Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿಯಲ್ಲಿ ಡಬಲ್​ ಮರ್ಡರ್​: 2 ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ, ಸಹಚರನ ಕೊಲೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಭಯಾನಕ ಡಬಲ್ ಮರ್ಡರ್ ನಡೆದಿದೆ. ದಲಿತ ಮುಖಂಡ ಮತ್ತು ಆತನ ಸಹಚರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೊದಲು ದಲಿತ ಮುಖಂಡನನ್ನು ಹತ್ಯೆ ಮಾಡಲಾಗಿದ್ದು, ನಂತರ ಭಯದಿಂದ ಓಡಿಹೋಗಿದ್ದ ಸಹಚರನನ್ನು ಕೊಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾದಗಿರಿಯಲ್ಲಿ ಡಬಲ್​ ಮರ್ಡರ್​: 2 ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ, ಸಹಚರನ ಕೊಲೆ
ಯಾದಗಿರಿಯಲ್ಲಿ ಡಬಲ್​ ಮರ್ಡರ್​: 2 ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ, ಸಹಚರನ ಕೊಲೆ
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on:Mar 16, 2025 | 3:01 PM

ಯಾದಗಿರಿ, ಮಾರ್ಚ್​​ 16: ಎರಡು ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ ಹಾಗೂ ಆತನ ಸಹಚರನ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಶಹಾಪುರ (Shahapur) ತಾಲೂಕಿನ ಸಾದ್ಯಾಪುರ ಗ್ರಾಮದ ಬಳಿ ನಡೆದಿದೆ. ಮದ್ದರಕಿ ಗ್ರಾಮದ ಮಾಪಣ್ಣ ಹಾಗೂ ಅಲಿಸಾಬ್ ಹತ್ಯೆಯಾದವರು (kill). ಬೈಕ್​ನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದವರ ಮಾಹಿತಿ ಮತ್ತು ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್​ನಲ್ಲಿ ಅಲಿಸಾಬ್ ಜೊತೆಗೆ ತೆರಳುತ್ತಿದ್ದ ಮಾಪಣ್ಣನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರಿಂದ ಭಯಭೀತಗೊಂಡು ಅಲಿಸಾಬ್ ಓಡಿಹೋಗಿ‌ ಮನೆ ಸೇರಿದ್ದ. ತಮ್ಮ ತಂದೆಯ ಮಾಹಿತಿ ಅಲಿಸಾಬ್ ನೀಡಿದ್ದಾನೆಂದು ಮಾಪಣ್ಣನ ಮಕ್ಕಳಿಂದ ಅಲಿಸಾಬ್​​ ನನ್ನು ಬರ್ಬರ ಕೊಲೆ ಮಾಡಲಾಗಿದೆ.

ಎಸ್​​ಪಿ ಪೃಥ್ವಿಕ್ ಶಂಕರ್​ ಹೇಳಿದ್ದಿಷ್ಟು 

ಪ್ರಕರಣ ಬಗ್ಗೆ ಶಹಾಪುರದಲ್ಲಿ ಯಾದಗಿರಿ ಎಸ್​​ಪಿ ಪೃಥ್ವಿಕ್ ಶಂಕರ್​ ಮಾತನಾಡಿದ್ದು, ಸಾದ್ಯಾಪುರ ಕ್ರಾಸ್ ಬಳಿ ಬೆಳಗ್ಗೆ 9.30ರ ಸುಮಾರಿಗೆ ಕೊಲೆ ನಡೆದಿದೆ. ಬೈಕ್​ನಲ್ಲಿ ಅಲಿಸಾಬ್ ಜೊತೆಗೆ ತೆರಳುತ್ತಿದ್ದ ಮಾಪಣ್ಣನ ಹತ್ಯೆಯಾಗಿದೆ. ಇದರಿಂದ ಭಯಭೀತಗೊಂಡು ಅಲಿಸಾಬ್ ಓಡಿಹೋಗಿ‌ ಮನೆ ಸೇರಿದ್ದ. ಊರು ಸೇರಿಕೊಂಡಿದ್ದ ಅಲಿಸಾಬ್​ನನ್ನು ಹತ್ಯೆ ಮಾಡಿದ್ದಾರೆ. ಮಾಪಣ್ಣನನ್ನು ರೌಡಿಶೀಟರ್ ಹುಸೇನಿ‌ ಕೊಂದಿದ್ದಾನೆ ಎಂದು ಮಾಹಿತಿ ಇದೆ. ಅದೇ ರೀತಿಯಾಗಿ ಅಲಿಸಾಬ್​ನನ್ನು ಮಾಪಣ್ಣನ ಮಕ್ಕಳು ಕೊಂದಿದ್ದಾರೆ ಎನ್ನಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಹೆಚ್ಚಿದ ಫೇಕ್ ನ್ಯೂಸ್ ಹಾವಳಿ: ಬೆಂಗಳೂರು, ಉತ್ತರ ಕನ್ನಡ ಮುಂಚೂಣಿಯಲ್ಲಿ
Image
ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್
Image
ಕುಡಿದ ನಶೆಯಲ್ಲಿ ಪರಸ್ಪರ ಹೊಡೆದಾಟ: ಆರು ಬಿಹಾರಿಗಳ ಪೈಕಿ ಮೂವರು ಸಾವು
Image
ಕಾವೇರಿ ನದಿಯಲ್ಲಿ ಘೋರ ದುರಂತ: ತಾತ ಸೇರಿ ಇಬ್ಬರು ಮೊಮ್ಮಕ್ಕಳು ಜಲಸಮಾಧಿ

ಇದನ್ನೂ ಓದಿ: ಬೈಕ್​ಗೆ ಸಾರಿಗೆ ಬಸ್ ಡಿಕ್ಕಿ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ದುರ್ಮರಣ!

ಶೀಘ್ರವೇ ಎರಡು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ. 2014ರಲ್ಲಿ ಮಾಪಣ್ಣನ ಮೇಲೆ ರೌಡಿಶೀಟರ್ ಹುಸೇನಿ ದಾಳಿ ಮಾಡಿದ್ದ. ಭೀಮರಾಯನಗುಡಿ ಠಾಣೆಯಲ್ಲಿ ಮಾಪ್ಪಣ್ಣ ವಿರುದ್ಧ 9 ಕೇಸ್ ದಾಖಲಾಗಿದ್ದವು ಎಂದಿದ್ದಾರೆ.

ಗಂಡ, ಹೆಂಡತಿ ಜಗಳ ಬಿಡಿಸಲು ಹೋದವನಿಗೆ ದೊಣ್ಣೆಯಿಂದ ಹಲ್ಲೆ

ಗಂಡ, ಹೆಂಡತಿ ಜಗಳ ಬಿಡಿಸಲು ಹೋದವನಿಗೆ ದೊಣ್ಣೆಯಿಂದ ಹಲ್ಲೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಕೋಗಿಲಬನದಲ್ಲಿ ನಡೆದಿದೆ. ಇಬ್ರಾಹಿಂ ಖಾದ್ರಿ ಖಾನ್ ಹಲ್ಲೆಗೊಳಗಾದ ಕೋಗಿಲಬನದ ನಿವಾಸಿ. ದಾಂಡೇಲಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಪರಸ್ಪರ ಹೊಡೆದಾಟ: ಆರು ಬಿಹಾರಿಗಳ ಪೈಕಿ ಮೂವರು ಸ್ಥಳದಲ್ಲೇ ಸಾವು

ಮದ್ಯ ಸೇವಿಸಿ ಪತ್ನಿ ಜೊತೆ ಜಗಳ ಮಾಡುತ್ತಿದ್ದಾಗ ಸಿಟ್ಟಿನಿಂದ ಹಲ್ಲೆ ಮಾಡಲಾಗಿದೆ. ಸಾದಿಕ್ ದಸ್ತಗೀರ್‌ ಮುಲ್ಲಾ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ರಾಹಿಂ ಖಾದ್ರಿ ಖಾನ್‌ಗೆ ಚಿಕಿತ್ಸೆ ನೀಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:58 pm, Sun, 16 March 25