೂರೈಕೆದಾರ ದೇಶವಾಗಿತ್ತು. ಆದರೆ ಅಮೆರಿಕದಿಂದ ಮತ್ತೆ ನಿರ್ಬಂಧಗಳನ್ನು ಮತ್ತೆ ಹೇರಿದ ಮೇಲೆ, ಹಣಕಾಸು ವರ್ಷ 2019ರಲ್ಲಿ 1700 ಕೋಟಿ ಅಮೆರಿಕನ್​ ಡಾಲರ್​ನಷ್ಟು ಇದ್ದದ್ದು ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಜನವರಿ ಮಧ್ಯೆ 200 ಕೋಟಿ ಅಮೆರಿಕನ್​ ಡಾಲರ್​ಗೆ ಇಳಿದಿಧೆ, ಇನ್ನು ಭಾರತಕ್ಕೆ ಅನಿಲ ಪೂರೈಸುವ ಇರಾನ್-ಪಾಕಿಸ್ತಾನ-ಭಾರತ ಮಾರ್ಗದ ಪೈಪ್​ಲೈನ್ ಯೋಜನೆಯನ್ನು ಮತ್ತೆ ಆರಂಭಿಸುವುದಕ್ಕಾಗಿ ಭಾರತದ ಜತೆಗೆ ಕೆಲಸ ಮಾಡುವುದಕ್ಕೆ ಸಿದ್ಧ ಎಂದಿದೆ.

ಯೂರಿಯಾ, ಪೆಟ್ರೋಕೆಮಿಕಲ್ಸ್, ಸಾವಯವ ಹಣ್ಣುಗಳು ಸೇರಿದಂತೆ ಇತರ ಉತ್ಪನ್ನಗಳನ್ನು ಭಾರತವು ಇರಾನ್​ನಿಂದ ಆಮದು ಮಾಡಿಕೊಳ್ಳುತ್ತದೆ. ಅದೇ ರೀತಿ ಕೃಷಿ ಉತ್ಪನ್ನಗಳು, ಫಾರ್ಮಾಸ್ಯುಟಿಕಲ್ಸ್, ಕಬ್ಬಿಣ ಮತ್ತ ಉಕ್ಕು ಹಾಗೂ ಆಟೋಮೊಬೈಲ್ಸ್, ಸಿಮೆಂಟ್​ ಮತ್ತಿತರ ವಸ್ತುಗಳನ್ನು ಭಾರತದಿಂದ ಇರಾನ್​ ಆಮದು ಮಾಡಿಕೊಳ್ಳುತ್ತದೆ. ಉದ್ಯಮಿಗಳ ವಿನಿಮಯ, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಇರಾನ್​ನಿಂದ ಕಾಗದರಹಿತ ಎಲೆಕ್ಟ್ರಾನಿಕ್​ ಮಲ್ಟಿಪಲ್ ವೀಸಾ ವಿತರಣೆಯನ್ನು ಪರಿಚಯಿಸಿದೆ.

ಇದಕ್ಕೂ ಮುಂಚಿನ ಮಾಧ್ಯಮ ವರದಿಯಂತೆ, ರಷ್ಯಾದಿಂದ ಭಾರತಕ್ಕೆ ಶೇ 25ರ ತನಕ ರಿಯಾಯಿತಿ ನೀಡುವ ಬಗ್ಗೆ ಈ ವಾರದ ಆರಂಭದಲ್ಲಿ ರಷ್ಯಾ ಹೇಳಿದೆ. ಭಾರತವು ತನ್ನ ಒಟ್ಟಾರೆ ತೈಲ ಅಗತ್ಯಗಳ ಪೈಕಿ ಶೇ 85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ರಷ್ಯಾ ಎರಡನೇ ಅತಿದೊಡ್ಡ ತೈಲ ಉತ್ಪಾದಕ ದೇಶ. ಜಾಗತಿಕ ಪೂರೈಕೆಯ ಶೇ 14ರಷ್ಟನ್ನು ಒದಗಿಸುತ್ತದೆ.

ಇದನ್ನೂ ಓದಿ: ರಷ್ಯಾ ಆರ್ಥಿಕತೆಯ ನರನಾಡಿಯಾಗಿರುವ ತೈಲ ಮತ್ತು ಅನಿಲಗಳ ಆಮದಿನ ಮೇಲೆ ಜೋ ಬೈಡೆನ್ ನಿಷೇಧ ಘೋಷಿಸಿದರು!

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ