ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮರಳಿ ಕರೆತರಲು ಸ್ಪೇಸ್‌ಎಕ್ಸ್, ನಾಸಾ ಕಾರ್ಯಾಚರಣೆ
ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಶುಕ್ರವಾರ ಬಹುನಿರೀಕ್ಷಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಈಗಾಗಲೇ ಈ ಕಾರ್ಯಚರಣೆಯನ್ನು ಆರಂಭಿಸಿದ್ದು ಅವರನ್ನು ತಲುಪು ಪ್ರಯತ್ನವನ್ನು ಮಾಡಿದೆ. ಒಂದು ವೇಳೆ ಅವರನ್ನು ಯಶಸ್ವಿಯಾಗಿ ತಲುಪಿದರೆ, ಮಾರ್ಚ್ 20ರಂದು ಭೂಮಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಭಾರೀ ಸದ್ದು ಮಾಡಿದ್ದ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆದುಕೊಂಡು ಬರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಶುಕ್ರವಾರ ಬಹುನಿರೀಕ್ಷಿತ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ನ್ನು ಈ ಕಾರ್ಯಚರಣೆಯಲ್ಲಿ ಉಪಯೋಗಿಸಲಾಗಿದೆ. ಬೋಯಿಂಗ್‌ನ ಸ್ಟಾರ್‌ಲೈನರ್ ಸಮಸ್ಯೆಗಳಿಂದಾಗಿ ಒಂಬತ್ತು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಶುಕ್ರವಾರ ಸಂಜೆ 7:03 ಕ್ಕೆ EDT (ಶನಿವಾರ ಬೆಳಿಗ್ಗೆ 4:30 ಕ್ಕೆ IST) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕ್ರೂ-10 ಮಿಷನ್ ಅನ್ನು ಪ್ರಾರಂಭಿಸಿದೆ.
ಕ್ರೂ-10 ಕಾರ್ಯಾಚರಣೆಯಲ್ಲಿ ಫಾಲ್ಕನ್ 9 ರಾಕೆಟ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ದಿತು.ಈ ಕಾರ್ಯಾಚರಣೆಯು ನಾಲ್ಕು ಸಿಬ್ಬಂದಿಯನ್ನು ISS ಗೆ ಕಳುಹಿಸಿತು. ನಾಸಾ ಗಗನಯಾತ್ರಿಗಳಾದ ಆನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಅಯರ್ಸ್, JAXA (ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ) ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಯಿತು.
ಸ್ಪೇಸ್‌ಎಕ್ಸ್‌ನ ಮಾನವ ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಯಡಿಯಲ್ಲಿ ಕ್ರೂ-10 10ನೇ ಸಿಬ್ಬಂದಿ ಸಂಪೂರ್ಣ ಕಾರ್ಯಾಚರಣೆಯಾಗಿದೆ ಮತ್ತು ಡೆಮೊ-2 ಪರೀಕ್ಷಾ ಹಾರಾಟ ಸೇರಿದಂತೆ ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಚರಣೆ ಮೂಲಕ ISS ನಿಲ್ದಾಣಕ್ಕೆ ಸಿಬ್ಬಂದಿಯೊಂದಿಗೆ 11ನೇ ಹಾರಾಟವಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಐಎಸ್‌ಎಸ್‌ಗೆ ತಲುಪಿದ ನಂತರ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಒಂಬತ್ತು ತಿಂಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರು ಸುಮಾರು ಒಂದು ವಾರ ಅಲ್ಲಿಯೇ ಇರಬೇಕಿತ್ತು.
ಇದನ್ನೂ ಓದಿ: ನನ್ನ ಎದುರಾಳಿಗಳನ್ನು ಜೈಲಿಗೆ ಹಾಕುವೇ, ನ್ಯಾಯಂಗ ಇಲಾಖೆ ಭಾಷಣದಲ್ಲಿ ಅಬ್ಬರಿಸಿ ಬೊಬ್ಬರಿದ ಟ್ರಂಪ್
ಉಡಾವಣೆಗೂ ಮುನ್ನ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ನಾಸಾದ ಸ್ಪೇಸ್‌ಎಕ್ಸ್ ಕ್ರೂ -10 ಗೆ ಬೆಂಬಲ ವ್ಯಕ್ತಪಡಿಸಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.X ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹೆಗ್ಸೆತ್, “ನಾವು ನಿಮಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. “ನಾವು ನಿಮಗೆ ದೇವರ ಆಶೀರ್ವಾದವನ್ನು ಬಯಸುತ್ತೇವೆ ಮತ್ತು ನಿಮ್ಮೆಲ್ಲರನ್ನೂ ಶೀಘ್ರದಲ್ಲೇ ಭೂಮಿಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಅವರು ಹೇಳಿದರು.
ಇನ್ನು ಈ ಬಗ್ಗೆ ಟ್ರಂಪ್ ಕೂಡ ಎಲೋನ್ ಮಸ್ಕ್ ಅವರ ಜತೆಗೆ ಮಾತುಕತೆ ನಡೆಸಿ, ಗಗನಯಾತ್ರಿಗಳನ್ನು ಮತ್ತೆ ಭೂಮಿಗೆ ಕರೆದುಕೊಂಡು ಬರುವ ಕೆಲಸವನ್ನು ಮಾಡಿ ಎಂದು ಹೇಳಿದ್ದಾರೆ. ಇದಕ್ಕೆ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿವೃತ್ತ ಯುಎಸ್ ನೌಕಾಪಡೆಯ ಕ್ಯಾಪ್ಟನ್ ಬುಚ್ ವಿಲ್ಮೋರ್ ಮತ್ತು ನಿವೃತ್ತ ಯುಎಸ್ ನೌಕಾಪಡೆಯ ಕ್ಯಾಪ್ಟನ್ ಸುನಿ ವಿಲಿಯಮ್ಸ್ ಎಂದು ಹೇಳಲಾಗಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ