AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ ಎಂದು ಹಿಂದೂ ವ್ಯಾಪಾರಿಗಳ ಅಂಗಡಿ ವಿರುದ್ಧ ತಪ್ಪು ಸಂದೇಶ; ದೂರು ದಾಖಲು

ಹಿಂದೂ ವ್ಯಾಪಾರಿಗಳ 32 ಅಂಗಡಿಗಳ ವಿರುದ್ಧ ತಪ್ಪು ಸಂದೇಶ ರವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ಅಂಗಡಿ ವಿರುದ್ಧ ತಪ್ಪು ಸಂದೇಶವನ್ನು ಸಾರುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.

ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ ಎಂದು ಹಿಂದೂ ವ್ಯಾಪಾರಿಗಳ ಅಂಗಡಿ ವಿರುದ್ಧ ತಪ್ಪು ಸಂದೇಶ; ದೂರು ದಾಖಲು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 25, 2022 | 9:05 AM

Share

ಮೈಸೂರು: ನಗರದ ಕಚೇರಿಯಲ್ಲಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್ ಎಂಬವವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರು ಗುತ್ತಿಗೆದಾರ ಚರಣ್‌ಗೆ ಕಾರ್ಯಾದೇಶ ನೀಡಲು ಲಂಚ ಕೇಳಿದ್ದರು. 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗಿರೀಶ್, ಕಚೇರಿಯಲ್ಲಿ ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಿ.ಆರ್. ಗಿರೀಶ್​ರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿ ಕೆ. ರಂಗನಾಥ್ ಮನೆ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ರಂಗನಾಥ್ ಮನೆ, ಕಚೇರಿ ಸೇರಿದಂತೆ ಐದು ಕಡೆ ದಾಳಿ ಮಾಡಲಾಗಿದೆ. ಒಟ್ಟು 42 ಅಧಿಕಾರಿಗಳ 5 ತಂಡದಿಂದ ದಾಳಿ ಮಾಡಲಾಗಿದೆ. ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕ ರಂಗನಾಥ್​ರ ನ್ಯಾಯಾಂಗ ಬಡವಾಣೆಯ ನಿವಾಸ, ದೊಡ್ಡಬಳ್ಳಾಪುರದ ವಾಸದ ಮನೆ, ದೊಡ್ಡಬಳ್ಳಾಪುರ ಕನಕ ಟ್ರಸ್ಟ್ ಹಾಗೂ ಅಕ್ಷರ ಪಬ್ಲಿಕ್ ಶಾಲೆ ಹಾಗೂ ನಾಗರಬಾವಿಯ ಸಂಬಂಧಿಯ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ಬಾಗಲಕೋಟೆ: ಹಾಕಿ ಸ್ಟಿಕ್​ನಿಂದ ಬಿಬಿಎ ವಿದ್ಯಾರ್ಥಿ ಮೇಲೆ ಹಲ್ಲೆ

ಹಾಕಿ ಸ್ಟಿಕ್​ನಿಂದ ಬಿಬಿಎ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ವಿದ್ಯಾರ್ಥಿಗೆ ಗಂಭೀರ ಗಾಯವಾದ ಘಟನೆ ಬಾಗಲಕೋಟೆ ನಗರದಲ್ಲಿರುವ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ ನಡೆದಿದೆ. ವಿದ್ಯಾರ್ಥಿ ತಲೆಗೆ 9 ಸ್ಟಿಚ್ ಹಾಕಲಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂತೋಷ ಹತ್ತೂರ ಹಲ್ಲೆಗೊಳಗಾದ ವಿದ್ಯಾರ್ಥಿ. ಯಲ್ಲಪ್ಪ ಚಲವಾದಿ ಹಲ್ಲೆ ಮಾಡಿರುವ ಗ್ರೌಂಡ್ ಇನ್ಚಾರ್ಜ್. ಹಲ್ಲೆಗೊಳಗಾದ ಸಂತೋಷ್ ಅದೇ‌ ಕಾಲೇಜಿನ ಬಿಬಿಎ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಘಟನೆ ನಡೆದಿದೆ. ಬಾಗಲಕೋಟೆ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತರ ಸುದ್ದಿಗಳು

ಮಂಗಳೂರು: ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ. ಹಿಂದೂಗಳಿಗೆ ಮಾತ್ರ ಮಾರಾಟ ಮಾಡೋದಾಗಿ ತಪ್ಪು ಸಂದೇಶ ಹಂಚಿರುವ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ನಡೆದಿದೆ. ಹಿಂದೂ ವ್ಯಾಪಾರಿಗಳ 32 ಅಂಗಡಿಗಳ ವಿರುದ್ಧ ತಪ್ಪು ಸಂದೇಶ ರವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ಅಂಗಡಿ ವಿರುದ್ಧ ತಪ್ಪು ಸಂದೇಶವನ್ನು ಸಾರುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.

ಉಡುಪಿ: ಇತ್ತ ಕೊಲ್ಲೂರು ಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬೇಡಿ ಎಂದು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ ಸಲ್ಲಿಕೆ ಮಾಡಲಾಗಿದೆ. ಕೊಲ್ಲೂರು ಪಂಚಾಯಿತಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಲಾಗಿದೆ. ಮುಸ್ಲಿಂ ವ್ಯಾಪಾರಿಗಳ ಜತೆ ಪಂಚಾಯಿತಿ ಅಧ್ಯಕ್ಷ ಚರ್ಚೆ ನಡೆಸಿದ್ದಾರೆ.

ತುಮಕೂರು: ಹನುಮಂತಪುರ ಬ್ರಿಡ್ಜ್ ಬಳಿ ನೇಣು ಬಿಗಿದುಕೊಂಡು ಹನುಮಂತಪುರ ಮೂಲದ ಹನುಮಂತರಾಯಪ್ಪ (41) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ACB Raid: ಬೆಂಗಳೂರಿನಲ್ಲಿಂದು ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ; ಪತ್ತೆಯಾಯಿತು ಕಂತೆ ಕಂತೆ ಹಣ, ಒಬ್ಬರಿಗಿಂತ ಒಬ್ಬರು ಭ್ರಷ್ಟರು

ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಬ್​​ ಇನ್ಸ್​ಪೆಕ್ಟರ್​​ಗೆ 3 ವರ್ಷ ಜೈಲು; ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರ!