AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಟ್ಟೆನೋವೆಂದು ಬಿದ್ದಿದ್ದಾಗ ಸಂಪಾದನೆ ಕದ್ದ ಕಳ್ಳರು: ಬೀದಿಬದಿ ವ್ಯಾಪಾರಿಯ ಕಣ್ಣೀರು ಒರೆಸಿದ ಅಪರಿಚಿತ

ದಿನವಿಡೀ ಬಿಸಿಲಿನಲ್ಲಿ ನಿಂತು ಐಸ್​ಕ್ರೀಂ ವ್ಯಾಪಾರ ಮಾಡಿ, ಹೊಟ್ಟೆ ನೋವೆಂದು ಕಣ್ಮುಚ್ಚಿ ಮಲಗಿದ್ದಾಗ, ಐಸ್​ಕ್ರೀಂ ಜತೆಗೆ ದುಷ್ಕರ್ಮಿಗಳು ಆತನ ಜೇಬಿನಲ್ಲಿದ್ದ ಹಣವನ್ನು ಕೂಡ ಕದ್ದೊಯ್ದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನಲ್ಲಿ ನಡೆದ ಅತ್ಯಂತ ಭಾವುಕ  ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿದ್ದು, ನೆಟ್ಟಿಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ಕಷ್ಟಪಟ್ಟು ದುಡಿಯುತ್ತಿದ್ದ ಬಡ ಐಸ್ ಕ್ರೀಮ್ ಮಾರಾಟಗಾರನೊಬ್ಬ ಹೊಟ್ಟೆ ನೋವೆಂದು ಮಲಗಿದ್ದಾಗ ಐಸ್​ಕ್ರೀಂ ಜತೆಗೆ ಜೇಬಿನಲ್ಲಿದ್ದ 500 ರೂ. ಕೂಡಾ ಕಳ್ಳತನ(Theft)ವಾಗಿತ್ತು. ನೋವಿನಿಂದ ಕಣ್ಣೀರಿಡುತ್ತಿದ್ದಾಗ, ಪಂಕಜ್ ಗೊಗೊಯ್ ಎಂಬುವವರು ತಕ್ಷಣವೇ ಆಸರೆಯಾಗಿ ನಿಂತು ಸಹಾಯ ಮಾಡಿರುವ ವೀಡಿಯೊ ಈಗ ವೈರಲ್ ಆಗಿದೆ.

ಹೊಟ್ಟೆನೋವೆಂದು ಬಿದ್ದಿದ್ದಾಗ ಸಂಪಾದನೆ ಕದ್ದ ಕಳ್ಳರು: ಬೀದಿಬದಿ ವ್ಯಾಪಾರಿಯ ಕಣ್ಣೀರು ಒರೆಸಿದ ಅಪರಿಚಿತ
ಐಸ್​ಕ್ರೀಂ ವ್ಯಾಪಾರಿ
ನಯನಾ ರಾಜೀವ್
|

Updated on: Jul 31, 2026 | 9:12 AM

Share

ಗುವಾಹಟಿ, ಜುಲೈ 31: ಅಸ್ಸಾಂನಲ್ಲಿ ನಡೆದ ಅತ್ಯಂತ ಭಾವುಕ  ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿದ್ದು, ನೆಟ್ಟಿಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ಕಷ್ಟಪಟ್ಟು ದುಡಿಯುತ್ತಿದ್ದ ಬಡ ಐಸ್ ಕ್ರೀಮ್ ಮಾರಾಟಗಾರನೊಬ್ಬ ಹೊಟ್ಟೆ ನೋವೆಂದು ಮಲಗಿದ್ದಾಗ ಐಸ್​ಕ್ರೀಂ ಜತೆಗೆ ಜೇಬಿನಲ್ಲಿದ್ದ 500 ರೂ. ಕೂಡಾ ಕಳ್ಳತನ(Theft)ವಾಗಿತ್ತು. ನೋವಿನಿಂದ ಕಣ್ಣೀರಿಡುತ್ತಿದ್ದಾಗ, ಪಂಕಜ್ ಗೊಗೊಯ್ ಎಂಬುವವರು ತಕ್ಷಣವೇ ಆಸರೆಯಾಗಿ ನಿಂತು ಸಹಾಯ ಮಾಡಿರುವ ವೀಡಿಯೊ ಈಗ ವೈರಲ್ ಆಗಿದೆ.

ಐಸ್ ಕ್ರೀಮ್ ಮಾರಾಟಗಾರ ಇಡೀ ದಿನ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ಗಾಡಿಯನ್ನು ತಳ್ಳಿಕೊಂಡು ವ್ಯಾಪಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ತಡೆಯಲಾಗದೆ ಆತ ಬಂಡಿಯನ್ನು ರಸ್ತೆಬದಿಯಲ್ಲೇ ನಿಲ್ಲಿಸಿ ಸ್ವಲ್ಪ ಹೊತ್ತು ನೆಲದ ಮೇಲೆ ವಿಶ್ರಾಂತಿ ಪಡೆದಿದ್ದಾರೆ. ಎಚ್ಚರಗೊಂಡು ನೋಡಿದಾಗ, ಕರುಣೆಯಿಲ್ಲದ ಕಳ್ಳರು ಆತನ ಬಂಡಿಯಲ್ಲಿದ್ದ ಎಲ್ಲಾ ಐಸ್ ಕ್ರೀಮ್‌ಗಳು ಹಾಗೂ ಆ ದಿನದ ಸಂಪೂರ್ಣ ದುಡಿಮೆಯಾಗಿದ್ದ 500 ರೂ.ವನ್ನು ಕದ್ದೊಯ್ದಿದ್ದರು.

ತನ್ನ ಇಡೀ ದಿನದ ಶ್ರಮ ಹಾಗೂ ಬಂಡವಾಳವೆಲ್ಲವೂ ಕಳೆದುಹೋಯಿತಲ್ಲಾ ಎಂದು ಆತ ರಸ್ತೆಬದಿಯಲ್ಲೇ ಕುಳಿತು ಕಣ್ಣೀರು ಸುರಿಸಲಾರಂಭಿಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಕಂಟೆಂಟ್ ಕ್ರಿಯೇಟರ್ ಪಂಕಜ್ ಗೊಗೊಯ್ ಅವರು ಕಣ್ಣೀರಿಡುತ್ತಿದ್ದ ವ್ಯಾಪಾರಿಯನ್ನು ಕಂಡು ಹತ್ತಿರ ಹೋಗಿ ವಿಚಾರಿಸಿದ್ದಾರೆ. ವ್ಯಾಪಾರಿ ತನಗಾದ ಅನ್ಯಾಯ ಮತ್ತು ಕಷ್ಟವನ್ನು ವಿವರಿಸಿದಾಗ, ಪಂಕಜ್ ತಕ್ಷಣವೇ ಸ್ಪಂದಿಸಿದ್ದಾರೆ. ಮೊದಲು ಆತನನ್ನು ಹೊಟೇಲ್‌ಗೆ ಕರೆದೊಯ್ದು ಹೊಟ್ಟೆತುಂಬ ಬಿಸಿ ಊಟ ಮಾಡಿಸಿದ್ದಾರೆ. ವ್ಯಾಪಾರಿಯ ಕುಟುಂಬಕ್ಕೆ ನೆರವಾಗಲು ಅಕ್ಕಿ, ಹಾಲು, ಬಿಸ್ಕತ್ತು ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನು ಖರೀದಿಸಿಕೊಟ್ಟು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ವಿಡಿಯೋ

ಇನ್‌ಸ್ಟಾಗ್ರಾಮ್ ಹಾಗೂ ‘ಎಕ್ಸ್’ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಡಿಯೊ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಸುಡುವ ಬಿಸಿಲಿನಲ್ಲಿ 10 ರೂ. ಗಳಿಸಲು ಎಷ್ಟು ಶ್ರಮ ಪಡಬೇಕು ಎಂಬುದು ಈ ಬಡ ವ್ಯಾಪಾರಿಗೆ ಮಾತ್ರ ಗೊತ್ತು. ಇಂತಹವರ ಹೊಟ್ಟೆಗೆ ಹೊಡೆಯುವ ಕಳ್ಳರಿಗೆ ಕರುಣೆಯಿಲ್ಲ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ಹಾಸನ: ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಗೆ ಕನ್ನ ಹಾಕಿದ ಸೊಸೆ; ಸಿಕ್ಕಿಬಿದ್ದಿದ್ಹೇಗೆ?

ಪಂಕಜ್ ಅವರ ಈ ಸಣ್ಣ ಸಹಾಯ ಇಡೀ ಸಮಾಜಕ್ಕೆ ಪ್ರೇರಣೆ. ಒಬ್ಬರಿಗೊಬ್ಬರು ಸಹಾಯ ಮಾಡುವ ಇಂತಹ ಮಾನವೀಯ ಗುಣಗಳು ಜಗತ್ತಿನಲ್ಲಿ ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ನೆಟ್ಟಿಗರು ಪಂಕಜ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ