Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್

ಬೆಂಗಳೂರಿನ ಗಿರಿನಗರದಲ್ಲಿ ಖಾಸಗಿ ಬ್ಯಾಂಕ್ ಉಪ ವ್ಯವಸ್ಥಾಪಕಿ ಮೇಘನಾ ವೃದ್ಧೆಯೊಬ್ಬರಿಗೆ 50 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. "ಲಕ್ಕಿ ಭಾಸ್ಕರ್" ಚಲನಚಿತ್ರದ ಮಾದರಿಯಲ್ಲಿ ನಡೆದ ಈ ವಂಚನೆಯಲ್ಲಿ ಮೇಘನಾ ಸೇರಿದಂತೆ ನಾಲ್ವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಆರ್​ಟಿಜಿಎಸ್​ ಮೂಲಕ ಹಣ ವರ್ಗಾವಣೆ ಮಾಡಿ ಮೋಸ ಮಾಡಲಾಗಿದೆ. ಪೊಲೀಸರು ವಶಪಡಿಸಿಕೊಂಡ ಹಣವನ್ನು ವೃದ್ಧೆಯ ಕುಟುಂಬಕ್ಕೆ ಹಿಂತಿರುಗಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಬೆಂಗಳೂರು: ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್
ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಮೇಘನಾ
Follow us
ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on: Mar 16, 2025 | 7:58 AM

ಬೆಂಗಳೂರು, ಮಾರ್ಚ್​ 16: ಇತ್ತೀಚೆಗೆ ತೆರೆಕಂಡ ತೆಲುಗಿನ ಲಕ್ಕಿ ಭಾಸ್ಕರ್(Lucky Bhaskar) ಸಿನಿಮಾ ಮಾದರಿಯಲ್ಲಿ ಖಾಸಗಿ ಬ್ಯಾಂಕ್​ವೊಂದರ (Bank) ಉಪ ವ್ಯವಸ್ಥಾಪಕಿ ವೃದ್ಧೆಗೆ ವಂಚಿಸಿದ್ದಾಳೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಶಾಮೀಲಾಗಿದ್ದು, ಗಿರಿನಗರ ಪೊಲೀಸರು (Girinagar Police) ಬಂಧಿಸಿದ್ದಾರೆ. ಬ್ಯಾಂಕ್​ ಉಪ ವ್ಯವಸ್ಥಾಪಕಿ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಬಂಧಿತ ಆರೋಪಿಗಳು.

ಗಿರಿನಗರದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್​​ನ ಉಪ ವ್ಯವಸ್ಥಾಪಕಿ ಮ್ಯಾನೆಜರ್ ಮೇಘನಾ ಎಫ್​ಡಿ ಅಕೌಂಟ್ ಮಾಡಿಕೊಡುವುದಾಗಿ ವೃದ್ಧೆಗೆ ಸುಳ್ಳು ಹೇಳಿ ಆರ್​ಟಿಜಿಎಸ್ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾಳೆ. ಬಳಿಕ ತಮ್ಮ ಹೊಸ ಬ್ಯಾಂಕ್ ಖಾತೆ ತೆಗೆದು ಆರ್​ಟಿಜಿಎಸ್ ಮುಖಾಂತರ 50 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದಾಳೆ.

ಮೇಘನಾ ಹೆಣೆದ ಮೋಸದ ಜಾಲ ಹೇಗಿತ್ತು?

ವೃದ್ಧ ದಂಪತಿ ಗಿರಿನಗರದಲ್ಲಿನ ಇಂಡಸ್ ಇಂಡ್ ಬ್ಯಾಂಕ್​ನಲ್ಲಿ ಜಂಟಿ ಖಾತೆ ತೆರೆದಿದ್ದಾರೆ. ಇದೇ ಬ್ಯಾಂಕ್​ನಲ್ಲಿ ಎಫ್ ಡಿ ಖಾತೆ ಕೂಡ ಹೊಂದಿದ್ದಾರೆ. ವೃದ್ಧೆಗೆ ಬ್ಯಾಂಕ್​ನಲ್ಲಿ ಉಪ ವ್ಯವಸ್ಥಾಪಕಿ ಮೇಘನಾ ಪರಿಚಯವಾಗಿದೆ. ಮೇಘನಾ ವೃದ್ಧೆಗೆ ಬ್ಯಾಂಕ್ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಳು. ಕುಟುಂಬದ ಎಲ್ಲ ವಿಚಾರವನ್ನು ಮೇಘನಾ ಜೊತೆ ವೃದ್ಧೆ ಹಂಚಿಕೊಳ್ಳುತ್ತಿದ್ದಳು. ಚಾಮರಾಜಪೇಟೆಯಲ್ಲಿನ ಮನೆ ಮಾರಿರುವ ವಿಚಾರವನ್ನು ಕೂಡ ವೃದ್ಧೆ, ಮೇಘನಾಗೆ ಹೇಳಿದ್ದಳು.

ಇದನ್ನೂ ಓದಿ
Image
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
Image
ಕಾರವಾರದಲ್ಲಿ SSLC ವಿದ್ಯಾರ್ಥಿ, ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಸಾವು
Image
ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
Image
ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಪತಿ ದುರಂತ ಸಾವು

ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆಯಾಗಿತ್ತು. ಒಂದು ದಿನ, ವೃದ್ಧೆ ಬ್ಯಾಂಕ್​ಗೆ ಹೋದಾಗ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಮೇಘಟನಾ ಕಥೆ ಕಟ್ಟಿದ್ದಾಳೆ. ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ. ಬಳಿಕ, ಮೇಘನಾ, ವೃದ್ಧೆ ಮನೆಗೆ ತೆರಳಿ ಎರಡು ಖಾಲಿ ಚೆಕ್​ ಮೇಲೆ ಸಹಿ ಮಾಡಿಸಿಕೊಂಡಿದ್ದಾಳೆ. ಜೊತೆಗೆ, ಒಂದಿಷ್ಟು ಕಾಗದ ಪತ್ರಗಳಿಗೂ ಸಹಿ ಪಡೆದಿದ್ದಾಳೆ. ಈ ವೇಳೆ, ಎಫ್​ಡಿ ಬದಲಾಗಿ ಆರ್​ಟಿಜಿಎಸ್ ಪತ್ರಕ್ಕೂ ಸಹಿ ಪಡೆದಿದ್ದಾಳೆ.

ಒಂದು ದಿನ ವೃದ್ಧ ದಂಪತಿ ಮಗ ಮೊಬೈಲ್​ನಲ್ಲಿ ಖಾತೆ ಪರಿಶೀಲೀಸಿದಾಗ ಹಣ ಕಡಿಮೆ ಇರುವುದು ಪತ್ತೆಯಾಗಿದೆ. ಬಳಿಕ, ಬ್ಯಾಂಕ್​ನಿಂದ ಬಂದಿದ್ದ ಮೆಸೆಜ್​ಗಳ ಪರಿಶೀಲಿಸಿದ್ದಾರೆ. ಈ ವೇಳೆ ಫೆಬ್ರವರಿ 13 ರಂದು ಬೇರೆ ಖಾತೆಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ನಂತರ ವೃದ್ಧೆ ಬ್ಯಾಂಕ್​ಗೆ ಹೋಗಿ ಮೇಘಾಳನ್ನು ಪ್ರಶ್ನಿಸಿದಾಗ, “ನೀವು ಹೇಳಿದ ಖಾತೆಗೆ ಆರ್​ಟಿಜಿಎಸ್ ಮಾಡಲಾಗಿದೆ” ಎಂದು ಹೇಳಿದ್ದಾಳೆ.

ವೃದ್ಧೆ, ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.

ಐಷಾರಾಮಿ ಜೀವನದ ಕನಸು ಕಂಡಿದ್ದ ಮೇಘನಾ

ಮೇಘನಾ ಐಷಾರಾಮಿ ಜೀವನದ ಕನಸು ಕಂಡಿದ್ದಳು. ಕಾರು ಖರೀದಿಸಿ ವೈಭೋಗದ ಜೀವನ ನಡೆಸಬೇಕು ಅಂದುಕೊಂಡಿದ್ದಳು. ಅದಕ್ಕಾಗಿ ಗಂಡ ಶಿವಪ್ರಸಾದ್ ಜೊತೆಗೆ ಸೇರಿ ವೃದ್ಧೆ ಖಾತೆಯಲ್ಲಿ ಹಣವನ್ನು ಎಗರಿಸಲು ಪ್ಲಾನ್ ಮಾಡಿದ್ದಾಳೆ. ಗೆಳೆಯ ವರದರಾಜು ಮತ್ತು ಅನ್ವರ್ ಘೋಷ್​ಗೆ ಹೇಳಿ ಹೊಸ ಬ್ಯಾಂಕ್ ಖಾತೆ ತೆರದಿದ್ದಾಳೆ. ಆ ಖಾತೆಗೆ ಆರ್​ಟಿಜಿಎಸ್ ಮೂಲಕ 50 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾಳೆ. ಬಳಿಕ, 30 ಲಕ್ಷ ಹಣ ವಿತ್ ಡ್ರಾ ಮಾಡಿಕೊಂಡಿದ್ದಾರೆ. ತನಿಖೆ ನಡೆಸಿ ಒಟ್ಟು 50 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Ranya Rao Gold Smuggling: ರನ್ಯಾ ರಾವ್​​ ಜಾಮೀನು ಅರ್ಜಿ ವಜಾ, ಚಿನ್ನದ ರಾಣಿಗೆ ಜೈಲೇ ಗತಿ

ಲಕ್ಕಿ ಭಾಸ್ಕರ್ ಸಿನಿಮಾ ಕಥೆ ಹೇಳಿದ ಮೇಘನಾ

ಪೊಲೀಸರ ವಿಚಾರಣೆ ವೇಳೆ ಮೇಘನಾ ಲಕ್ಕಿ ಭಾಸ್ಕರ್ ಸಿನಿಮಾ ಕಥೆ ಹೇಳಿದ್ದಾಳೆ. “ವೃದ್ಧೆಗೆ ಮೋಸ ಮಾಡುವ ಉದ್ದೇಶ ಇರಲಿಲ್ಲ. ನಮಗೆ ಹಣದ ಅವಶ್ಯಕತೆ ಇತ್ತು. ಆ ದುಡ್ಡಲ್ಲಿ ಲಾಭ ಗಳಿಸಿ ಮತ್ತೆ ವೃದ್ಧೆಗೆ ಕೊಡುವ ಪ್ಲಾನ್ ಇತ್ತು” ಎಂದು ಕಥೆ ಹೇಳಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ