ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ ಸ್ವೀಕಾರ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಯುಎಸ್ ಜೊತೆಗಿನ ಸಂಬಂಧಗಳು ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಕೆನಡಾದ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ ಸ್ವೀಕರಿಸಿರುವುದು ದೇಶದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಕೆನಡಾ ಪ್ರಧಾನಿಯಾಗಿದ್ದ ಜಸ್ಟಿನ್ ಟ್ರುಡೊ ಅವರ ನಂತರ ನಿರ್ಣಾಯಕ ರಾಜಕೀಯ ಪರಿವರ್ತನೆಯಲ್ಲಿ ಮಾರ್ಕ್ ಕಾರ್ನಿ ಅಧಿಕೃತವಾಗಿ ಇಂದು ಕೆನಡಾದ ಹೊಸ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಆಡಳಿತದಲ್ಲಿ ಕೆನಡಾ-ಯುಎಸ್ ಸಂಬಂಧಗಳು ಹೊಸ ಉದ್ವಿಗ್ನತೆಯನ್ನು ಎದುರಿಸುತ್ತಿರುವುದರಿಂದ ಅವರ ಆಳ್ವಿಕೆ ಬಹಳ ಮಹತ್ವ ಪಡೆದಿದೆ.

ನವದೆಹಲಿ, (ಮಾರ್ಚ್ 14): 2015ರಿಂದ ಕೆನಡಾ ದೇಶವನ್ನು ಮುನ್ನಡೆಸುತ್ತಿದ್ದ ಜಸ್ಟಿನ್ ಟ್ರುಡೊ ಅವರ ನಂತರ ಇಂದು ಮಾರ್ಕ್ ಕಾರ್ನಿ ಕೆನಡಾದ ನೂತನ ಪ್ರಧಾನಿಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸಮಾರಂಭವು ಒಟ್ಟಾವಾದಲ್ಲಿ ನಡೆಯಿತು. ಈ ಮೂಲಕ ರಾಜತಾಂತ್ರಿಕ ಸವಾಲುಗಳ ಸಮಯದಲ್ಲಿ ಕೆನಡಾದಲ್ಲಿ ಮಾರ್ಕ್ ಕಾರ್ನಿ ಅವರ ಅಧಿಕಾರಾವಧಿ ಆರಂಭವಾಯಿತು. ಜನವರಿಯಲ್ಲಿ ರಾಜೀನಾಮೆ ಘೋಷಿಸಿದ ಮತ್ತು ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಹಂಗಾಮಿ ಪ್ರಧಾನಿಯಾಗಿ ಉಳಿದಿದ್ದ ಜಸ್ಟಿನ್ ಟ್ರುಡೊ ಅವರ ಸ್ಥಾನವನ್ನು ಮಾರ್ಕ್ ಕಾರ್ನಿ (59) ಇಂದು ವಹಿಸಿಕೊಂಡರು.
ಇಂದು ಒಟ್ಟಾವಾದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಮಾಜಿ ಮುಖ್ಯಸ್ಥ ಮಾರ್ಕ್ ಕಾರ್ನಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಟ್ರಂಪ್ ಅವರೊಂದಿಗಿನ ಸುಂಕದ ವಿವಾದದ ನಡುವೆ ಅಂತರರಾಷ್ಟ್ರೀಯ ವ್ಯಾಪಾರವನ್ನು ನಿರ್ವಹಿಸಲು ಡೊಮಿನಿಕ್ ಲೆಬ್ಲಾಂಕ್ ಅವರನ್ನು ಸ್ಥಳಾಂತರಿಸಲಾಗಿರುವುದರಿಂದ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ಅವರ ಹಣಕಾಸು ಸಚಿವರಾಗಿರುತ್ತಾರೆ. ಮೆಲಾನಿ ಜೋಲಿ ವಿದೇಶಾಂಗ ಸಚಿವೆಯಾಗಿ ಮುಂದುವರಿಯುತ್ತಾರೆ. ಡೇವಿಡ್ ಮೆಕ್‌ಗಿಂಟಿ ಸಾರ್ವಜನಿಕ ಸುರಕ್ಷತಾ ಸಚಿವೆಯಾಗಿ ಉಳಿಯಲಿದ್ದಾರೆ.
Mark Carney has been sworn in as the new Prime Minister of Canada!
Don’t let Donald Trump push you around, Mark! pic.twitter.com/8yeS9I1Dh9
— Art Candee 🍿🥤 (@ArtCandee) March 14, 2025
ಇದನ್ನೂ ಓದಿ: ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ ಆರ್ಯ
ಜನವರಿಯಲ್ಲಿ ಟ್ರೂಡೊ ಕೆನಡಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಇದೀಗ ಆಡಳಿತ ಪಕ್ಷದ ಚೇತರಿಕೆ ಕಂಡುಬಂದಿದೆ. ಮತ್ತಷ್ಟು ಸುಂಕಗಳು ಮತ್ತು ಡೊನಾಲ್ಡ್ ಟ್ರಂಪ್ ಅವರ ಸ್ವಾಧೀನದ ಬೆದರಿಕೆಗಳ ನಡುವೆಯೂ ಕ್ಯಾರಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೆನಡಾವನ್ನು ಅಮೆರಿಕದ ರಾಜ್ಯವನ್ನಾಗಿ ಮಾಡಲು ಆರ್ಥಿಕ ಬಲವನ್ನು ಬಳಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ ಮತ್ತು ತೀವ್ರ ಸುಂಕಗಳನ್ನು ವಿಧಿಸಿದ್ದಾರೆ. ಇದರಿಂದ ಕೆನಡಾಕ್ಕೆ ದೊಡ್ಡ ಆಘಾತವಾಗಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ