ಒಂದು ಹಳ್ಳಿಯಲ್ಲಿ ರುಂಡ, ಮತ್ತೊಂದು ಹಳ್ಳಿಯಲ್ಲಿ ದೇಹದ ಇತರೆ ಭಾಗಗಳು ಪತ್ತೆ
ಐದು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ದೇಹದ ಭಾಗಗಳು ಎರಡು ಹಳ್ಳಿಗಳಲ್ಲಿ ಪತ್ತೆಯಾಗಿವೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಯುವಕನ ಶವವನ್ನು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಖೈರಿ ಗ್ರಾಮದ ಹೊಲದಿಂದ ಯುವಕನ ಮುಂಡ ಪತ್ತೆಯಾಗಿದ್ದು, ನಯಿ ಪೂರ್ವಾ ಎಂಬ ಮತ್ತೊಂದು ಹಳ್ಳಿಯಿಂದ ಆತನ ರುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಉತ್ತರ ಪ್ರದೇಶ, ಮಾರ್ಚ್ 16: ಐದು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ದೇಹದ ಭಾಗಗಳು ಎರಡು ಹಳ್ಳಿಗಳಲ್ಲಿ ಪತ್ತೆಯಾಗಿವೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಯುವಕನ ಶವವನ್ನು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖೈರಿ ಗ್ರಾಮದ ಹೊಲದಿಂದ ಯುವಕನ ಮುಂಡ ಪತ್ತೆಯಾಗಿದ್ದು, ನಯಿ ಪೂರ್ವಾ ಎಂಬ ಮತ್ತೊಂದು ಹಳ್ಳಿಯಿಂದ ಆತನ ರುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವ ಪತ್ತೆಯಾದ ನಂತರ, ಕುಟುಂಬ ಸದಸ್ಯರು ಕೊಲೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಸ್ತುತ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕೊತ್ವಾಲಿ (ನಗರ) ಉಸ್ತುವಾರಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಮಿಶ್ರಾ ಭಾನುವಾರ ಘಟನೆಯ ಬಗ್ಗೆ ಮಾಹಿತಿ ನೀಡಿದರು. ದತ್ ನಗರದ ನಿವಾಸಿ ಇಂದ್ರಭಾನ್ ಅಲಿಯಾಸ್ ಛೋಟು ಸಿಂಗ್ (25) ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: 4 ಎಸೆತಗಳಲ್ಲಿ 20 ರನ್ ಚಚ್ಚಿ ಮ್ಯಾಚ್ ಗೆಲ್ಲಿಸಿದ್ದಕ್ಕೆ ಕೊಲೆ? ಯುವಕ ಸಾವಿನ ಸುತ್ತ ಅನುಮಾನಗಳ ಹುತ್ತ!
ಅವರು ಕಣ್ಮರೆಯಾದ ನಂತರ, ಅವರ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ದೂರು ಸ್ವೀಕರಿಸಿದ ನಂತರ ಪೊಲೀಸ್ ತಂಡವೂ ಆತನನ್ನು ಹುಡುಕುತ್ತಿತ್ತು. ಶನಿವಾರ ಸಂಜೆ, ದತ್ ನಗರ ಮತ್ತು ಖೈರಿ ಗ್ರಾಮದ ನಡುವಿನ ಹೊಲದಲ್ಲಿ ಗ್ರಾಮಸ್ಥರು ಮೃತ ದೇಹವನ್ನು ನೋಡಿದರು. ವಿವಿಧ ಸ್ಥಳಗಳಲ್ಲಿ ಯುವಕನ ದೇಹದ ಭಾಗಗಳು ದೊರೆತಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ಪೊಲೀಸರು ಪಂಚನಾಮವನ್ನು ಭರ್ತಿ ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಉಸ್ತುವಾರಿ ಇನ್ಸ್‌ಪೆಕ್ಟರ್ ಸಂತೋಷ್ ಮಿಶ್ರಾ ತಿಳಿಸಿದ್ದಾರೆ. ಕೊಲೆಯ ಶಂಕೆ ವ್ಯಕ್ತಪಡಿಸಿ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ