AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಕ್ಸ್ ಫ್ರೀಡ್​ಮ್ಯಾನ್ ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ದುರಂತದ ಅಸಲಿಯತ್ತು ಬಿಚ್ಚಿಟ್ಟ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಲೆಕ್ಸ್ ಫ್ರೀಡ್‌ಮ್ಯಾನ್ ಅವರೊಂದಿಗಿನ ಸಂದರ್ಶನದಲ್ಲಿ 2002ರ ಗೋಧ್ರಾ ರೈಲು ಹತ್ಯಾಕಾಂಡ ಮತ್ತು ಅದರ ನಂತರದ ಗುಜರಾತ್‌ನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಗುಜರಾತ್‌ನಲ್ಲಿ 2002ರ ನಂತರ ದೊಡ್ಡ ಪ್ರಮಾಣದ ಗಲಭೆಗಳು ನಡೆದಿಲ್ಲ. ಗುಜರಾತ್ ಸಂಪೂರ್ಣವಾಗಿ ಶಾಂತವಾಗಿದೆ ಎಂದು ಹೇಳಿದ್ದಾರೆ.

ಲೆಕ್ಸ್ ಫ್ರೀಡ್​ಮ್ಯಾನ್ ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ದುರಂತದ ಅಸಲಿಯತ್ತು ಬಿಚ್ಚಿಟ್ಟ ಪ್ರಧಾನಿ ಮೋದಿ
ಲೆಕ್ಸ್ ಫ್ರೀಡ್​ಮ್ಯಾನ್ ಪಾಡ್‌ಕ್ಯಾಸ್ಟ್‌ನಲ್ಲಿ ಗೋಧ್ರಾ ದುರಂತದ ಅಸಲಿಯತ್ತು ಬಿಚ್ಚಿಟ್ಟ ಪ್ರಧಾನಿ ಮೋದಿ
ಗಂಗಾಧರ​ ಬ. ಸಾಬೋಜಿ
|

Updated on:Mar 16, 2025 | 8:14 PM

Share

ನವದೆಹಲಿ, ಮಾರ್ಚ್ 16: 2002ರ ಗೋಧ್ರಾ ರೈಲು ಹತ್ಯಾಕಾಂಡ ಊಹಿಸಲಾಗದಷ್ಟು ದೊಡ್ಡ ಪ್ರಮಾಣದ ದುರಂತ. ಇದು ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. ಅಮೆರಿಕದ ಸಂಶೋಧಕ ವಿಜ್ಞಾನಿ ಹಾಗೂ ಖ್ಯಾತ ಪೋಡ್​​ಕ್ಯಾಸ್ಟರ್ ಆದ ಲೆಕ್ಸ್ ಫ್ರೀಡ್​​ಮ್ಯಾನ್ (Lex Fridman) ಅವರೊಂದಿಗೆ ನಡೆದ ಸುದೀರ್ಘ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗುಜರಾತ್‌ನಲ್ಲಿ ನಡೆದ ಗಲಭೆಗಳು, ಹಿಂಸಾಚಾರದ ಘಟನೆಗಳು, ವ್ಯಾಪಕ ಟೀಕೆಗಳು ಮತ್ತು ಅವುಗಳನ್ನು ಎದುರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಗಲಭೆಗೆ ಮುಂಚಿನ ಗುಜರಾತ್​ ಮತ್ತು ನಂತರದ ಗುಜರಾತ್ ಹೇಗಿತ್ತು ಎಂಬುವುದನ್ನು ಪ್ರಧಾನಿ ಮೋದಿ ವಿವರಿಸಿದ್ದು, 2002ರ ನಂತರ, 22 ವರ್ಷಗಳಲ್ಲಿ ಗುಜರಾತ್‌ನಲ್ಲಿ ಒಂದೇ ಒಂದು ದೊಡ್ಡ ಗಲಭೆ ನಡೆದಿಲ್ಲ. ಹಾಗಾಗಿ ಗುಜರಾತ್ ಸಂಪೂರ್ಣವಾಗಿ ಶಾಂತಿಯುತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಅಮೆರಿಕನ್ ಪೋಡ್​​ಕ್ಯಾಸ್ಟರ್ ಲೆಕ್ಸ್ ಫ್ರೀಡ್​​ಮ್ಯಾನ್​​ಗೆ ಮೂರು ಗಂಟೆ ಹದಿನೇಳು ನಿಮಿಷ ನರೇಂದ್ರ ಮೋದಿ ಸುದೀರ್ಘ ಸಂದರ್ಶನ

ಇದನ್ನೂ ಓದಿ
Image
ಲೆಕ್ಸ್ ಪೋಡ್​ಕ್ಯಾಸ್ಟ್​​ನಲ್ಲಿ ಪಾಕಿಸ್ತಾನವನ್ನು ಕುಟುಕಿದ ಮೋದಿ
Image
ಅಮೆರಿಕನ್ ಪೋಡ್​​ಕ್ಯಾಸ್ಟರ್ ಜೊತೆ ನರೇಂದ್ರ ಮೋದಿ ಮಹಾಸಂದರ್ಶನ
Image
ಲೆಕ್ಸ್ ಫ್ರಿಡ್‌ಮನ್ ಜೊತೆ ಪ್ರಧಾನಿ ಮೋದಿಯ ಪಾಡ್‌ಕ್ಯಾಸ್ಟ್ ನಾಳೆ ಪ್ರಸಾರ
Image
ಮೋದಿಯಂಥ ನಾಯಕರು ಟೆಂಟ್‌, ರಸ್ತೆಗುಂಡಿ ನೋಡುವುದು ನನಗಿಷ್ಟವಿಲ್ಲ; ಟ್ರಂಪ್

ಆ ಸಮಯದಲ್ಲಿ, ವಿಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು. ಸ್ವಾಭಾವಿಕವಾಗಿ ಅವರು ನಮ್ಮ ಮೇಲಿನ ಎಲ್ಲಾ ಆರೋಪಗಳು ಹಾಗೆಯೇ ಇರಬೇಕೆಂದು ಬಯಸಿದ್ದರು. ಅವರ ಅವಿರತ ಪ್ರಯತ್ನಗಳ ಹೊರತಾಗಿಯೂ, ನ್ಯಾಯಾಂಗವು ಪರಿಸ್ಥಿತಿಯನ್ನು ಎರಡು ಬಾರಿ ಸೂಕ್ಷ್ಮವಾಗಿ ಅಲೋಕಿಸಿ, ಅಂತಿಮವಾಗಿ ನಾವು ಸಂಪೂರ್ಣವಾಗಿ ನಿರಪರಾಧಿಗಳು ಎಂದು ಘೋಷಿಸಿತು. ನಿಜವಾಗಿಯೂ ಜವಾಬ್ದಾರರಾಗಿರುವವರು ನ್ಯಾಯಾಲಯದಿಂದ ನ್ಯಾಯವನ್ನು ಎದುರು ನೋಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಯಾನಕ ಗೋಧ್ರಾ ದುರಂತ ನೆನಪಿಸಿಕೊಂಡ ಮೋದಿ

2002 ಫೆಬ್ರವರಿ 24ರಂದು, ನಾನು ಮೊದಲ ಬಾರಿಗೆ ಶಾಸಕನಾದೆ. ಫೆಬ್ರವರಿ 24, 25, ಅಥವಾ 26 ರ ಸುಮಾರಿಗೆ ನಾನು ಮೊದಲ ಬಾರಿಗೆ ಗುಜರಾತ್ ವಿಧಾನಸಭೆಗೆ ಕಾಲಿಟ್ಟೆ. 2002 ಫೆಬ್ರವರಿ 27 ರಂದು, ನಾವು ಬಜೆಟ್ ಅಧಿವೇಶನಕ್ಕಾಗಿ ವಿಧಾನಸಭೆಯಲ್ಲಿ ಕುಳಿತಿದ್ದೆವು. ನಾನು ರಾಜ್ಯ ಪ್ರತಿನಿಧಿಯಾಗಿ ಕೇವಲ ಮೂರು ದಿನವಾಗಿತ್ತು. ಆಗ ಇದ್ದಕ್ಕಿದ್ದಂತೆ ಭಯಾನಕ ಗೋಧ್ರಾ ಘಟನೆ ಸಂಭವಿಸಿತು. ಇದು ಊಹಿಸಲಾಗದಷ್ಟು ದೊಡ್ಡ ದುರಂತವಾಗಿತ್ತು. ಜನರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಪರಿಸ್ಥಿತಿ ಎಷ್ಟು ಉದ್ವಿಗ್ನ ಮತ್ತು ಅಸ್ಥಿರವಾಗಿತ್ತು ಎಂಬುದನ್ನು ನೀವು ಊಹಿಸಬಹುದು ಎಂದಿದ್ದಾರೆ.

ಗೋಧ್ರಾ ದುರಂತ ಸೇರಿದಂತೆ ಇನ್ನು ಕೆಲ ದುರಂತಗಳನ್ನು ಇದುವರೆಗಿನ ಅತಿದೊಡ್ಡ ಗಲಭೆಗಳು ಎಂಬ ಗ್ರಹಿಕೆ ವಾಸ್ತವವಾಗಿ ತಪ್ಪು ಕಲ್ಪನೆಯಾಗಿದೆ. 2002 ಕ್ಕಿಂತ ಹಿಂದಿನ ಅಂಕಿಅಂಶಗಳನ್ನು ನೀವು ಪರಿಶೀಲಿಸಿದರೆ, ಗುಜರಾತ್​ ಆಗಾಗ ಗಲಭೆಗಳನ್ನು ಎದುರಿಸಿದೆ. ಎಲ್ಲೋ ಒಂದು ಕಡೆ ಕರ್ಫ್ಯೂ ವಿಧಿಸಲಾಗುತ್ತಿತ್ತು. ಗಾಳಿಪಟ ಹಾರಿಸುವ ಸ್ಪರ್ಧೆಗಳು ಅಥವಾ ಕ್ಷುಲ್ಲಕ ವಿಚಾರಗಳಿಗೆ ಕೋಮು ಹಿಂಸಾಚಾರ ಭುಗಿಲೆದ್ದಿರಬಹುದು. 2002 ಕ್ಕಿಂತ ಮೊದಲು ಗುಜರಾತ್ 250ಕ್ಕೂ ಹೆಚ್ಚು ಮಹತ್ವದ ಗಲಭೆಗಳಿಗೆ ಸಾಕ್ಷಿಯಾಗಿತ್ತು. 1969 ರಲ್ಲಿ ನಡೆದ ಗಲಭೆಗಳು ಸುಮಾರು ಆರು ತಿಂಗಳು ಕಾಲ ಪ್ರಚಲಿತವಾಗಿದ್ದವು ಎಂದರು.

ಇದನ್ನೂ ಓದಿ: ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ಕೃತ್ಯ ನಡೆದರೂ ಅದರ ಮೂಲ ಪಾಕಿಸ್ತಾನದಲ್ಲೇ ಇರುತ್ತೆ: ಲೆಕ್ಸ್ ಫ್ರೀಡ್​ಮ್ಯಾನ್ ಸಂದರ್ಶನದಲ್ಲಿ ನರೇಂದ್ರ ಮೋದಿ ಕಿಡಿ

ನಾವು ತುಷ್ಟೀಕರಣ ರಾಜಕೀಯದಿಂದ ಆಕಾಂಕ್ಷೆಯ ರಾಜಕೀಯಕ್ಕೆ ಬದಲಾಯಿಸಿದ್ದೇವೆ. ಇದರಿಂದಾಗಿ ಅಭಿವೃದ್ಧಿ ಬಯಸುವ ಯಾರಾದರೂ ನಮ್ಮೊಂದಿಗೆ ಸ್ವಇಚ್ಛೆಯಿಂದ ಜೊತೆಗೂಡುತ್ತಾರೆ. ಗುಜರಾತ್ ಅನ್ನು ಉತ್ತಮವಾಗಿ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಗುಜರಾತ್​​ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:55 pm, Sun, 16 March 25

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ