Sign In

By signing in or creating an account, you agree with Associated Broadcasting Company's Terms & Conditions and Privacy Policy.

Birbhum Violence: ಎಂಟು ಮಂದಿ ಸಜೀವ ದಹನವಾಗಿದ್ದ ಭೀರಭೂಮ್ ಹಿಂಸಾಚಾರದ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

Birbhum case | Calcutta High Court | CBI: ಭೀರಭೂಮ್ ಜಿಲ್ಲೆಯ ರಾಮಪುರಹಟ್ ಹತ್ಯಾಕಾಂಡದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಹತ್ಯಾಕಾಂಡದಲ್ಲಿ ಎಂಟು ಮಂದಿ ಸಜೀವ ದಹನವಾಗಿದ್ದರು.

Birbhum Violence: ಎಂಟು ಮಂದಿ ಸಜೀವ ದಹನವಾಗಿದ್ದ ಭೀರಭೂಮ್ ಹಿಂಸಾಚಾರದ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
ಬಿರ್ಭುಮ್​ನಲ್ಲಿ ನಡೆದಿದ್ದ ಹಿಂಸಾಚಾರ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Mar 25, 2022 | 11:50 AM

ಕೋಲ್ಕತ್ತ: ಭೀರಭೂಮ್ (Birbhum Violence) ಜಿಲ್ಲೆಯ ರಾಮಪುರಹಟ್ ಹತ್ಯಾಕಾಂಡದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಹತ್ಯಾಕಾಂಡದಲ್ಲಿ ಎಂಟು ಮಂದಿ ಸಜೀವ ದಹನವಾಗಿದ್ದರು. ಮೊದಲು ಹಲ್ಲೆ ಮಾಡಿ, ಬಳಿಕ ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿ ಸಜೀವ ದಹನ ಮಾಡಲಾಗಿತ್ತು. ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮನವಿ ಮಾಡಿತ್ತು. ಇದನ್ನು ತಳ್ಳಿಹಾಕಿರುವ ನ್ಯಾಯಾಲಯವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ. ಮಂಗಳವಾರ ನಡೆದಿದ್ದ ಹಿಂಸಾಚಾರದಲ್ಲಿ ಎಲ್ಲಾ 8 ಮಹಿಳೆಯರು- ಮಕ್ಕಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟುಹಾಕಿತ್ತು. ಬಂಗಾಳ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಇದೀಗ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಿದೆ. ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಏಪ್ರಿಲ್ 7 ರೊಳಗೆ ತನಿಖೆಯ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.

ಆರೋಪಿಗಳು ಶರಣಾಗದಿದ್ದರೆ ಅವರನ್ನು ಬೇಟೆಯಾಡಲಾಗುವುದು ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಘಟನೆಯ ಹಿಂದೆ ಮತ್ತೇನೋ ಇದೆ ಎಂದೂ ಅವರು ಆರೋಪಿಸಿದ್ದಾರೆ.

ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಕಚ್ಚಾ ಬಾಂಬ್ ದಾಳಿಯಲ್ಲಿ ಹತರಾದ ನಂತರ ಪ್ರತೀಕಾರವಾಗಿ ಹಿಂಸಾಚಾರ ನಡೆದಿದೆ ಎನ್ನಲಾಗಿದೆ. ರಾಮ್‌ಪುರಹತ್ ಪಟ್ಟಣದ ಬಳಿಯ ಬೊಗ್ಟುಯಿ ಗ್ರಾಮದಲ್ಲಿ ಮಂಗಳವಾರ ಗುಂಪೊಂದು ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಅವರ ಮನೆಗಳಿಗೆ ಬೀಗ ಹಾಕಿ ಜೀವಂತವಾಗಿ ಸುಟ್ಟು ಹಾಕಿದೆ. ಒಂದು ದಿನದ ನಂತರ ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಎಲ್ಲರೂ ಬಹುತೇಕ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು.

‘‘ಇದು ರಾಜಕೀಯ ಹಿಂಸಾಚಾರದ ಪ್ರಕರಣವಾಗಿ ತೋರುತ್ತಿಲ್ಲ’’ ಎಂದು ರಾಜ್ಯ ಪೊಲೀಸರು ಮಂಗಳವಾರ ಹೇಳಿದ್ದರು. ‘‘ಎರಡು ಗುಂಪುಗಳ ನಡುವಿನ ವೈಯಕ್ತಿಕ ದ್ವೇಷವೇ ಭಾದು ಶೇಖ್ ಹತ್ಯೆಗೆ ಕಾರಣವಾಗಿರಬಹುದು. ಇದರಲ್ಲಿ ಯಾವುದೇ ರಾಜಕೀಯ ಪೈಪೋಟಿ ಇಲ್ಲ’’ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವಿಯಾ ಹೇಳಿದ್ದರು.

ಪ್ರಕರಣದಲ್ಲಿ ರಾಜಕೀಯ ಕೈವಾಡದ ಬಗ್ಗೆ ಇನ್ನೂ ಯಾವುದೇ ವಿಚಾರ ಖಚಿತವಾಗಿಲ್ಲ. ಇಬ್ಬರು ವ್ಯಕ್ತಿಗಳ ನಡುವಿನ ಜಗಳ ಈ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಬೊಗ್ಟುಯಿ ಗ್ರಾಮದ ಭದು ಶೇಖ್ ಮತ್ತು ಸೋನಾ ಶೇಖ್ ಅವರ ನಡುವಿನ ಗಲಾಟೆಯಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:

Birbhum Violence: ಇಬ್ಬರು ಶೇಖ್​ಗಳ ನಡುವಿನ ಹಗೆತನ ಬಂಗಾಳದ ಬೊಗ್ಟುಯಿ ಗ್ರಾಮದ ಹತ್ಯಾಕಾಂಡಕ್ಕೆ ಹೇಗೆ ಕಾರಣವಾಯಿತು ಗೊತ್ತಾ?

ಏನಾಗ್ತಿದೆ ಪಶ್ಚಿಮ ಬಂಗಾಳದಲ್ಲಿ?-ಬಿರ್ಭೂಮ್​ ಹಿಂಸಾಚಾರದ ಭೀಕರತೆಯ ಬೆನ್ನಲ್ಲೇ ಇಬ್ಬರು ಟಿಎಂಸಿ ನಾಯಕರ ಮೇಲೆ ಗಂಭೀರ ಸ್ವರೂಪದ ಹಲ್ಲೆ

Published On - 11:29 am, Fri, 25 March 22