ಜನರಿಂದ ಹಲ್ಲೆಗೊಳಗಾಗುತ್ತಿದ್ದ ವ್ಯಕ್ತಿಯ ರಕ್ಷಿಸಲು ಹೋದ ಪೊಲೀಸರನ್ನೂ ಹೊಡೆದು ಕೊಂದ್ರು
ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದ್ದು, ಆತನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಯನ್ನು ಕೂಡ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ನಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ, ಎಎಸ್‌ಐ ಸಾವನ್ನಪ್ಪಿದ್ದಾರೆ. ಉಪ ಪೊಲೀಸ್ ಮಹಾನಿರ್ದೇಶಕ ಸಾಕೇತ್ ಪಾಂಡೆ ಅವರ ಪ್ರಕಾರ, ಒಬ್ಬ ಎಎಸ್ಐ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು, ಇತರ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಮಧ್ಯಪ್ರದೇಶ, ಮಾರ್ಚ್ 16: ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದ್ದು, ಆತನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಯನ್ನು ಕೂಡ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ನಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ, ಎಎಸ್‌ಐ ಸಾವನ್ನಪ್ಪಿದ್ದಾರೆ.
ಉಪ ಪೊಲೀಸ್ ಮಹಾನಿರ್ದೇಶಕ ಸಾಕೇತ್ ಪಾಂಡೆ ಅವರ ಪ್ರಕಾರ, ಒಬ್ಬರು ಎಎಸ್ಐ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು, ಇತರ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವು ತಿಂಗಳ ಹಿಂದೆ ಅಶೋಕ್ ಕುಮಾರ್ ಎಂಬ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಕೊಂದಿದ್ದಾನೆಂದು ನಂಬಿ ಕೋಲ್ ಬುಡಕಟ್ಟು ಜನಾಂಗದ ಗುಂಪೊಂದು ಸನ್ನಿ ದ್ವಿವೇದಿಯನ್ನು ಅಪಹರಿಸಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಪೊಲೀಸ್ ದಾಖಲೆಗಳು ಕುಮಾರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸುತ್ತವೆ.
ಈ ಬಗ್ಗೆ ಮಾಹಿತಿ ಪಡೆದ ಶಹಪುರ ಪೊಲೀಸ್ ಠಾಣಾಧಿಕಾರಿ ಸಂದೀಪ್ ಭಾರ್ತಿಯ ನೇತೃತ್ವದ ತಂಡವು ದ್ವಿವೇದಿಯನ್ನು ರಕ್ಷಿಸಲು ಗದ್ರಾ ಗ್ರಾಮಕ್ಕೆ ಧಾವಿಸಿತು. ಆದರೆ ಅವರು ಬರುವ ಹೊತ್ತಿಗೆ, ಅವರನ್ನು ಆಗಲೇ ಥಳಿಸಿ ಹತ್ಯೆ ಮಾಡಿ, ಕೋಣೆಯಲ್ಲಿ ಎಸೆಯಲಾಗಿತ್ತು.
ಮತ್ತಷ್ಟು ಓದಿ: ಒಂದು ಹಳ್ಳಿಯಲ್ಲಿ ರುಂಡ, ಮತ್ತೊಂದು ಹಳ್ಳಿಯಲ್ಲಿ ದೇಹದ ಇತರೆ ಭಾಗಗಳು ಪತ್ತೆ
ಪೊಲೀಸರು ಬಾಗಿಲು ತೆರೆದಾಗ, ಜನರು ಅವರ ಮೇಲೆ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ, ಹಲವಾರು ಸಿಬ್ಬಂದಿಗೆ ಗಾಯಗಳಾಗಿದ್ದವು. ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಯಿತು, ಆದರೆ ವಿಶೇಷ ಸಶಸ್ತ್ರ ಪಡೆಗಳ ಎಎಸ್ಐ ಚರಣ್ ಗೌತಮ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಹೆಚ್ಚಿನ ಹಿಂಸಾಚಾರವನ್ನು ತಡೆಗಟ್ಟಲು ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತದ ಸೆಕ್ಷನ್ 163 ಅನ್ನು ವಿಧಿಸಲಾಗಿದೆ ಎಂದು ಮೌಗಂಜ್ ಕಲೆಕ್ಟರ್ ಅಜಯ್ ಶ್ರೀವಾಸ್ತವ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಚನಾ ಠಾಕೂರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ