Video: ಇಸ್ರೇಲ್ನಲ್ಲಿ 3 ಬಸ್ಗಳಲ್ಲಿ ಬಾಂಬ್ ಸ್ಫೋಟ, ಭಯೋತ್ಪಾದಕ ದಾಳಿ ಶಂಕೆ
ಬ್ಯಾಟ್ ಯಾಮ್ ನಗರದಲ್ಲಿ ಮೂರು ಬಸ್ಗಳ ಮೇಲೆ ಬಾಂಬ್ ದಾಳಿಗಳು ನಡೆದಿವೆ ಎಂದು ಇಸ್ರೇಲಿ ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್ಗಳು ಸ್ಫೋಟಗೊಂಡಾಗ ಬಸ್ಗಳು ಖಾಲಿ ಇದ್ದವು. ಈ ಮೂರು ಬಸ್ಗಳು ಸುಮಾರು 500 ಮೀಟರ್ ದೂರದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದವು.
ಜೆರುಸಲೇಮ್, ಫೆಬ್ರವರಿ 21: ಬ್ಯಾಟ್ ಯಾಮ್ ನಗರದಲ್ಲಿ ಮೂರು ಬಸ್ಗಳ ಮೇಲೆ ಬಾಂಬ್ ದಾಳಿಗಳು ನಡೆದಿವೆ ಎಂದು ಇಸ್ರೇಲಿ ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್ಗಳು ಸ್ಫೋಟಗೊಂಡಾಗ ಬಸ್ಗಳು ಖಾಲಿ ಇದ್ದವು.
ಈ ಮೂರು ಬಸ್ಗಳು ಸುಮಾರು 500 ಮೀಟರ್ ದೂರದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದವು. ಬ್ಯಾಟ್ ಯಾಮ್ ಇಸ್ರೇಲ್‌ನ ದಕ್ಷಿಣ ಕರಾವಳಿಯಲ್ಲಿದೆ ಮತ್ತು ಟೆಲ್ ಅವೀವ್‌ನ ದಕ್ಷಿಣದಲ್ಲಿದೆ. ಮತ್ತೊಂದು ಬಸ್ನಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿದೆ. ಅನುಮಾನಾಸ್ಪದ ವಸ್ತುಗಳಿಗಾಗಿ ಹಾಗೂ ಶಂಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 21, 2025 07:43 AM
Latest Videos