ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ

ಮನೆಗೆ ಬಂದ ಪೊಲೀಸರು ಯುವಕನ ಕೋಣೆಯನ್ನೆಲ್ಲ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆತನ ರೂಮ್​ನ ಗೋಡೆಯ ಮೇಲೆಲ್ಲ ಹಲವು ಯೋಧರ ಚಿತ್ರಗಳೇ ಇರುವುದು ಕಂಡುಬಂದಿದೆ. 

ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ
ಉಕ್ರೇನ್ ಸೇನೆ ಸೇರಿಕೊಂಡ ತಮಿಳುನಾಡು ಯುವಕ
Follow us
TV9 Web
| Updated By: Lakshmi Hegde

Updated on:Mar 08, 2022 | 12:30 PM

ಕೊಯಂಬತ್ತೂರು: ತಮಿಳುನಾಡಿನ ಯುವಕನೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್​ ಆರ್ಮಿ ಸೇರಿಕೊಂಡಿದ್ದಾರೆ. ಬಲಿಷ್ಠ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್​​ ಸೇನೆಯಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಪಣತೊಟ್ಟು ನಿಂತಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ತರಬೇತಿ ಪಡೆದು, ರಷ್ಯಾ ಸೈನ್ಯವನ್ನು ಎದುರಿಸುತ್ತಿದ್ದಾರೆ. ಇದರ ಮಧ್ಯೆ 52 ದೇಶಗಳ ಸುಮಾರು 20 ಸಾವಿರ ಸ್ವಯಂ ಸೇವಕರು ರಷ್ಯಾ ವಿರುದ್ಧ ಹೋರಾಟ ಮಾಡಲು ಉಕ್ರೇನ್​ಗೆ ತೆರಳಿದ್ದಾರೆ. ಈ ಸ್ವಯಂ ಸೇವಕರನ್ನು ಒಳಗೊಂಡ ಘಟಕಕ್ಕೆ ಜಾರ್ಜಿಯನ್​ ನ್ಯಾಶನಲ್​ ಲೀಜನ್​ ಅರೆಸೇನಾಪಡೆ ಘಟಕ ಎಂದು ಕರೆಯಲಾಗಿದ್ದು, ತಮಿಳುನಾಡಿನ 21 ವರ್ಷದ ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಕೂಡ ಈಗ ಅಲ್ಲಿಗೆ ಸೇರಿಕೊಂಡಿದ್ದಾರೆ. ಅಂದಹಾಗೇ, ಈ ಯುವಕ ಎತ್ತರ ಕಡಿಮೆ ಇದೆ ಎಂಬ ಕಾರಣಕ್ಕೆ ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕೃತಗೊಂಡಿದ್ದರು. 

ಈ ಯುವಕನ ಹೆಸರು ಸಾಯಿನಿಖೇಶ್ ರವಿಚಂದ್ರನ್. ತಮಿಳುನಾಡಿನ ಕೊಯಂಬತ್ತೂರಿನ  ಸಮೀಪದ ತುಡಿಯಾಲೂರ್​ ನ ಸುಬ್ರಹ್ಮಣಿಯಂಪಾಳಯಂನ ನಿವಾಸಿ. ಈತ ಉಕ್ರೇನ್​​ ಪರ ಹೋರಾಟಲು ಅಲ್ಲಿನ ಪ್ಯಾರಾಮಿಲಿಟರಿ ಸೇರ್ಪಡೆಯಾಗುತ್ತಿದ್ದಂತೆ ಇತ್ತ ಗುಪ್ತಚರ ಇಲಾಖೆ ಗೂಢಚಾರರು ಆತನ ಮನೆಗೆ ಭೇಟಿ ಕೊಟ್ಟಿದ್ದರು. ಪಾಲಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಯುವಕನ ಹಿನ್ನೆಲೆಯ, ಉಕ್ರೇನ್​ ಆರ್ಮಿ ಸೇರಿಕೊಳ್ಳಲು ಆತ ನಿರ್ಧಾರ ಮಾಡಿದ್ಯಾಕೆ ಎಂಬ ಬಗ್ಗೆ ಸವಿಸ್ತಾರವಾದ ವರದಿ ತಯಾರಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಸಾಯಿನಿಖೇಶ್​ ಉಕ್ರೇನ್​ ಸೇನೆಯನ್ನು ಸೇರಿಕೊಳ್ಳುವುದನ್ನು ತಡೆಯಲು ಆತನ ಕುಟುಂಬದವರು ತುಂಬ ಪ್ರಯತ್ನ ಪಟ್ಟಿದ್ದಾರೆ. ಮನೆಗೆ ವಾಪಸ್ ಬರುವಂತೆ ಪರಿಪರಿಯಾಗಿ ಹೇಳಿದ್ದಾರೆ. ಆದರೆ ಆತ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಎಂದು ಈ ವಿಷಯವನ್ನು ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಹೇಳಿದ್ದಾಗಿ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. ಇನ್ನು ಮನೆಗೆ ಬಂದ ಪೊಲೀಸರು ಯುವಕನ ಕೋಣೆಯನ್ನೆಲ್ಲ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆತನ ರೂಮ್​ನ ಗೋಡೆಯ ಮೇಲೆಲ್ಲ ಹಲವು ಯೋಧರ ಚಿತ್ರಗಳೇ ಇರುವುದು ಕಂಡುಬಂದಿದೆ.

ಸಾಯಿನಿಖೇಶ್​ 2018ರಲ್ಲಿ ವಿದ್ಯಾ ವಿಕಾಸಿನಿ ಮೆಟ್ರಿಕ್ಯುಲೇಷನ್ ಸಂಸ್ಥೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದ್ದರು. 12ನೇ ತರಗತಿ ಮುಗಿದಾಗಿನಿಂದ ಭಾರತೀಯ ಸೇನೆ ಸೇರುವ ಪ್ರಯತ್ನ ನಡೆಸುತ್ತಲೇ ಇದ್ದರು. ಆದರೆ ಎತ್ತರದ ಕಾರಣದಿಂದ ರಿಜೆಕ್ಟ್ ಆಗುತ್ತಿದ್ದರು. ಚೆನ್ನೈನಲ್ಲಿರುವ ಯುಎಸ್​ನ ರಾಯಭಾರಿಯನ್ನೊಮ್ಮೆ ಸಾಯಿನಿಖೇಶ್​ ಭೇಟಿಯಾಗಿ, ನಾನು ಅಮೆರಿಕನ್​ ಸೈನ್ಯ ಸೇರಲು ಅವಕಾಶ ಇದೆಯೇ ಎಂದು ವಿಚಾರಿಸಿದ್ದರು. ಈ ಬಗ್ಗೆ ಯುವಕನ ಕುಟುಂಬ ತಿಳಿಸಿದೆ. ಅದಾದ ಬಳಿಕ ಅವರು 2018ರ ಸೆಪ್ಟೆಂಬರ್​ನಲ್ಲಿ ಖಾರ್ಕೀವ್​ನಲ್ಲಿರುವ ನ್ಯಾಶನಲ್​ ಎರೋಸ್ಪೇಸ್​ ಯೂನಿವರ್ಸಿಟಿ ಸೇರಿಕೊಂಡಿದ್ದಾರೆ ಹಾಗೂ ಅದೇ ಯೂನಿವರ್ಸಿಟಿಯ ಹಾಸ್ಟೆಲ್​​ನಲ್ಲಿ ವಾಸವಾಗಿದ್ದರು. ಇದೀಗ ಉಕ್ರೇನ್​ ಪರ ಹೋರಾಟಕ್ಕೆ ಇಳಿದಿದ್ದಾರೆ.

2021 ರ ಜುಲೈನಲ್ಲಿ ಒಮ್ಮೆ ಭಾರತಕ್ಕೆ ಬಂದು ತನ್ನ ಮನೆಯಲ್ಲಿ ಸುಮಾರು ಒಂದೂವರೆ ತಿಂಗಳು ಇದ್ದ ಸಾಯಿನಿಖೇಶ್​ ಅದಾದ ಮೇಲೆ ಬರಲಿಲ್ಲ. ಫೋನ್​ ಮೂಲಕ ಮನೆಯವರೊಂದಿಗೆ ಸಂಪರ್ಕದಲ್ಲಿದ್ದ. ಈಗೊಂದು ತಿಂಗಳ ಹಿಂದೆ ಮನೆಗೆ ಫೋನ್​ ಮಾಡಿದ್ದ ಸಂದರ್ಭದಲ್ಲಿ, ತನಗೆ ವಿಡಿಯೋ ಗೇಮ್ ಡೆವಲಪ್​ಮೆಂಟ್ ಕಂಪನಿಯೊಂದರಲ್ಲಿ ಪಾರ್ಟ್ ಟೈಂ ಕೆಲಸ ಸಿಕ್ಕಿದ್ದಾಗಿ ತಿಳಿಸಿದ್ದ. ಆದರೆ ಯುದ್ಧ ಶುರುವಾದ ಬಳಿಕ ಹೀಗೆ ಉಕ್ರೇನ್​ ಸೇನೆ ಸೇರಿಕೊಂಡಿದ್ದಾನೆ. ಆ ವರದಿಯನ್ನು ಮಾಧ್ಯಮಗಳಲ್ಲಿ ಓದಿದ ಮೇಲೆ ಗೊತ್ತಾಯಿತು. ಇದರು ತುಂಬ ಶಾಕ್​ ಉಂಟು ಮಾಡಿದೆ ಎಂದು ಸಾಯಿನಿಖೇಶ್​ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬದವರು ಉಕ್ರೇನ್​ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಇಮೇಲ್​ ಕಳಿಸಿದ್ದಾರೆ. ಸಾಯಿನಿಖೇಶ್ ಬಗ್ಗೆ ವಿಚಾರಣೆ ನಡೆಸಿ ಎಂದು ಮೇಲ್​​ನಲ್ಲಿ ಮನವಿ ಮಾಡಿದ್ದರು. ಒಂದಷ್ಟು ದಿನ ರಾಯಭಾರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ನಂತರ ಕುಟುಂಬದಿಂದಲೇ ಯುವಕನ ಬಗ್ಗೆ ಮಾಹಿತಿ ತೆಗೆದುಕೊಂಡು ವಿಚಾರಿಸಿದ್ದಾಗ ಆತ ಉಕ್ರೇನ್​ ಪರ ಹೋರಾಟಕ್ಕೆ ಇಳಿದಿರುವುದು ದೃಢಪಟ್ಟಿದೆ. ಸದ್ಯ ಸಾಯಿನಿಖೇಶ್​ ತಂದೆ-ತಾಯಿ ತುಂಬ ಆತಂಕದಲ್ಲಿದ್ದಾರೆ. ಹೇಗಾದರೂ ಸರಿ ಆತನನ್ನು ವಾಪಸ್​ ಕರೆದುಕೊಂಡು ಬನ್ನಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾನು MLC ಅಂದ್ರೂ ಬಿಡದ ಪೊಲೀಸರು! ಸಂಕಷ್ಟಕ್ಕೆ ಸಿಲುಕಿದ ಅರುಣ್ ಷಹಾಪೂರ

Published On - 12:26 pm, Tue, 8 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್