Kailash Yatra: ಕೈಲಾಸ- ಮಾನಸ ಸರೋವರ ಯಾತ್ರೆಗೆ ಹೊಸ ಮಾರ್ಗ ಶೀಘ್ರ ಕಾರ್ಯಾರಂಭ; ಇದರ ವಿಶೇಷಗಳೇನು?

Kailash Mansarovar Yatra: ‘ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆಯ ಹೊಸ ಮಾರ್ಗದ ಕೆಲಸಗಳು ಶೇ.85ರಷ್ಟು ಪೂರ್ಣವಾಗಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಪ್ರಯಾಣಕ್ಕೆ ಸಿದ್ಧವಾಗಲಿದೆ’ ಎಂದು ಸಂಸತ್​ನಲ್ಲಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹೊಸ ಮಾರ್ಗ ಹೇಗಿದೆ? ಅದರ ಉಪಯೋಗಗಳೇನು? ಪ್ರಸ್ತುತ ಇರುವ ಮಾರ್ಗದಿಂದ ಆಗುತ್ತಿರುವ ಸಮಸ್ಯೆಗಳೇನು? ವಿವರ ಇಲ್ಲಿದೆ.

Kailash Yatra: ಕೈಲಾಸ- ಮಾನಸ ಸರೋವರ ಯಾತ್ರೆಗೆ ಹೊಸ ಮಾರ್ಗ ಶೀಘ್ರ ಕಾರ್ಯಾರಂಭ; ಇದರ ವಿಶೇಷಗಳೇನು?
ಕೈಲಾಸ ಪರ್ವತ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Mar 25, 2022 | 2:28 PM

ನವದೆಹಲಿ: ಕೈಲಾಸ- ಮಾನಸ ಸರೋವರಕ್ಕೆ (Kailash Mansa Sarovar Yatra) ತೆರಳುವ ಭಾರತೀಯ ಯಾತ್ರಾರ್ಥಿಗಳು ಇನ್ನು ಮುಂದೆ ಚೀನಾ ಅಥವಾ ನೇಪಾಳದ ಮೂಲಕ ಹೋಗಬೇಕಾಗಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಇತ್ತೀಚೆಗೆ ಹೇಳಿದ್ದಾರೆ. ಉತ್ತರಾಖಂಡ್‌ನಿಂದ ಹೊಸ ಮಾರ್ಗವು ಶೀಘ್ರದಲ್ಲೇ ಕಾರ್ಯನಿರ್ವಹಣೆ ಆರಂಭಿಸಲಿದೆ. ಇದನ್ನು ಉಲ್ಲೇಖಿಸಿ ಸಚಿವರು ಮೇಲಿನ ಮಾತನ್ನು ಹೇಳಿದ್ದಾರೆ. ‘ಹೊಸ ಮಾರ್ಗದ ಕೆಲಸಗಳು ಶೇ.85ರಷ್ಟು ಪೂರ್ಣವಾಗಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಯಾತ್ರೆಗೆ ಸಿದ್ಧವಾಗಲಿದೆ’ ಎಂದು ಸಂಸತ್​ನಲ್ಲಿ ಗಡ್ಕರಿ ತಿಳಿಸಿದ್ದಾರೆ. ಹೊಸ ಮಾರ್ಗವು ಏಕೆ ಮುಖ್ಯ? ಈಗಿರುವ ಮಾರ್ಗಗಳು ಹೇಗಿದೆ ಎಂಬ ವಿವರ ಇಲ್ಲಿದೆ. ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಾಗಿದ್ದು, ಟಿಬೆಟ್‌ನ ಪಶ್ಚಿಮ ಭಾಗದಲ್ಲಿದೆ. ಎರಡೂ ತಾಣಗಳು ಹಿಂದೂಗಳೊಂದಿಗೆ ಜೈನರು ಮತ್ತು ಬೌದ್ಧರಿಗೂ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಪ್ರಸ್ತುತ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಕೈಲಾಸ ಯಾತ್ರೆಯನ್ನು ಎರಡು ವಿಭಿನ್ನ ಮಾರ್ಗಗಳ ಮೂಲಕ ಆಯೋಜಿಸುತ್ತಿದೆ. ಉತ್ತರಾಖಂಡದ ಲಿಪುಲೇಖ್ ಪಾಸ್ ಮತ್ತು ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ಸಂಪೂರ್ಣ ಯಾತ್ರೆಯನ್ನು ಪೂರ್ಣಗೊಳಿಸಲು 23-25 ​​ದಿನಗಳನ್ನು ತೆಗೆದುಕೊಳ್ಳುತ್ತದೆ. ಹೊಸ ಮಾರ್ಗವು ಉತ್ತರಾಖಂಡದ ಪಿಥೋರ್​ಗಢದಿಂದ ಸಾಗಲಿದ್ದು, ಇದರಿಂದ ಯಾತ್ರೆಗೆ ಕೇವಲ ಒಂದು ವಾರ ಸಾಕಾಗಲಿದೆ.

Kailash Parvat (1)

ಕೈಲಾಸ ಪರ್ವತ (ಸಂಗ್ರಹ ಚಿತ್ರ)

ಪ್ರಸ್ತುತ ಯಾತ್ರೆ ಸಾಗುವ ಮಾರ್ಗ ಹೇಗೆ?

ಪ್ರಸ್ತುತ, ಸಿಕ್ಕಿಂ ಅಥವಾ ನೇಪಾಳದ ಮಾರ್ಗಗಳ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸಲಾಗುತ್ತದೆ. ಇದಕ್ಕೆ ಸುಮಾರು ಎರಡರಿಂದ ಮೂರು ವಾರಗಳ ಅವಶ್ಯಕತೆ ಇದೆ. ಮೊದಲ ಹಾದಿ- ಇಂಡೋ-ಚೀನಾ ಗಡಿಯ ಸಿಕ್ಕಿಂನಲ್ಲಿರುವ ನಾಥು ಲಾ ಪಾಸ್ ಮೂಲಕ ಹಾದುಹೋಗುತ್ತದೆ. 14,450 ಅಡಿ ಎತ್ತರದಲ್ಲಿರುವ ಈ ಹಾದಿಯು ಸಿಕ್ಕಿಂ ಅನ್ನು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ.

ಇನ್ನೊಂದು ಮಾರ್ಗ- ಲಿಪುಲೇಖ್ ಪಾಸ್ ಮೂಲಕ ಉತ್ತರಾಖಂಡದ ಕುಮಾನ್ ಪ್ರದೇಶವನ್ನು ಟಿಬೆಟ್‌ನ ಹಳೆಯ ಪಟ್ಟಣವಾದ ತಕ್ಲಕೋಟ್‌ನೊಂದಿಗೆ ಸಂಪರ್ಕಿಸುತ್ತದೆ. 17,500 ಅಡಿ ಎತ್ತರದಲ್ಲಿರುವ ಈ ಹಾದಿಯಲ್ಲಿ ಯಾತ್ರಿಕರಿಗೆ ವಸತಿ ಸೌಲಭ್ಯವಿರುವುದಿಲ್ಲ. ಹಾಗೆಯೇ ವಿಪರೀತ ಹವಾಮಾನ ವೈಪರೀತ್ಯವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಜತೆಗೆ ಈ ಪ್ರಯಾಣಗಳಿಗೆ ಜನರು ದೈಹಿಕರಾಗಿ ಸದೃಡರಾಗಿದ್ದು, ಹಲವು ಪರೀಕ್ಷೆಗಳಲ್ಲಿ ಪಾಸ್ ಆಗಬೇಕು. ಪ್ರಯಾಣಕ್ಕೆ ಸೂಕ್ತರಾದ ವ್ಯಕ್ತಿಗಳನ್ನು ಮಾತ್ರ ಯಾತ್ರೆಗೆ ಕರೆದೊಯ್ಯಲಾಗುತ್ತದೆ.

ಹೊಸ ಮಾರ್ಗ ಹೇಗಿದೆ?

ಉತ್ತರಾಖಂಡದಿಂದ ಕೈಲಾಸ ಮಾನಸ ಸರೋವರಕ್ಕೆ ಹೊಸ ಮಾರ್ಗವು ಮೂರು ವಿಸ್ತರಣೆಗಳನ್ನು ಒಳಗೊಂಡಿದೆ. ಮೊದಲ ಮಾರ್ಗವು ಪಿಥೋರಗಡ್‌ನಿಂದ ತವಾಘಾಟ್‌ಗೆ 107.6 ಕಿಮೀ ಉದ್ದದ ರಸ್ತೆಯಾಗಿದೆ. ಎರಡನೆಯದು ತವಾಘಾಟ್‌ನಿಂದ ಘಾಟಿಯಬ್‌ಗಢ್‌ಗೆ 19.5-ಕಿಮೀ ಸಿಂಗಲ್ ಲೇನ್‌ ಆಗಿದೆ. ಮೂರನೇ ಮಾರ್ಗವು ಚೀನಾ ಗಡಿಯಲ್ಲಿರುವ ಘಾಟಿಯಾಬ್‌ಗಡ್‌ನಿಂದ ಲಿಪುಲೇಖ್ ಪಾಸ್‌ವರೆಗೆ 80 ಕಿಮೀ ದೀರ್ಘವಾಗಿದೆ. ಇದು ಕೂಡ ಕಠಿಣ ಪ್ರಯಾಣವಾಗಿದ್ದು, ಸುಮಾರು 5 ದಿನಗಳನ್ನು ತೆಗೆದುಕೊಳ್ಳುತ್ತದೆ.

ಏಕ ಪಥದ ತವಘಾಟ್‌ನಿಂದ ಘಾಟಿಯಬ್‌ಗಢ್‌ಗೆ ಈಗ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ವತಿಯಿಂದ ಡಬಲ್ ಲೇನ್ ರಸ್ತೆಯಾಗಿ ಪರಿವರ್ತಿಸಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಹೊಸ ರಸ್ತೆಯನ್ನು ಉದ್ಘಾಟಿಸಿದ್ದರು. ಈ ಹೊಸ ರಸ್ತೆಯು ಐದು ದಿನಗಳ ಟ್ರೆಕ್ ಅನ್ನು ಎರಡು ದಿನಗಳ ರಸ್ತೆ ಪ್ರಯಾಣಕ್ಕೆ ಕಡಿಮೆ ಮಾಡುತ್ತದೆ. ಹೀಗಾಗಿ ಆರು ದಿನಗಳ ಪ್ರಯಾಣವನ್ನು ಉಳಿಸುತ್ತದೆ.

Pithoragarh route

ಹೊಸ ಮಾರ್ಗದ ಕಾಮಗಾರಿ

ಘಾಟಿಯಬ್‌ಗಡ್‌ನಿಂದ ಲಿಪುಲೇಖ್‌ವರೆಗಿನ ರಸ್ತೆಯು ಈಗ ನಿರ್ಮಾಣ ಹಂತದಲ್ಲಿದ್ದು, 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ರಸ್ತೆಯನ್ನು 2005ರಲ್ಲಿ ರೂ.80.76 ಕೋಟಿ ವೆಚ್ಚದಲ್ಲಿ ಅನುಮೋದಿಸಲಾಗಿದ್ದು, 2018ರಲ್ಲಿ ರೂ.439.40 ಕೋಟಿಗಳ ಪರಿಷ್ಕೃತ ವೆಚ್ಚದೊಂದಿಗೆ ಪರಿಷ್ಕರಿಸಲಾಗಿದೆ.

ಕಾರ್ಯತಂತ್ರ ಮತ್ತು ಯುದ್ಧತಂತ್ರದ ಕಾರಣಗಳಿಗಾಗಿ ಈ ನಿರ್ಮಾಣವು ಭಾರತಕ್ಕೆ ಮಹತ್ವದ್ದಾಗಿದೆ. ಪಿಥೋರಗಢದ ಮೂಲಕ ಹೋಗುವ ರಸ್ತೆಯ ಕಾರಣದಿಂದ ಕೈಲಾಸ ಯಾತ್ರೆಯ ಹೆಚ್ಚಿನ ಭಾಗವು ಭಾರತದ ಪ್ರದೇಶದೊಳಗೆ ಇರಲಿದೆ. ಇದು ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಪ್ರಸ್ತುತ ಇರುವ ಎರಡು ಮಾರ್ಗಗಳು ಬೇರೆ ದೇಶಗಳ ಮುಖಾಂತರ ಹಾದುಹೋಗುತ್ತದೆ.

ಇದನ್ನೂ ಓದಿ:

World War 2: ಉಕ್ರೇನ್ ನೆಪದಲ್ಲಿ ಹೊರಬಂದ ರಷ್ಯಾ ಜಪಾನ್ ಕಹಿ: ತಾಂತ್ರಿಕವಾಗಿ ಎರಡೂ ದೇಶಗಳು ಯುದ್ಧದಲ್ಲಿವೆ

PM-KISAN eKYC: ಪಿಎಂ ಕಿಸಾನ್ ಸಮ್ಮಾನ್ ನಿಧಿ ಇ-ಕೆವೈಸಿ ಕೊನೆ ದಿನ ಯಾವುದು ಎಂಬುದನ್ನು ಗಮನಿಸಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್