AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine war ರಷ್ಯಾ ಪಡೆ ಮುನ್ನುಗ್ಗುತ್ತಿದ್ದಂತೆ ತಾನಿರುವ ಜಾಗದ ಮಾಹಿತಿ ಹಂಚಿಕೊಂಡ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಬಂಕೋವಾ ಸ್ಟ್ರೀಟ್‌ನಲ್ಲಿದ್ದೇನೆ. ನಾನು ಅಡಗಿಕೊಂಡಿಲ್ಲ.ನಾನು ಯಾರಿಗೂ ಹೆದರುವುದಿಲ್ಲ. ನಮ್ಮ ಈ ದೇಶಭಕ್ತಿಯ ಯುದ್ಧವನ್ನು ಗೆಲ್ಲಬೇಕಿದೆ ಎಂದು ಅವರು ವಿಡಿಯೊದ ಜೊತೆಗೆ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Russia-Ukraine war ರಷ್ಯಾ ಪಡೆ ಮುನ್ನುಗ್ಗುತ್ತಿದ್ದಂತೆ ತಾನಿರುವ ಜಾಗದ ಮಾಹಿತಿ ಹಂಚಿಕೊಂಡ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ವೊಲೊಡಿಮಿರ್ ಝೆಲೆನ್ಸ್ಕಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Mar 08, 2022 | 1:46 PM

Share

ಕೀವ್: ರಷ್ಯಾದ (Russia) ಪಡೆಗಳು ರಾಜಧಾನಿ ಕೀವ್ (Kyiv) ಸನಿಹ ಬರುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy)  ಎರಡು ವಾರಗಳ ಹಿಂದೆ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ ಅವರು ಕೆಲಸ ಮಾಡುತ್ತಿರುವ ಸ್ಥಳದ ವಿವರಗಳನ್ನು ಸೋಮವಾರ (ಸ್ಥಳೀಯ ಕಾಲಮಾನ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಎಂಟು ನಿಮಿಷಗಳ ವಿಡಿಯೊದಲ್ಲಿ, ತಾನು ಝೆಲೆನ್ಸ್ಕಿ ಅವರು ಕೀವ್​​​ನಲ್ಲಿ ಉಳಿದುಕೊಂಡಿರುವುದಾಗಿ ಹೇಳಿದ್ದು ದೇಶವನ್ನು ರಕ್ಷಿಸಲು ತಮ್ಮ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. “ಬಂಕೋವಾ ಸ್ಟ್ರೀಟ್‌ನಲ್ಲಿದ್ದೇನೆ. ನಾನು ಅಡಗಿಕೊಂಡಿಲ್ಲ.ನಾನು ಯಾರಿಗೂ ಹೆದರುವುದಿಲ್ಲ. ನಮ್ಮ ಈ ದೇಶಭಕ್ತಿಯ ಯುದ್ಧವನ್ನು ಗೆಲ್ಲಬೇಕಿದೆ ಎಂದು ಅವರು ವಿಡಿಯೊದ ಜೊತೆಗೆ ಶೀರ್ಷಿಕೆಯಲ್ಲಿ ಬರೆದಿದ್ದಾರೆ.  ನಾವೆಲ್ಲರೂ ಯುದ್ಧಭೂಮಿಯಲ್ಲಿದ್ದೇವೆ. ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಅವರು ಇರಬೇಕಾದ ಸ್ಥಳದಲ್ಲಿದ್ದಾರೆ. ನಾನು ಕೀವ್​​​ನಲ್ಲಿದ್ದೇನೆ. ನನ್ನ ತಂಡ ನನ್ನೊಂದಿಗಿದೆ. ಪ್ರಾದೇಶಿಕ ರಕ್ಷಣೆ ನೆಲದ ಮೇಲೆ ಇದೆ. ಸೈನಿಕರು ಸ್ಥಾನಗಳಲ್ಲಿದ್ದಾರೆ. ವೈದ್ಯರು, ರಕ್ಷಕರು, ಸಾಗಣೆದಾರರು, ರಾಜತಾಂತ್ರಿಕರು, ಪತ್ರಕರ್ತರು.. ಎಲ್ಲರೂ. ನಾವೆಲ್ಲರೂ ಯುದ್ಧದಲ್ಲಿದ್ದೇವೆ. ನಾವೆಲ್ಲರೂ ನಮ್ಮ ಗೆಲುವಿಗೆ ಕೊಡುಗೆ ನೀಡುತ್ತೇವೆ, ಅದು ಖಂಡಿತವಾಗಿಯೂ ಸಾಧಿಸಲ್ಪಡುತ್ತದೆ, ”ಎಂದು ಉಕ್ರೇನ್ ಅಧ್ಯಕ್ಷರು ವಿಡಿಯೊದಲ್ಲಿ ಹೇಳಿದ್ದಾರೆ.  2018 ರಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ಕಾಮಿಡಿಯನ್ ಆಗಿದ್ದ ಝೆಲೆನ್ಸ್ಕಿ, ಕೀವ್​​​ನಲ್ಲಿ ರಾತ್ರಿಯ ಸಮಯದಲ್ಲಿಏನು ಕಾಣುತ್ತಿದೆ ಎಂಬುದನ್ನು ತೋರಿಸಲು ಕಿಟಕಿಯ ಹೊರಗೆ ಕ್ಯಾಮೆರಾವನ್ನು ತೋರಿಸಿದರು. ಅಲ್ಲಿ ಬೀದಿಯಲ್ಲಿ ಇರುವ ಐತಿಹಾಸಿಕ ಕಟ್ಟಡವಾದ ಗೊರೊಡೆಟ್ಸ್ಕಿ ಹೌಸ್ ಅನ್ನು ತೋರಿಸಿದರು. ವಿಡಿಯೊವನ್ನು ತನ್ನ ಅಧಿಕೃತ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಲಾಗಿದೆ.ಉಕ್ರೇನ್ ಅಧ್ಯಕ್ಷರು ತಮ್ಮ ಕುಟುಂಬದೊಂದಿಗೆ ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳ ನಡುವೆ ಈ ವಿಡಿಯೊ ಬಂದಿದೆ.

ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದವು. ಅಂದಿನಿಂದ, ಝೆಲೆನ್ಸ್ಕಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ವಿಡಿಯೊ ಸಂದೇಶಗಳನ್ನು ಪೋಸ್ಟ್ ಮಾಡುವ ಮೂಲಕ ರಷ್ಯಾದ ವಿರುದ್ಧ ಹೋರಾಡಲು ನಿವಾಸಿಗಳನ್ನು ಒಟ್ಟುಗೂಡಿಸಿದ್ದಾರೆ. ಈ ವಿಡಿಯೊಗಳ ಮೂಲಕ ಝೆಲೆನ್ಸ್ಕಿ ಅವರು ಇನ್ನೂ ಉಕ್ರೇನ್‌ನಿಂದಲೇ ಯುದ್ಧದಲ್ಲಿ ಹೋರಾಡುತ್ತಿದ್ದಾರೆ ಎಂದು ಉಕ್ರೇನಿಯನ್ನರಿಗೆ ಭರವಸೆ ನೀಡುತ್ತಿದ್ದಾರೆ.

ಮುಂಜಾನೆ ಉಕ್ರೇನ್‌ನ ಮಿಲಿಟರಿ ಗುಪ್ತಚರ ಪಡೆಗಳು ಖಾರ್ಕಿವ್ ಬಳಿ ರಷ್ಯಾದ ಜನರಲ್ ಅನ್ನು ಕೊಂದಿವೆ ಎಂದು ಹೇಳಿವೆ, ಆಕ್ರಮಣದಲ್ಲಿ ಸತ್ತ ಎರಡನೇ ರಷ್ಯಾದ ಹಿರಿಯ ಕಮಾಂಡರ್ ಇವರು.

13 ದಿನಗಳ ಯುದ್ಧದಲ್ಲಿ,ಉಕ್ರೇನಿಯನ್ ಪಡೆಗಳು 11,000 ಕ್ಕೂ ಹೆಚ್ಚು ರಷ್ಯಾದ ಸೈನಿಕರನ್ನು ಕೊಂದಿವೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಆದಾಗ್ಯೂ, ರಷ್ಯಾ ಸುಮಾರು 500 ಸೈನಿಕರನ್ನು ಕಳೆದುಕೊಂಡಿರುವುದನ್ನು ಖಚಿತಪಡಿಸಿದೆ. ಉಕ್ರೇನಿಯನ್ ಸಾವುನೋವುಗಳನ್ನು ಎರಡೂ ಕಡೆಯವರು ಬಹಿರಂಗಪಡಿಸಿಲ್ಲ.

ಏತನ್ಮಧ್ಯೆ, ಮುಂದಿನ ಕೆಲವು ದಿನಗಳಲ್ಲಿ ವರ್ಗಾಯಿಸಲು ಉಕ್ರೇನ್‌ಗೆ $ 723 ಮಿಲಿಯನ್ ಸಾಲ ಮತ್ತು ಅನುದಾನವನ್ನು ವಿಶ್ವ ಬ್ಯಾಂಕ್ ಅನುಮೋದಿಸಿತು. ಯುಎಸ್ ಕಾಂಗ್ರೆಸ್ ಸಮಾಲೋಚಕರು ಉಕ್ರೇನ್ ಶತಕೋಟಿ ಡಾಲರ್‌ಗಳನ್ನು ತುರ್ತು ಸಹಾಯಕ್ಕಾಗಿ ಒದಗಿಸಲು ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಶ್ವೇತಭವನವು $10 ಶತಕೋಟಿಗೆ ಮನವಿ ಮಾಡಿತ್ತು. ಉಕ್ರೇನ್‌ನಲ್ಲಿ ಅದರ ಕ್ರಮವನ್ನು ದಂಡಿಸಲು ರಷ್ಯಾ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ಅಭೂತಪೂರ್ವ ನಿರ್ಬಂಧಗಳನ್ನು ವಿಧಿಸಿವೆ.

ಇದನ್ನೂ ಓದಿಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ