ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ಗೆ ಕಠಿಣ ಪ್ರಶ್ನೆ
Rishi Sunak | Russia Ukraine Crisis: ರಷ್ಯಾಗೆ ಜಾಗತಿಕ ನಿರ್ಬಂಧ ಹೇರುವ ದೃಷ್ಟಿಯಿಂದ ಬ್ರಿಟನ್ನ ಪ್ರಮುಖ ಕಂಪನಿಗಳು ರಷ್ಯಾದಲ್ಲಿ ಸೇವೆ ನಿಲ್ಲಿಸಿವೆ. ಆದರೆ ಭಾರತೀಯ ಮೂಲದ ಕಂಪನಿ ಇನ್ಫೋಸಿಸ್ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಿಷಿ ಸುನಕ್ ಪತ್ನಿ, ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ. ಅವರ ಉಪಸ್ಥಿತಿಯಿರುವ ಕಂಪನಿ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಬ್ರಿಟನ್ ಸಂಸದ ರಿಷಿ ಸುನಕ್ಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ, ಬ್ರಿಟನ್ನ ಭಾವಿ ಪ್ರಧಾನಿ ಎಂದೇ ಗುರುತಿಸಲ್ಪಡುವ ಯುಕೆ ಸಂಸದ ರಿಷಿ ಸುನಕ್ (Rishi Sunak) ಅವರಿಗೆ ರಷ್ಯಾದ ಮೇಲೆ ಹೇರಿರುವ ನಿರ್ಬಂಧದ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ರಷ್ಯಾಗೆ ಜಾಗತಿಕ ನಿರ್ಬಂಧ ಹೇರುವ ದೃಷ್ಟಿಯಿಂದ ಬ್ರಿಟನ್ನ ಪ್ರಮುಖ ಕಂಪನಿಗಳು ರಷ್ಯಾದಲ್ಲಿ ಸೇವೆ ನಿಲ್ಲಿಸಿವೆ. ಆದರೆ ಭಾರತೀಯ ಮೂಲದ ಕಂಪನಿ ಇನ್ಫೋಸಿಸ್ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಿಷಿ ಸುನಿಕ್ ಪತ್ನಿ, ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ. ಅವರ ಉಪಸ್ಥಿತಿಯಿರುವ ಕಂಪನಿ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ರಿಷಿ ಸುನಕ್ಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ. ಬ್ರಿಟನ್ ಖಜಾನೆ ಕುಲಪತಿಯಾಗಿರುವ ರಿಷಿ ಸುನಕ್ ಗುರುವಾರ ಪ್ರಶ್ನೆಗಳನ್ನು ಎದುರಿಸಿದರು. ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಹಣಕಾಸು ಸಚಿವರು ತಮ್ಮ ಸ್ವಂತ ಮನೆಯಲ್ಲಿ ನಿರ್ಬಂಧದ ಸಲಹೆಯನ್ನು ಅನುಸರಿಸುತ್ತಿಲ್ಲವೇ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಿಷಿ, ಇದು ಪ್ರತ್ಯೇಕ ಕಂಪನಿಗಳ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯ ಎಂದು ಹೇಳಿದ್ದಾರೆ.
‘ನಿಮ್ಮ ಕುಟುಂಬ ರಷ್ಯಾದ ಸಂಪರ್ಕ ಹೊಂದಿದೆ ಎಂದು ವರದಿಯಾಗಿದೆ. ನಿಮ್ಮ ಪತ್ನಿ ಭಾರತೀಯ ಸಂಸ್ಥೆ ಇನ್ಫೋಸಿಸ್‌ನಲ್ಲಿ ಪಾಲನ್ನು ಹೊಂದಿದ್ದಾರೆಂದು ವರದಿಯಾಗಿದೆ’’ ಎಂದು ಸ್ಕೈನ್ಯೂಸ್ ದೂರದರ್ಶನ ಸಂದರ್ಶನದಲ್ಲಿ ಕೇಳಲಾಗಿದೆ. ಜತೆಗೆ, ‘‘ಇನ್ಫೋಸಿಸ್ ಮಾಸ್ಕೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಅವರು ಮಾಸ್ಕೋದಲ್ಲಿರುವ ಆಲ್ಫಾ ಬ್ಯಾಂಕ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ನಿಮ್ಮ ಸ್ವಂತ ಮನೆಯಲ್ಲಿ ನೀವು ನಿರ್ಬಂಧಗಳನ್ನು ಅನುಸರಿಸುತ್ತಿಲ್ಲ. ಆದರೆ ನೀವು ಇತರರಿಗೆ ಸಲಹೆ ನೀಡುತ್ತೀರಲ್ಲಾ?’’ ಎಂದು ನಿರೂಪಕಿ ಕಠಿಣ ಪ್ರಶ್ನೆಯನ್ನು ರಿಷಿ ಮುಂದಿಟ್ಟಿದ್ದಾರೆ.
ಬ್ರಿಟನ್ನ ಚುನಾಯಿತ ರಾಜಕಾರಣಿಯಾಗಿರುವ ರಿಷಿ ಸುನಕ್ ಇದಕ್ಕೆ ಉತ್ತರಿಸಿ, ತಾವು ಯಾವುದಕ್ಕೆ ಜವಾಬ್ದಾರರು ಎಂದು ಸ್ಪಷ್ಟನೆ ನೀಡಿದ್ದಾರೆ. ‘ನಾನು ಚುನಾಯಿತ ಪ್ರತಿನಿಧಿ, ಇಲ್ಲಿ ನಾನು ಯಾವುದಕ್ಕೆ ಜವಾಬ್ದಾರನೋ ಅದನ್ನು ಮಾತನಾಡಲು ಬಂದಿದ್ದೇನೆ. ಆದರೆ ನನ್ನ ಪತ್ನಿಯ ಕುರಿತು ಅಲ್ಲ’ ಎಂಬರ್ಥದಲ್ಲಿ ರಿಷಿ ಪ್ರತಿಕ್ರಿಯಿಸಿದ್ದಾರೆ.
‘‘ಎಲ್ಲಾ ಕಂಪನಿಗಳ ಕಾರ್ಯಾಚರಣೆ ಅವರವರಿಗೆ ಬಿಟ್ಟಿದ್ದು’’ ಎಂದಿರುವ ರಿಷಿ, ‘‘ನಾವು ಮಹತ್ವದ ನಿರ್ಬಂಧಗಳನ್ನು ಹಾಕಿದ್ದೇವೆ. ಜವಾಬ್ದಾರಿಯುತ ಕಂಪನಿಗಳು ಅದನ್ನು ಅನುಸರಿಸುತ್ತಿದ್ದು, ಪುಟಿನ್ ಆಕ್ರಮಣಶೀಲತೆಗೆ ಪ್ರತ್ಯುತ್ತರ ನೀಡುತ್ತಿದ್ದಾರೆ’’ ಎಂದು ರಿಷಿ ಹೇಳಿದ್ದಾರೆ. ‘‘ನಿಮ್ಮ ಪತ್ನಿಯ ಕಂಪನಿ ಇನ್ಫೋಸಿಸ್ ಕೂಡ ಹೀಗೆ ಬಲವಾದ ಪ್ರತ್ಯುತ್ತರ ನೀಡುತ್ತಿದೆಯೇ?’’ ಎಂದು ಪುನಃ ಪ್ರಶ್ನಿಸಲಾಯಿತು.
ಈ ಪ್ರಶ್ನೆಗೆ ಉತ್ತರಿಸಿದ ರಿಷಿ, ‘‘ನನಗೆ ಪೂರ್ಣ ತಿಳಿದಿಲ್ಲ. ಕಾರಣ, ಆ ಕಂಪನಿಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ’’ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ರಿಷಿ ಸುನಕ್ ರಷ್ಯಾದಲ್ಲಿ ಹೂಡಿಕೆ ಮಾಡುವ ಬಗ್ಗೆ ಎಲ್ಲಾ ಕಂಪನಿಗಳು ಎಚ್ಚರಿಕೆಯಿಂದಿರುವಂತೆ ಕರೆ ನೀಡಿದ್ದಾರೆ.
ಸ್ಕೈ ನ್ಯೂಸ್ ಸಂದರ್ಶನ ಇಲ್ಲಿದೆ:
.@JayneSeckerSky: It’s been reported that you have family links to Russia and that your wife has a stake in Infosys, which operates in Moscow.@RishiSunak: “I’m here to talk to you about what I am responsible for, my wife is not.”https://t.co/WaBU5XQk1v
? Sky 501 pic.twitter.com/1sOuHkePo9
— Sky News (@SkyNews) March 24, 2022
ಇನ್ಫೋಸಿಸ್ ರಷ್ಯಾದೊಂದಿಗಿನ ಆರ್ಥಿಕ ಸಂಬಂಧದ ಬಗ್ಗೆ ಮಾಹಿತಿ ನೀಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ ಎಂದು ಇನ್ಫೋಸಿಸ್ ಹೇಳಿದೆ. ತನ್ನ ಹೇಳಿಕೆಯಲ್ಲಿ ಅದು, ‘‘ಇನ್ಫೋಸಿಸ್ ರಷ್ಯಾ ಮೂಲದ ಉದ್ಯೋಗಿಗಳ ಸಣ್ಣ ತಂಡವನ್ನು ಹೊಂದಿದೆ. ಅದು ನಮ್ಮ ಕೆಲವು ಜಾಗತಿಕ ಗ್ರಾಹಕರಿಗೆ ಪ್ರಾದೇಶಿಕವಾಗಿ ಸೇವೆ ಸಲ್ಲಿಸುತ್ತದೆ. ನಾವು ಸ್ಥಳೀಯ ರಷ್ಯಾದ ಉದ್ಯಮಗಳೊಂದಿಗೆ ಯಾವುದೇ ಸಕ್ರಿಯ ವ್ಯಾಪಾರ ಸಂಬಂಧವನ್ನು ಹೊಂದಿಲ್ಲ’’ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:
Yogi Adityanath: ಇಂದು ಪ್ರಮಾಣವಚನ ಸ್ವೀಕರಿಸಲಿರುವ ಯೋಗಿ; ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಭಾಗಿ
Published On - 9:59 am, Fri, 25 March 22