Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಾಗ್ತಿದೆ ಪಶ್ಚಿಮ ಬಂಗಾಳದಲ್ಲಿ?-ಬಿರ್ಭೂಮ್​ ಹಿಂಸಾಚಾರದ ಭೀಕರತೆಯ ಬೆನ್ನಲ್ಲೇ ಇಬ್ಬರು ಟಿಎಂಸಿ ನಾಯಕರ ಮೇಲೆ ಗಂಭೀರ ಸ್ವರೂಪದ ಹಲ್ಲೆ

ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಸ್ಥಳೀಯ ಟಿಎಂಸಿ ಮುಖಂಡನೊಬ್ಬನ ಮೇಲೆ ಗುಂಡಿನ ದಾಳಿಯಾಗಿದ್ದು, ಅವರ ಸ್ಥಿತಿ ಕೂಡ ತೀವ್ರ ಗಂಭೀರವಾಗಿದೆ. ಗಾಯಾಳುವನ್ನು ಸಹದೇವ್​ ಮಂಡಲ್​ ಎಂದು ಗುರುತಿಸಲಾಗಿದೆ.

ಏನಾಗ್ತಿದೆ ಪಶ್ಚಿಮ ಬಂಗಾಳದಲ್ಲಿ?-ಬಿರ್ಭೂಮ್​ ಹಿಂಸಾಚಾರದ ಭೀಕರತೆಯ ಬೆನ್ನಲ್ಲೇ ಇಬ್ಬರು ಟಿಎಂಸಿ ನಾಯಕರ ಮೇಲೆ ಗಂಭೀರ ಸ್ವರೂಪದ ಹಲ್ಲೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 24, 2022 | 10:08 AM

ಪಶ್ಚಿಮ ಬಂಗಾಳದಲ್ಲಿ ಬಿರ್ಭೂಮ್​​ನಲ್ಲಿ ನಡೆದ ಹಿಂಸಾಚಾರ, 8 ಮಂದಿ ಸಜೀವ ದಹನ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅದರ ಬಿಸಿ ಆರುವ ಮುನ್ನವೇ ಇದೀಗ ಇಬ್ಬರು ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರ ಹತ್ಯೆ ನಡೆದಿದೆ. ಇವೆರಡೂ ಪ್ರತ್ಯೇಕ ಪ್ರಕರಣಗಳಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಬರೋಸಾಲ್​ ಗ್ರಾಪ ಪಂಚಾಯಿತಿ ಉಪಾಧ್ಯಕ್ಷ ಭಡು ಶೇಖ್​ ಎಂಬುವರ ಹತ್ಯೆಯಾಗಿತ್ತು. ಇವರೂ ಕೂಡ ಟಿಎಂಸಿ ಮುಖಂಡನೇ ಆಗಿದ್ದರು. ಅವರ ಹತ್ಯೆ ಬೆನ್ನಲ್ಲೇ ಬಿರ್ಭೂಮ್​​ನಲ್ಲಿ ಅವರ ಬೆಂಬಲಿಗರು ದಾಂಧಲೆ ಎಬ್ಬಿಸಿ, ಸಿಕ್ಕಸಿಕ್ಕ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರಕರಣವನ್ನು ಕೊಲ್ಕತ್ತ ಹೈಕೋರ್ಟ್​ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಯಾವುದೇ ಸಾಕ್ಷಿ ನಾಶಕ್ಕೆ ಆಸ್ಪದವಾಗದಂತೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬಿರ್ಭೂಮ್​ ಸಹೀವದಹನದ ಸುದ್ದಿಯೇ ಇನ್ನೂ ಚರ್ಚೆಯಲ್ಲಿದೆ. ಅದರ ಬಿಸಿಯೇ ಇನ್ನೂ ಆರಿಲ್ಲ. ಹೀಗಿರುವಾಗ ಹೂಗ್ಲಿಯ ತಾರಕೇಶ್ವರದ ನೂತನ ಕೌನ್ಸಿಲರ್​, ಟಿಎಂಸಿ ನಾಯಕಿ ರೂಪಾ ಸರ್ಕಾರ್​​ ಮೇಲೆ ದಾಳಿಯಾಗಿದೆ. ಕಾರಿನ ಮೂಲಕ ಅವರಿಗೆ ಡಿಕ್ಕಿ ಹೊಡೆಸಲಾಗಿದ್ದು, ಪರಿಸ್ಥಿತಿ ತುಂಬ ಗಂಭೀರವಾಗಿದೆ. ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು ಸದ್ಯ ರೂಪಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ರಾತ್ರಿ ರೂಪಾ ತಮ್ಮ ಸ್ಕೂಟರ್​ನಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರುತಿ ವ್ಯಾನ್​​ ಬಂದು ಅವರ ಬೈಕ್​​ನ ಹಿಂಬದಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ರೂಪಾ ಇದು ತನ್ನ ಹತ್ಯೆ ಯತ್ನ ಎಂದೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಹಾಗೇ ಇನ್ನೊಂದು ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಸ್ಥಳೀಯ ಟಿಎಂಸಿ ಮುಖಂಡನೊಬ್ಬನ ಮೇಲೆ ಗುಂಡಿನ ದಾಳಿಯಾಗಿದ್ದು, ಅವರ ಸ್ಥಿತಿ ಕೂಡ ತೀವ್ರ ಗಂಭೀರವಾಗಿದೆ. ಗಾಯಾಳುವನ್ನು ಸಹದೇವ್​ ಮಂಡಲ್​ ಎಂದು ಗುರುತಿಸಲಾಗಿದ್ದು, ಸ್ಥಳೀಯ ಟಿಎಂಸಿ ಮುಖಂಡ. ಇವರು ಬೋಗುಲಾ ಗ್ರಾಮ ಪಂಚಾಯಿತಿ ನಂ.2ರ ಸದಸ್ಯೆಯಾದ ಅನಿಮಾ ಮಂಡಲ್​ ಪತಿ. ಗುಂಡೇಟಿನಿಂದ ಗಾಯಗೊಂಡು ಬಿದ್ದಿದ್ದ ಸಹದೇವ್​​ರನ್ನು ಸ್ಥಳೀಯರೇ ರಕ್ಷಣೆ ಮಾಡಿ, ಬಗುಲಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕೃಷ್ಣನಗರದಲ್ಲಿರುವ ಶಕ್ತಿ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾರ್ಚ್​ 22ರ ಮಧ್ಯರಾತ್ರಿ ನಡೆದ ಬಿರ್ಭೂಮ್​ ಹಿಂಸಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳೂ ಬೆಂಕಿಯಲ್ಲಿ ಉರಿದು ದಹನಗೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಂತೂ ಈ ಘಟನೆಯಲ್ಲಿ ಪ್ರತಿಪಕ್ಷಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರ ಪ್ರಕಾರ ಇದು ರಾಜಕೀಯ ಕಾರಣಕ್ಕೆ ನಡೆದ ಹಿಂಸಾಚಾರವಲ್ಲ. ಸದ್ಯ ಪ್ರಕರಣದ ತನಿಖೆಯನ್ನು ಎಲ್ಲ ರೀತಿಯ ಆಯಾಮಗಳಿಂದಲೂ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಟ್ಟ ಹತ್ತುತ್ತಿದ್ದ ಪಾದಯಾತ್ರಿಗಳ ಮೇಲೆರಗಿದ ದೈತ್ಯ ಹಾವು; ಮುಂದೆ ಆಗಿದ್ದೇನು..! ಇಲ್ಲಿದೆ ನೋಡಿ ವೈರಲ್ ವಿಡಿಯೋ

Published On - 9:41 am, Thu, 24 March 22

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ