ಬೈಡನ್ ಭಾರತದಲ್ಲಿ ಸರ್ಕಾರ ಬದಲಿಸಲು ಪ್ರಯತ್ನಿಸಿದ್ದರೇ? ಚುನಾವಣೆಗಾಗಿ 182 ಕೋಟಿ ರೂ. ಕೊಡುವ ಅಗತ್ಯವೇನಿತ್ತು?
ಭಾರತಕ್ಕೆ ಅಮೆರಿಕ ಚುನಾವಣೆಗಾಗಿ 21 ಮಿಲಿಯನ್ ಡಾಲರ್ ಕೊಟ್ಟಿದ್ದೇಕೆ, ಭಾರತಕ್ಕೆ ಅದರ ಅಗತ್ಯವಾದರೂ ಏನಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಭಾರತದ ಮತದಾನಕ್ಕಾಗಿ ನಾವು 21 ಮಿಲಿಯನ್ ಡಾಲರ್ ಖರ್ಚು ಏಕೆ ಮಾಡಬೇಕು, ಭಾರತಕ್ಕೆ ಯಾವುದೇ ಕೊರತೆ ಇಲ್ಲ, ಪ್ರಪಂಚದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದಾಗಿದೆ.

ಭಾರತದ ಚುನಾವಣೆಯಲ್ಲಿ ಅಮೆರಿಕದ ಸಂಭವನೀಯ ಹಸ್ತಕ್ಷೇಪದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಭಾರತದ ಚುನಾವಣೆಗಾಗಿ ಅಮೆರಿಕ 21 ಮಿಲಿಯನ್ ಡಾಲರ್ ನೀಡುವ ಕ್ರಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಮೋದಿ ಬದಲು ಬೇರೆಯವರನ್ನು ಗೆಲ್ಲಿಸಲು ಬೈಡನ್ ಬಯಸಿದ್ದರೇ ಎಂದು ಕೇಳಿದ್ದಾರೆ.
ಭಾರತದ ಮತದಾನಕ್ಕಾಗಿ ನಾವು 21 ಮಿಲಿಯನ್ ಡಾಲರ್ ಖರ್ಚು ಏಕೆ ಮಾಡಬೇಕು, ಭಾರತಕ್ಕೆ ಯಾವುದೇ ಕೊರತೆ ಇಲ್ಲ, ಪ್ರಪಂಚದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದಾಗಿದೆ. ಅಲ್ಲದೇ ಭಾರತವು ದುಬಾರಿ ಸುಂಕ ನೀತಿಯಿಂದಲೂ ಸಾಕಷ್ಟು ಲಾಭಗಳಿಸುತ್ತಿದೆ. ಆದರೆ ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಅಮೆರಿಕ ನಾಗರಿಕರ ತೆರಿಗೆ ಹಣ ನೀಡುವುದೇಕೆ ಎಂದು ಅಮೆರಿಕದ ಅಧ್ಯಕ್ಷರು ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಮತದಾನಕ್ಕಾಗಿ ನೀಡಲು ಉದ್ದೇಶಿಸಲಾದ ಹಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಪಕ್ಷವು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿತು. ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಭಾರತದ ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಟ್ರಂಪ್ ಒಂದೇ ಕಲ್ಲಿಗೆ ಎರಡು ಹಕ್ಕಿ; ಅಮೆರಿಕ ಅಧ್ಯಕ್ಷರ ಮುಂದಿನ ನಡೆಯಿಂದ ಭಾರತ, ಚೀನಾಗೆ ಆತಂಕ
ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆ ಅಥವಾ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿದೇಶಿ ಹಸ್ತಕ್ಷೇಪ ಅನಗತ್ಯ ಮತ್ತು ಸರಿಯಲ್ಲ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿದೆ ಮತ್ತು ನಾವು ಅದನ್ನು ವಿರೋಧಿಸುತ್ತೇವೆ. ಇದನ್ನು ಖಂಡಿಸಬೇಕಾಗಿದೆ ಮತ್ತು ಅದರ ಬಗ್ಗೆ ತನಿಖೆ ನಡೆಸಬೇಕು” ಎಂದು ಮಾಕೆನ್ ಹೇಳಿದ್ದಾರೆ.
President Trump reads some examples of the massive fraud, waste and abuse his administration has CUT from the federal government.
PROMISES MADE, PROMISES KEPT. pic.twitter.com/br9a1AKihY
— Rapid Response 47 (@RapidResponse47) February 19, 2025
ಭಾರತದ ಚುನಾವಣಾ ವ್ಯವಹಾರಗಳಲ್ಲಿ ವಿದೇಶಿ ನಿಧಿಯ ಪರಿಣಾಮಗಳ ಕುರಿತು ರಾಜಕೀಯ ಪಕ್ಷಗಳು ಚರ್ಚಿಸುತ್ತಿರುವುದರಿಂದ ವಿವಾದವು ಹೆಚ್ಚಾಗುತ್ತಿದೆ. ಭಾರತದಲ್ಲಿ ಮತದಾನದ ಶೇಕಡಾವಾರು ಹೆಚ್ಚಿಸಲು ಅಮೆರಿಕ 21 ಮಿಲಿಯನ್ ಡಾಲರ್ ಅಂದರೆ ಸುಮಾರು 182 ಕೋಟಿ ರೂ. ವ್ಯಯಿಸುತ್ತಿದೆ.
ಹಿಂದಿನ ಬೈಡನ್ ಆಡಳಿತವು ಬೇರೊಬ್ಬರನ್ನು ಆಯ್ಕೆ ಮಾಡಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಊಹಿಸಿದರು. ಈ ವಿಷಯದ ಬಗ್ಗೆ ಅಮೆರಿಕ ಸರ್ಕಾರ ಮೋದಿ ಸರ್ಕಾರದೊಂದಿಗೆ ಮಾತನಾಡಲಿದೆ ಎಂದು ಟ್ರಂಪ್ ಹೇಳಿದರು.
ಇದು ಭಾರತೀಯ ರಾಜಕೀಯದಲ್ಲಿ ಗೊಂದಲವನ್ನು ಸೃಷ್ಟಿಸಿತು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಸರ್ಕಾರವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಸರ್ಕಾರ ರಚಿಸಲು ಅವರು ತಮ್ಮ ಎನ್‌ಡಿಎ ಮಿತ್ರಪಕ್ಷಗಳ ಬೆಂಬಲವನ್ನು ಪಡೆಯಬೇಕಾಯಿತು. ಬಹುತೇಕ ಎಲ್ಲಾ ಸಮೀಕ್ಷೆಗಳು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿದ್ದವು. ಆದರೆ ಜೂನ್ 4 ರಂದು ಬಂದ ಫಲಿತಾಂಶಗಳು ಬೇರೆಯದೇ ಚಿತ್ರವನ್ನು ತೋರಿಸಿದವು.
ಬೈಡನ್ ಭಾರತದಲ್ಲಿ ಸರ್ಕಾರ ಬದಲಾಯಿಸಲು ಬಯಸಿದ್ದರೇ?
ಬೈಡನ್ ಭಾರತದಲ್ಲಿ ಬೇರೆಯವರನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದರು ಎನ್ನುವ ಅನುಮಾನ ಕಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಈ ಹಿಂದೆಯೂ 21 ಮಿಲಿಯನ್ ಡಾಲರ್ ಖರ್ಚು ಮಾಡುವ ಬಗ್ಗೆ ಪ್ರಶ್ನೆ ಎತ್ತಿದ್ದರು . ವಿವಿಧ ಅಂತಾರಾಷ್ಟ್ರೀಯ ಯೋಜನೆಗಳಿಗೆ ಹಂಚಿಕೆ ಮಾಡಲಾಗಿದ್ದ ಹಣವನ್ನು ರದ್ದುಗೊಳಿಸಿರುವುದಾಗಿ ಅವರು ಘೋಷಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ