ರಷ್ಯಾ ಆರ್ಥಿಕತೆಯ ನರನಾಡಿಯಾಗಿರುವ ತೈಲ ಮತ್ತು ಅನಿಲಗಳ ಆಮದಿನ ಮೇಲೆ ಜೋ ಬೈಡೆನ್ ನಿಷೇಧ ಘೋಷಿಸಿದರು!

ಲಭ್ಯವಾಗಿರುವ ಮಾಹಿತಿ ಪ್ರಕಾರ ಯುನೈಟೆಡ್ ಕಿಂಗ್ ಡಮ್ ಸಹ ಅಮೇರಿಕಾದ ಹಾದಿ ತುಳಿದು ರಷ್ಯನ್ ತೈಲದ ಆಮದಿನ ಮೇಲೆ ನಿಷೇಧ ಹೇರುವ ಘೋಷಣೆಯನ್ನು ಮಂಗಳವಾರವೇ ಮಾಡಲಿದೆ.

ರಷ್ಯಾ ಆರ್ಥಿಕತೆಯ ನರನಾಡಿಯಾಗಿರುವ ತೈಲ ಮತ್ತು ಅನಿಲಗಳ ಆಮದಿನ ಮೇಲೆ ಜೋ ಬೈಡೆನ್ ನಿಷೇಧ ಘೋಷಿಸಿದರು!
ಜೋ ಬೈಡನ್​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 11:52 PM

ವಾಷಿಂಗ್ಟನ್: ಇದನ್ನು ನಿರೀಕ್ಷಿಸಲಾಗಿತ್ತು. ಅಂತರರಾಷ್ಟ್ರೀಯ ಸಮುದಾಯದ (International Communities) ಕಡು ವಿರೋಧ ನಡುವೆಯೂ ಉಕ್ರೇನ್ ಮೇಲೆ ಯುದ್ಧ ಸಾರಿ ಅ ದೇಶದ ನಗರಗಳನ್ನು ಧ್ವಂಸಗೊಳಿಸುತ್ತಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರಿಗೆ ಯುಎಸ್ ಒಂದು ಬಲವಾದ ಪೆಟ್ಟು ನೀಡಲಿದೆ ಎಂಬ ನಿರೀಕ್ಷೆ ಮಂಗಳವಾರ ಸಾಕಾರಗೊಂಡಿದೆ. ರಷ್ಯಾದ ಬೃಹತ್ ಆದಾಯ ಮೂಲವಾಗಿರುವ ತೈಲ ಮತ್ತು ಅನಿಲದ ಆಮದುಗಳ ಮೇಲೆ ನಿಷೇಧ ಹೇರಿರುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.

‘ರಷ್ಯಾ ಆರ್ಥಿಕತೆ ಮುಖ್ಯ ನರನಾಡಿ ಎನಿಸಿಕೊಂಡಿರುವ ಅಲ್ಲಿನ ತೈಲ ಮತ್ತು ಅನಿಲ ಇಂಧನದ ಆಮದುಗಳು ಮೇಲೆ ನಿಷೇಧ ಹೇರಿರುವ ಘೋಷಣೆಯನ್ನು ನಾನಿವತ್ತು ಮಾಡುತ್ತಿದ್ದೇನೆ. ಅದರರ್ಥ ಅಮೇರಿಕದ ಬಂದರುಗಳಲ್ಲಿ ರಷ್ಯಾದ ತೈಲ ಇನ್ನು ಮುಂದೆ ಬರುವಂತಿಲ್ಲ, ಪುಟಿನ್ ಅವರ ಯುದ್ಧೋನ್ಮಾದತೆಗೆ ಬಲವಾದ ಹೊಡೆತವನ್ನು ಯುಎಸ್ ಜನ ಹೀಗೆ ನೀಡಿದ್ದಾರೆ,’ ಎಂದು ಬೈಡೆನ್ ಹೇಳಿದರು.

ಯುಎಸ್ ವಿಧಿಸಿರುವ ನಿಷೇಧವು ರಷ್ಯಾದಿಂದ ಅಮದಾಗುವ ಕಲ್ಲಿದ್ದಿಲಿಗೂ ಅನ್ವಯವಾಗುತ್ತದೆ ಎಂದು ಶ್ವೇತ ಭವನದ ಮೂಲಗಳು ಬೈಡೆನ್ ಅವರ ಘೋಷಣೆಗೆ ಮೊದಲೇ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದವು. ರಷ್ಯಾದ ಅತಿಕ್ರಮಣ ನಂತರ ತೈಲವನ್ನು ಬಿಡುಗಡೆ ಮಾಡಿ ಕೊರತೆಯನ್ನು ನೀಗಿಸುವ ಅಮೆರಿಕಾದ ಪ್ರಯತ್ನಗಳ ಹೊರತಾಗಿಯೂ ಅನಿಲದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿವೆ. ಯುರೋಪಿನ ಮಿತ್ರರಾಷ್ಟ್ರಗಳ ಜೊತೆ ನಿಕಟ ಮಾತುಕತೆ ನಡೆಸಿದ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬೈಡೆನ್ ಹೇಳಿದರು.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಯುನೈಟೆಡ್ ಕಿಂಗ್ ಡಮ್ ಸಹ ಅಮೇರಿಕಾದ ಹಾದಿ ತುಳಿದು ರಷ್ಯನ್ ತೈಲದ ಆಮದಿನ ಮೇಲೆ ನಿಷೇಧ ಹೇರುವ ಘೋಷಣೆಯನ್ನು ಮಂಗಳವಾರವೇ ಮಾಡಲಿದೆ. ರಷ್ಯಾದ ಇಂಧನ ಮೂಲಗಳ ಮೇಲೆ ಅಪಾರವಾಗಿ ಆತುಕೊಂಡಿರುವ ಯುರೋಪಿಯನ್ ಯೂನಿಯನ್ ನ ಅಧಿಕಾರಿಯೊಬ್ಬರು, ಯುಎಸ್ ಮತ್ತು ಯುಕೆಯಂತೆ ಈಯು ಸಹ ರಷ್ಯಾದ ತೈಲ ಮತ್ತು ಅನಿಲಗಳ ಆಮದಿನ ಮೇಲೆ ನಿಷೇಧ ಹೇರುವುದಾಗಿ ಹೇಳಿದರು.

ಅಮೆರಿಕದ ಇಂಧನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅಮೆರಿಕದ ತೈಲ ಆಮದುಗಳ ಪ್ರಮಾಣದಲ್ಲಿ ರಷ್ಯಾದ ತೈಲದ ಕಾಣಿಕೆ ಶೇಕಡಾ 5 ಕ್ಕಿಂತ ಕಡಿಮೆ ಇತ್ತು. ಅದರರ್ಥ ಯುರೋಪಿಯನ್ ಮಿತ್ರರಾಷ್ಟ್ರಗಳ ಹಾಗೆ ಯುಎಸ್ ತೈಲದ ಅಗತ್ಯಗಳಿಗಾಗಿ ರಷ್ಯಾದ ಮೇಲೆ ಅವಲಂಬಿತವಾಗಿಲ್ಲ. ಅಷ್ಟಾಗಿಯೂ ರಷ್ಯನ್ ತೈಲದ ಮೇಲೆ ಹೇರಿರುವ ನಿಷೇಧವು ಅಮೆರಿಕಾನಲ್ಲಿ ಅದರ ಬೆಲೆಗಳು ಹಿಂದೆಂದೂ ಕಾಣದ ಗರಿಷ್ಠ ಮಟ್ಟ ತಲುಪಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

ರಷ್ಯಾದ ಸೇನೆಗಳು ಉಕ್ರೇನ್ ಮೇಲೆ ದಾಳಿ ನಡೆಸಲಾರಂಭಿಸಿದ ಕಳೆದ 13 ದಿನಗಳಿಂದಲೂ ಉಕ್ರೇನಿನ ನಾಯಕರು ರಷ್ಯಾದ ತೈಲ ಮತ್ತು ಅನಿಲಗಳ ಅಮದಿನ ಮೇಲೆ ನಿಷೇಧ ಹೇರುವಂತೆ ವಾಷಿಂಗ್ಟನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಆಗ್ರಹಿಸುತ್ತಿದ್ದರು. ಒಂದು ಪಕ್ಷ ಬೈಡೆನ್ ಸರ್ಕಾರವು ಕ್ರಮ ಜರುಗಿಸಲು ವಿಫಲಾವಾದರೆ ಉಕ್ರೇನಿನ ಎರಡೂ ಪಕ್ಷಗಳ ನಾಯಕರು ಇತ್ತೀಚಿನ ದಿನಗಳಲ್ಲಿ ರಷ್ಯಾದ ತೈಲದ ಮೇಲೆ ನಿಷೇಧ ವಿಧಿಸಲು ಶಾಸನವೊಂದನ್ನು ರೂಪಿಸುವಲ್ಲಿ ಕಾರ್ಯಶೀಲರಾಗಿದ್ದರು.

ಬೈಡೆನ್ ಅವರ ಘೋಷಣೆಯ ಹೊರತಾಗಿಯೂ ಡೆಮೊಕ್ರಾಟಿಕ್ ಪಕ್ಷದ ಸದಸ್ಯರು ರಷ್ಯಾದ ತೈಲ ಮತ್ತು ಅನಿಲಗಳ ಅಮದಿನ ಮೇಲೆ ನಿಷೇಧ ಹೇರುವ ಮಸೂದೆ ಪರ ವೋಟು ಮಾಡಲು ಸಿದ್ಧರಿರುವ ಬಗ್ಗೆ ಡೆಮೊಕ್ರಾಟಿಕ್ ಪಕ್ಷದ ಸದಸ್ಯರೊಬ್ಬರು ಹೇಳಿದ್ದಾರೆಂದು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಮಂಗಳವಾರ ಬೆಳಗ್ಗೆ ಸದನಕ್ಕೆ ತಿಳಿಸಿದರು. ಜನ ಪ್ರತಿನಿಧಿಗಳು ಶಾಸನವನ್ನು ರೂಪಿಸುತ್ತಿರುವುದರಿಂದ ಕೆಲ ದಿನಗಳಲ್ಲಿ ನಿಷೇಧದ ಘೋಷಣೆಯಾಗಲಿದೆ ಎಂದು ಶ್ವೇತ ಭವನ ತಮಗೆ ತಿಳಿಸಿರುವುದಾಗಿ ಸ್ಪೀಕರ್ ಹೇಳಿದರು.

ಇಂಧನಗಳ ಬೆಲೆಗಳ ಗಗನಕ್ಕೇರುವ ಭೀತಿಯಿಂದ ಅಮೇರಿಕ ಸರ್ಕಾರವು ಆರಂಭದಲ್ಲಿ ರಷ್ಯಾದ ಇಂಧನ ಆಮದುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿತ್ತು. ಆದರೆ ಉನ್ನತಮಟ್ಟದ ಅಧಿಕಾರಿಗಳು ನಿಷೇಧವನ್ನು ವಿಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸೋಮವಾರ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಅವರು, ‘ಆಂತರಿಕವಾಗಿ ಮತ್ತು ಯುರೋಪ್ ಹಾಗೂ ವಿಶ್ವದ ನಮ್ಮ ಇತರ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಚರ್ಚೆಗಳು ನಡೆಯುತ್ತಿವೆ,’ ಎಂದು ಹೇಳಿದ್ದಾರೆ.

ರಷ್ಯಾ ಉಕ್ರೇನಿನ ಮೇಲೆ ಆಕ್ರಮಣ ಆರಂಭಿಸಿದಾಗಿನಿಂದ ಯುಎಸ್ ಮತ್ತು ಅದರ ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಒಂದಾದ ನಂತರ ಮತ್ತೊಂದು ನಿರ್ಭಂದಗಳನ್ನು ಹೇರುತ್ತಲೇ ಇವೆ. ರಷ್ಯಾದ ಆರ್ಥಿಕ ವ್ಯವಸ್ಥೆ ಮತ್ತು ಅಲ್ಲಿನ ಕುಬೇರರಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡುವುದು ಅವುಗಳ ಉದ್ದೇಶವಾಗಿದೆ.

ಇದನ್ನೂ ಓದಿ:   ರಷ್ಯಾ ನಿರ್ಮಿತ ಯುದ್ಧ ವಿಮಾನಗಳನ್ನು ಉಕ್ರೇನ್​ಗೆ ಕಳಿಸಲು ವ್ಯವಸ್ಥೆ ಮಾಡಿ; ಅಧ್ಯಕ್ಷ ಜೋ ಬೈಡನ್​​ಗೆ ಯುಎಸ್​ ಜನಪ್ರತಿನಿಧಿಗಳ ಒತ್ತಾಯ​

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ