ಬೈಕ್​ಗೆ ಸಾರಿಗೆ ಬಸ್ ಡಿಕ್ಕಿ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ದುರ್ಮರಣ!

ಬೈಕ್​ಗೆ ಸಾರಿಗೆ ಬಸ್ ಡಿಕ್ಕಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ಸಾರಿಗೆ ಬಸ್ ಗುದ್ದಿದ ರಭಸಕ್ಕೆ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲಿ ಉಸಿರು ಚೆಲ್ಲಿದ್ದರೆ.ಇನ್ನಿಬ್ಬರು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯ ಕೊನೆಯುಸಿರೆಳೆದಿದ್ದಾರೆ. ದುರಂತ ಅಂದ್ರೆ, ಊರ ಜಾತ್ರೆಗೆಂದು ತೆರಳುತ್ತಿದ್ದವರು ಮಸಣ ಸೇರಿದ್ದಾರೆ.

ಬೈಕ್​ಗೆ ಸಾರಿಗೆ ಬಸ್ ಡಿಕ್ಕಿ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ದುರ್ಮರಣ!
Yadgir Accident
Follow us
ಅಮೀನ್​ ಸಾಬ್​
| Updated By: ರಮೇಶ್ ಬಿ. ಜವಳಗೇರಾ

Updated on:Feb 05, 2025 | 6:16 PM

ಯಾದಗಿರಿ, (ಫೆಬ್ರವರಿ 05): ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಡೀ ಕುಟುಂಬವೇ ಮಸಣ ಸೇರಿದೆ. ಬೈಕ್​ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.  ಇದರೊಂದಿಗೆ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಇಡೀ ಕುಟುಂಬವೇ ಬಲಿಯಾಗಿದೆ. ಒಂದು ವರ್ಷದ ಮಗು ಹನುಮಂತ(1), ಹನುಮಂತ ತಂದೆ ಆಂಜನೇಯ (35) ತಾಯಿ ಗಂಗಮ್ಮ (28), ಹನುಮಂತನ ಸಹೋದರನ ಮಕ್ಕಳಾದ ಪವಿತ್ರ (5) ಹಾಗೂ ರಾಯಪ್ಪ (3) ಸಾವನ್ನಪ್ಪಿದ ದುರ್ವೈವಿಗಳು.

ಮೂವರು ಮಕ್ಕಳು ಸೇರಿ ಒಂದೇ ಬೈಕ್ ನಲ್ಲಿ ಐದು ಜನ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದರು. ಆ ವೇಳೆ ಹಿಂಬದಿಯಿಂದ KA 32 F 2684 ನಂಬರಿನ ಕೆಎಸ್​​ಆರ್​​ಟಿಸಿ ಬಸ್​ ಬಂದು ರಭಸವಾಗಿ ಗುದ್ದಿದೆ. ಘಟನೆಯಲ್ಲಿ ಇಡೀ ಕುಟುಂಬವೇ ಬಲಿಯಾಗಿದೆ.

ಇದನ್ನೂ ಓದಿ: ಕೊಪ್ಪಳ: ರೈತರಲ್ಲಿ ಆತಂಕ ಮೂಡಿಸಿದ ಏಕಾಏಕಿ ಒಣಗುತ್ತಿರುವ ಭತ್ತದ ಪೈರು, ಕಾರಣವೇನು? ಇಲ್ಲಿದೆ ಓದಿ

ಮೃತರಲ್ಲಿ ಮೂವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮೆಟಮರಡಿ ದೊಡ್ಡಿಯವರು. ಮೆಟಮರಡಿ ದೊಡಗಡ್ಡಿಯಲ್ಲಿ ನಾಳೆ ಮೆಟ್ಟಮರಡಿ ದೊಡ್ಡಿಯಲ್ಲಿ ಊರ ದೇವರ ಜಾತ್ರೆ ಇರುವುದರಿಂದ ತವರು ಮನೆಯಲ್ಲಿದ್ದ ಪತ್ನಿ ಮತ್ತು ಮಗನನ್ನ ಕರೆದುಕೊಂಡು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಸದ್ಯ ಮೃತದೇಹಗಳು ಸುರಪುರ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನಾಳೆ (ಫೆಬ್ರವರಿ 06) ಮೆಟಮರಡಿ ದೊಡ್ಡಿಯಲ್ಲಿ ಮೂವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನುಳಿದ ಇಬ್ಬರು ಮಕ್ಕಳ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹಳಿಸಗರ ಗ್ರಾಮದಲ್ಲಿ ನಡೆಯಲಿದೆ.

ಗುದ್ದಿದ ರಭಸಕ್ಕೆ ಬೈಕ್​ನಲ್ಲಿದ್ದ ಮೂರು ಎರಡು ಪುಟ್ಟ ಪುಟ್ಟ ಮಕ್ಕಳು ಉಸಿರು ಚೆಲ್ಲಿವೆ. ಅಪಘಾತದಲ್ಲಿ ಮಕ್ಕಳ ಮೃತ ದೇಹ ಬಿದ್ದಿರುವ ಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತೆ. ಆ ರೀತಿಯಾಗಿವೆ. ಹೀಗಾಗಿ ಫೋಟೋಗಳನ್ನು ತೋರಿಸುವಂತಿಲ್ಲ. ಇನ್ನು ಬೈಕ್​ನಲ್ಲಿ ಊರಿಗೆ ಹೊರಟ್ಟಿದ್ದರು ಅನ್ನಿಸುತ್ತೆ. ಬಟ್ಟೆ ಬ್ಯಾಗ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೈಕ್​ ಅಂತೂ ಮುದ್ದೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Wed, 5 February 25