AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trump-Zelensky Meet: ಮಾಧ್ಯಮದೆದುರು ಸಣ್ಣ ಮಕ್ಕಳಂತೆ ಕಿತ್ತಾಡಿದ ಟ್ರಂಪ್-ಝೆಲೆನ್ಸ್ಕಿ

ರಷ್ಯಾದೊಂದಿಗೆ ಕದನ ವಿರಾಮದ ಬಗ್ಗೆ ಉಕ್ರೇನ್ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಯುದ್ಧವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ನಾವು ರಷ್ಯಾದೊಂದಿಗೆ ಉತ್ತಮ ಚರ್ಚೆ ನಡೆಸಿದ್ದೇವೆ ಎಂದರು. ಝೆಲೆನ್ಸ್ಕಿ ಕದನ ವಿರಾಮವನ್ನು ವಿರೋಧಿಸಿದರು ಮತ್ತು ಅವರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪದಗಳಲ್ಲಿ ಹೇಳಿದರು. ಈ ಸಮಯದಲ್ಲಿ ಇಬ್ಬರು ನಾಯಕರ ನಡುವೆ ಬಿಸಿ ಚರ್ಚೆ ನಡೆಯಿತು.

Trump-Zelensky Meet: ಮಾಧ್ಯಮದೆದುರು ಸಣ್ಣ ಮಕ್ಕಳಂತೆ ಕಿತ್ತಾಡಿದ ಟ್ರಂಪ್-ಝೆಲೆನ್ಸ್ಕಿ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Mar 01, 2025 | 7:56 AM

Share

ವಾಷಿಂಗ್ಟನ್, ಮಾರ್ಚ್​ 1: ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಜತೆ ಬಿಸಿ ಬಿಸಿ ಚರ್ಚೆ ನಡೆಸಿದರು. ಮಾಧ್ಯಮದೆದುರು ಚಿಕ್ಕ ಮಕ್ಕಳಂತೆ ಕಿತ್ತಾಡಿದರು. ಝೆಲೆನ್ಸ್ಕಿ ತನ್ನ ಸಹಾಯಕ್ಕೆ ಕೃತಜ್ಞರಾಗಿಲ್ಲ, ನಮ್ಮಿಂದಾಗಿ (ಅಮೆರಿಕ) ನೀವು ಸುರಕ್ಷಿತರಾಗಿದ್ದೀರಿ ಎಂದು ಹೇಳಿದರು.

ರಷ್ಯಾ ವಿರುದ್ಧದ ಹೋರಾಟಕ್ಕಾಗಿ ಜೋ ಬೈಡನ್ ಅವರ ಆಡಳಿತದಿಂದ ಶತಕೋಟಿ ಡಾಲರ್ ಮೌಲ್ಯದ ಅಮೆರಿಕನ್ ಶಸ್ತ್ರಾಸ್ತ್ರಗಳು, ಲಾಜಿಸ್ಟಿಕ್ಸ್ ಮತ್ತು ನೈತಿಕ ಬೆಂಬಲವನ್ನು ಪಡೆಯಲು ಸಾಧ್ಯವಾದ ಉಕ್ರೇನ್, ಟ್ರಂಪ್ ಅವರಿಂದ ವಿರುದ್ಧವಾದ ನಡವಳಿಕೆಯನ್ನು ಎದುರಿಸಿದೆ.

ಟ್ರಂಪ್ ಆಡಳಿತವು ಮೂರು ವರ್ಷಗಳ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಲು, ರಷ್ಯಾದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಮತ್ತು ಉಕ್ರೇನ್‌ಗೆ ಬೆಂಬಲ ನೀಡಲು ಖರ್ಚು ಮಾಡಿದ ಹಣವನ್ನು ಮರುಪಡೆಯಲು ಸಹಾಯ ಮಾಡಲು ಬಯಸುತ್ತಿದೆ.

ಈ ಚರ್ಚೆಯ ಸಮಯದಲ್ಲಿ, ರಷ್ಯಾದೊಂದಿಗೆ ಯಾವುದೇ ಕದನ ವಿರಾಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದರು. ಈ ಹಿಂದೆ 25 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅಮೆರಿಕ ರಷ್ಯಾದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಹೇಳಿದರು.

ಮತ್ತಷ್ಟು ಓದಿ: ಬೈಡನ್ ಭಾರತದಲ್ಲಿ ಸರ್ಕಾರ ಬದಲಿಸಲು ಪ್ರಯತ್ನಿಸಿದ್ದರೇ? ಚುನಾವಣೆಗಾಗಿ 182 ಕೋಟಿ ರೂ. ಕೊಡುವ ಅಗತ್ಯವೇನಿತ್ತು?

ಓವಲ್ ಹೌಸ್‌ನಲ್ಲಿ ಮಾಧ್ಯಮಗಳ ಮುಂದೆ ನಡೆದ ಈ ಚರ್ಚೆಯಲ್ಲಿ ಟ್ರಂಪ್, ಝೆಲೆನ್ಸ್ಕಿ, ನೀವು ಲಕ್ಷಾಂತರ ಜೀವಗಳ ಜೊತೆ ಆಟವಾಡುತ್ತಿದ್ದೀರಿ ಎಂದು ಹೇಳಿದರು. ನಿಮ್ಮ ದೇಶ ಅಪಾಯದಲ್ಲಿದೆ ಆದರೆ ನಿಮಗೆ ಅರ್ಥವಾಗುತ್ತಿಲ್ಲ. ನೀವು ಅಂತಿಮವಾಗಿ ರಷ್ಯಾದೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಝೆಲೆನ್ಸ್ಕಿ, ನಮಗೆ ಕದನ ವಿರಾಮ ಅಗತ್ಯವಿಲ್ಲ ಎಂದು ಹೇಳಿದರು. ತಮ್ಮ ಪ್ರತಿಷ್ಠಿತ ಓವಲ್ ಕಚೇರಿಯಲ್ಲಿ ಝೆಲೆನ್ಸ್ಕಿ ಅಮೆರಿಕವನ್ನು ಅಗೌರವಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಅವರು ಶಾಂತಿಗೆ ಸಿದ್ಧವಾಗಿದ್ದಾಗ ಮತ್ತೆ ಬರಬಹುದು ಎಂದು ಹೇಳಿದ್ದಾರೆ.

ಅಮೆರಿಕದೊಂದಿಗೆ ಪ್ರಮುಖ ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ಝೆಲೆನ್ಸ್ಕಿ ಶ್ವೇತಭವನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ, ಹಲವಾರು ದಿನಗಳವರೆಗೆ, ಅಪರೂಪದ ಖನಿಜಗಳ ಬಗ್ಗೆ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ತೀಕ್ಷ್ಣವಾದ ವಾಗ್ವಾದ ನಡೆಯುತ್ತಿತ್ತು.

ಒಪ್ಪಂದದ ಮಾತುಕತೆಗೂ ಮುನ್ನ ಓವಲ್ ಹೌಸ್‌ನಲ್ಲಿ ಮಾಧ್ಯಮಗಳ ಮುಂದೆ ಝೆಲೆನ್ಸ್ಕಿಯವರ ವರ್ತನೆಯಿಂದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಕೋಪಗೊಂಡಿದ್ದರು. ಮಾಧ್ಯಮಗಳ ಮುಂದೆ ಇಂತಹ ಮಾತುಗಳನ್ನು ಹೇಳುವುದು ಅವಮಾನ ಎಂದು ಅವರು ಕರೆದರು.

ಝೆಲೆನ್ಸ್ಕಿ ಮಾತನಾಡಿ, ನಮ್ಮನ್ನು ಮಾತುಕತೆಗಾಗಿ ಕರೆಯಲಾಗಿದ್ದು, ಆದರೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಝೆಲೆನ್ಸ್ಕಿ ಪುಟಿನ್ ಅವರನ್ನು ಕೊಲೆಗಾರ ಎಂದು ಕರೆದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ