ರಷ್ಯಾ ನಿರ್ಮಿತ ಯುದ್ಧ ವಿಮಾನಗಳನ್ನು ಉಕ್ರೇನ್​ಗೆ ಕಳಿಸಲು ವ್ಯವಸ್ಥೆ ಮಾಡಿ; ಅಧ್ಯಕ್ಷ ಜೋ ಬೈಡನ್​​ಗೆ ಯುಎಸ್​ ಜನಪ್ರತಿನಿಧಿಗಳ ಒತ್ತಾಯ​

ಪೂರ್ವ ಯುರೋಪ್​ನ ಬಹುತೇಕ ದೇಶಗಳ ವಾಯುಪಡೆಗಳಲ್ಲಿ ಇರುವುದು ರಷ್ಯಾ ನಿರ್ಮಿತ ಯುದ್ಧವಿಮಾನಗಳು. ಅವುಗಳನ್ನು ಈಗ ಉಕ್ರೇನ್​ಗೆ ವರ್ಗಾಯಿಸಿದರೆ ಆ ದೇಶಕ್ಕೆ ತುಂಬ ಸಹಾಯವಾಗುತ್ತದೆ ಎಂದು ಯುಎಸ್​ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.

ರಷ್ಯಾ ನಿರ್ಮಿತ ಯುದ್ಧ ವಿಮಾನಗಳನ್ನು ಉಕ್ರೇನ್​ಗೆ ಕಳಿಸಲು ವ್ಯವಸ್ಥೆ ಮಾಡಿ; ಅಧ್ಯಕ್ಷ ಜೋ ಬೈಡನ್​​ಗೆ ಯುಎಸ್​ ಜನಪ್ರತಿನಿಧಿಗಳ ಒತ್ತಾಯ​
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 08, 2022 | 1:45 PM

ಪೋಲ್ಯಾಂಡ್​ ಮತ್ತಿತರ ನ್ಯಾಟೋ ಒಕ್ಕೂಟದ ದೇಶಗಳು ಹಾಗೂ ಪೂರ್ವ ಯುರೋಪಿನ ರಾಷ್ಟ್ರಗಳ ಮೂಲಕ ಉಕ್ರೇನ್​​ಗೆ ಯುದ್ಧ ವಿಮಾನಗಳನ್ನು ಕಳಿಸಲು ವ್ಯವಸ್ಥೆ ಮಾಡಿ ಎಂದು ಯುಎಸ್​ ಜನಪ್ರತಿನಿಧಿಗಳು ಅಧ್ಯಕ್ಷ ಜೋ ಬೈಡನ್​​ರನ್ನು ಒತ್ತಾಯಿಸಿದ್ದಾರೆ.  ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ವೈಟ್​ ಹೌಸ್​, ಉಕ್ರೇನ್​ಗೆ ಫೈಟರ್​ ಏರ್​ಕ್ರಾಫ್ಟ್ ಟ್ರಾನ್ಸ್​ಫರ್​ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಅಲ್ಲಿಗೆ ಕಳಿಸಲು ಅಡ್ಡಿಯಾಗುವ ಸವಾಲುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.   

ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ  ಅವರು ಯುರೋಪಿಯನ್ ರಾಷ್ಟ್ರಗಳ ಜತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿ, ರಷ್ಯಾ ವಿರುದ್ಧ ಹೋರಾಟಕ್ಕೆ ನಮಗೂ ರಷ್ಯಾ ನಿರ್ಮಿತ ವಿಮಾನಗಳೇ ಸಿಗುವಂತೆ ಮಾಡಿ ಎಂದು ಹತಾಶ ಬೇಡಿಕೆ ಇಟ್ಟಿದ್ದರು. ಈ ವಿಡಿಯೋ ಕಾನ್ಫರೆನ್ಸ್​ನಲ್ಲಿ ಯುಎಸ್​ನ ಹಲವು ಪ್ರಮುಖ ಜನಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಉಕ್ರೇನ್​ ಅಧ್ಯಕ್ಷರ ಬೇಡಿಕೆಯ ಬೆನ್ನಲ್ಲೇ ಅವರು ತಮ್ಮ ಅಧ್ಯಕ್ಷರಿಗೆ ಒತ್ತಾಯ ಮಾಡುತ್ತಿದ್ದಾರೆ. ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​ಗೆ ಯುದ್ಧ ವಿಮಾನಗಳನ್ನು ಒದಗಿಸಲು ಒತ್ತಡ ತರುತ್ತಿದ್ದಾರೆ.

ಈ ಬಗ್ಗೆ ಯುಎಸ್​ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್​ಗೆ ಪತ್ರ ಬರೆದಿರುವ ಸೆನೆಟ್​ ಫಾರಿನ್​ ರಿಲೇಶನ್ಸ್​ ಕಮಿಟಿ ಅಧ್ಯಕ್ಷ ಬಾಬ್​ ಮೆನೆಂಡೆಜ್, ಪೂರ್ವ ಯುರೋಪ್​ನ ಬಹುತೇಕ ದೇಶಗಳ ವಾಯುಪಡೆಗಳಲ್ಲಿ ಇರುವುದು ರಷ್ಯಾ ನಿರ್ಮಿತ ಯುದ್ಧವಿಮಾನಗಳು. ಅವುಗಳನ್ನು ಈಗ ಉಕ್ರೇನ್​ಗೆ ವರ್ಗಾಯಿಸಿದರೆ ಆ ದೇಶಕ್ಕೆ ತುಂಬ ಸಹಾಯವಾಗುತ್ತದೆ. ಉಕ್ರೇನ್​ ಸೇನೆಯಲ್ಲಿರುವ ಪೈಲಟ್​ಗಳಿಗೆ ಹೆಚ್ಚುವರಿ ತರಬೇತಿ ಅಗತ್ಯವಿಲ್ಲದೆ, ಅವರು ವಿಮಾನ ಹಾರಿಸಬಹುದು ಎಂದು ಹೇಳಿದ್ದಾರೆ.

ಇದಕ್ಕೆ ವೈಟ್​ ಹೌಸ್​ನ ಮಾಧ್ಯಮ ಕಾರ್ಯದರ್ಶಿ ಜೆನ್​ ಪ್ಸಾಕಿ ಪ್ರತಿಕ್ರಿಯೆ ನೀಡಿದ್ದು, ವಿಮಾನಗಳನ್ನು ಉಕ್ರೇನ್​ಗೆ ಕಳಿಸಲು ನಮ್ಮ ತಕರಾರು ಏನೂ ಇಲ್ಲ. ಹಾಗೇ,  ರಷ್ಯಾ ನಿರ್ಮಿತ ವಿಮಾನಗಳನ್ನು ಉಕ್ರೇನ್​ಗೆ ನೀಡುವ ದೇಶಗಳಲ್ಲಿ ಯುಎಸ್​ ನಿರ್ಮಿತ ಯುದ್ಧ ವಿಮಾನಗಳನ್ನು ಕಳಿಸುವುದಕ್ಕೆ ಖಂಡಿತ ಒಪ್ಪಿಗೆ ಇದೆ.   ಆದರೆ ಹಾಗೇ, ಕಳಿಸುವುದು ಅಷ್ಟು ಸುಲಭವಲ್ಲ. ಈ ಬಗ್ಗೆ ಇನ್ನಷ್ಟು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.  ಇನ್ನು ಅಮೆರಿಕದಲ್ಲಿ ಡೆಮಾಕ್ರಟಿಕ್​ ಮತ್ತು ರಿಪಬ್ಲಿಕನ್​ ಎರಡೂ ಪಕ್ಷಗಳ ಜನಪ್ರತಿನಿಧಿಗಳು ಈ ಒತ್ತಾಯ ಮುಂದಿಡುತ್ತಿದ್ದಾರೆ. ಯುರೋಪಿಯನ್​ ರಾಷ್ಟ್ರಗಳು ಉಕ್ರೇನ್​ಗೆ ರಷ್ಯಾದ MiGs ವಿಮಾನಗಳನ್ನು ಕಳಿಸಲಿ, ಹೀಗೆ ತಮ್ಮ ಬಳಿ ಇರುವ ರಷ್ಯಾ ವಿಮಾನಗಳನ್ನು ಉಕ್ರೇನ್​ಗೆ ಕಳಿಸಿದ ರಾಷ್ಟ್ರಗಳಿಗೆ ವಾಷಿಂಗ್ಟನ್​,  ಯುಎಸ್​ನ F-16s ವಿಮಾನಗಳನ್ನು ತ್ವರಿತವಾಗಿ ಕಳಿಸಬೇಕು ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ

Published On - 1:44 pm, Tue, 8 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ