ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಜೊತೆ ಪ್ರಧಾನಿ ಮೋದಿಯ ವಿಶೇಷ ಪಾಡ್‌ಕ್ಯಾಸ್ಟ್ ನಾಳೆ ಪ್ರಸಾರ
ಅಮೆರಿಕದ ಪಾಡ್‌ಕ್ಯಾಸ್ಟರ್ ಹಾಗೂ ಕಂಪ್ಯೂಟರ್ ವಿಜ್ಞಾನಿಯೂ ಆಗಿರುವ ಲೆಕ್ಸ್ ಫ್ರಿಡ್‌ಮನ್ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂದರ್ಶನವನ್ನು 'ತಮ್ಮ ಜೀವನದ ಅತ್ಯಂತ ಮರೆಯಲಾಗದ ಅನುಭವಗಳಲ್ಲಿ ಒಂದು' ಎಂದು ಹೇಳಿಕೊಂಡಿದ್ದಾರೆ. ಫ್ರಿಡ್‌ಮನ್ ಜನವರಿ 19ರಂದು ಸಂದರ್ಶನವನ್ನು ಘೋಷಿಸಿದ್ದರು. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುವ ಯೋಜನೆಯನ್ನು ಅವರು ಬಹಿರಂಗಪಡಿಸಿದ್ದರು. "ನಾನು ಭಾರತಕ್ಕೆ ಎಂದಿಗೂ ಹೋಗಿಲ್ಲ, ಆದ್ದರಿಂದ ಅಂತಿಮವಾಗಿ ಅಲ್ಲಿಗೆ ಭೇಟಿ ನೀಡಲು ಮತ್ತು ಅದರ ಐತಿಹಾಸಿಕ ಸಂಸ್ಕೃತಿಯ ಹಲವು ಅಂಶಗಳನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಅನುಭವಿಸಲು ನಾನು ಉತ್ಸುಕನಾಗಿದ್ದೇನೆ" ಎಂದು ಅವರು ಹೇಳಿದ್ದರು.

ನವದೆಹಲಿ, (ಮಾರ್ಚ್ 15): ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಅಮೆರಿಕದ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರ ಬಹುನಿರೀಕ್ಷಿತ ಪಾಡ್‌ಕ್ಯಾಸ್ಟ್ ಭಾನುವಾರ (ಮಾರ್ಚ್ 16) ಬಿಡುಗಡೆಯಾಗಲಿದೆ. ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ಲೆಕ್ಸ್ ಫ್ರಿಡ್‌ಮನ್, 3 ಗಂಟೆಗಳ ಚರ್ಚೆಯನ್ನು ತಮ್ಮ ಜೀವನದ ಅತ್ಯಂತ ಉತ್ತಮ ಅನುಭವಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. “ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು 3 ಗಂಟೆಗಳ ಪಾಡ್‌ಕ್ಯಾಸ್ಟ್ ಸಂಭಾಷಣೆ ನಡೆಸಿದೆ. ಇದು ನನ್ನ ಜೀವನದ ಅತ್ಯುತ್ತಮ ಸಂಭಾಷಣೆಗಳಲ್ಲಿ ಒಂದಾಗಿದೆ. ಇದು ನಾಳೆ ಪ್ರಸಾರವಾಗಲಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಲೆಕ್ಸ್ ಫ್ರಿಡ್‌ಮನ್ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಈ ಸುದ್ದಿ ಹಂಚಿಕೊಂಡಿರುವ ಲೆಕ್ಸ್ ಫ್ರಿಡ್‌ಮನ್, ಪ್ರಧಾನಿ ಮೋದಿಯೊಂದಿಗೆ 3 ಗಂಟೆಗಳ ಕಾಲ ನಡೆದ ಅದ್ಭುತ ಸಂಭಾಷಣೆ ನಡೆಸಿರುವುದಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಯುಎಸ್ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್ ಭಾನುವಾರ ಬಿಡುಗಡೆಯಾಗಲಿದೆ. ಪಾಡ್‌ಕ್ಯಾಸ್ಟರ್ ಫ್ರಿಡ್‌ಮನ್ ಪ್ರಧಾನಿ ಮೋದಿಯವರನ್ನು ಸಂದರ್ಶಿಸಲು ಕಳೆದ ತಿಂಗಳು ಭಾರತಕ್ಕೆ ಬಂದಿದ್ದರು. ತಮ್ಮ ಭೇಟಿಗೂ ಮುನ್ನ ಭಾರತದ ಇತಿಹಾಸ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಗಂಟೆಗಟ್ಟಲೆ ಸಂವಹನ ನಡೆಸುವ ತಮ್ಮ ಸಂತೋಷ ಮತ್ತು ಉತ್ಸಾಹವನ್ನು ಫ್ರಿಡ್‌ಮನ್ ವ್ಯಕ್ತಪಡಿಸಿದ್ದರು.
I had an epic 3-hour podcast conversation with @narendramodi, Prime Minister of India.
It was one of the most powerful conversations of my life.
It’ll be out tomorrow. pic.twitter.com/KmRSFfVRKg
— Lex Fridman (@lexfridman) March 15, 2025
ಇದನ್ನೂ ಓದಿ: ಮೋದಿಯಂಥ ನಾಯಕರು ವಾಷಿಂಗ್ಟನ್ನಲ್ಲಿ ಟೆಂಟ್, ರಸ್ತೆಗುಂಡಿಗಳನ್ನು ನೋಡುವುದು ನನಗಿಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ಪ್ರಧಾನಿ ಮೋದಿ ಅವರು “ನಾನು ಅಧ್ಯಯನ ಮಾಡಿದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬರು” ಎಂದು ಫ್ರಿಡ್‌ಮನ್ ಹೇಳಿದ್ದರು. ಜನವರಿ 19ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ಮೋದಿಯವರನ್ನು ಸಂದರ್ಶಿಸುವ ವಿಷಯವನ್ನು ಫ್ರಿಡ್‌ಮನ್ ಘೋಷಿಸಿದ್ದರು.
It was indeed a fascinating conversation with @lexfridman, covering diverse topics including reminiscing about my childhood, the years in the Himalayas and the journey in public life.
Do tune in and be a part of this dialogue! https://t.co/QaJ04qi1TD
— Narendra Modi (@narendramodi) March 15, 2025
“ಫೆಬ್ರವರಿ ಅಂತ್ಯದಲ್ಲಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಾಡ್‌ಕ್ಯಾಸ್ಟ್ ಮಾಡುತ್ತೇನೆ. ನಾನು ಭಾರತಕ್ಕೆ ಎಂದಿಗೂ ಹೋಗಿಲ್ಲ, ಆದ್ದರಿಂದ ಅಲ್ಲಿಗೆ ಭೇಟಿ ನೀಡಿ ಅದರ ರೋಮಾಂಚಕ, ಐತಿಹಾಸಿಕ ಸಂಸ್ಕೃತಿಯ ಹಲವು ಅಂಶಗಳನ್ನು ಸಂಪೂರ್ಣವಾಗಿ ಅನುಭವಿಸಲು ನಾನು ಉತ್ಸುಕನಾಗಿದ್ದೇನೆ” ಎಂದು ಫ್ರಿಡ್‌ಮನ್ ಹೇಳಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Sat, 15 March 25








