AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಮತ್ತೆ ಹರಡುತ್ತಿದೆ ಕೊವಿಡ್: 13000 ಹೊಸ ಪ್ರಕರಣಗಳು, ಮತ್ತೊಂದು ಅಲೆಯ ಆತಂಕ

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಮೊದಲ ಅಲೆಯ ಸಂದರ್ಭದಲ್ಲಿ ವರದಿಯಾಗಿದ್ದ ಸಂಖ್ಯೆಗಿಂತಲೂ ಇಂದು ವರದಿಯಾಗಿರುವ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದೊಂಡಿದೆ.

ಚೀನಾದಲ್ಲಿ ಮತ್ತೆ ಹರಡುತ್ತಿದೆ ಕೊವಿಡ್: 13000 ಹೊಸ ಪ್ರಕರಣಗಳು, ಮತ್ತೊಂದು ಅಲೆಯ ಆತಂಕ
ಕೊರೊನಾವೈರಸ್
TV9 Web
| Edited By: |

Updated on: Apr 03, 2022 | 9:01 AM

Share

ಬೀಜಿಂಗ್: ಚೀನಾದಲ್ಲಿ ಕೊರೊನಾ ಪಿಡುಗು ವ್ಯಾಪಕವಾಗಿ ಹರಡುತ್ತಿದೆ. ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಮೊದಲ ಅಲೆಯ ಸಂದರ್ಭದಲ್ಲಿ ವರದಿಯಾಗಿದ್ದ ಸಂಖ್ಯೆಗಿಂತಲೂ ಇಂದು ವರದಿಯಾಗಿರುವ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದೊಂಡಿದೆ. ಚೀನಾದ 12ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ರೂಪಾಂತರಿ ವ್ಯಾಪಕವಾಗಿ ಹರಡುತ್ತಿದೆ. ‘ಪ್ರಸ್ತುತ ದೇಶದಲ್ಲಿ ರೋಗಲಕ್ಷಣಗಳಿರುವ 1,455 ಸೋಂಕಿತರಿದ್ದಾರೆ. 11,691 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೂ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸೋಂಕಿನಿಂದ ಸಾವನ್ನಪ್ಪಿರುವ ಸಂಖ್ಯೆಯೂ ವರದಿಯಾಗಿಲ್ಲ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (National Health Commission – NHC) ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದ ಆರ್ಥಿಕ ರಾಜಧಾನಿ ಶಾಂಘೈ ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿದೆ. ನಗರದ ಸುಮಾರು 2.5 ಕೋಟಿ ನಿವಾಸಿಗಳು ಇದೀಗ ಲಾಕ್​ಡೌನ್​ ನಿರ್ಬಂಧದ ಅಡಿಯಲ್ಲಿದ್ದು, ಮನೆಗಳಲ್ಲಿಯೇ ಉಳಿದಿದ್ದಾರೆ. ಸೋಂಕು ತಹಬದಿಗೆ ತರಲೆಂದು ಉನ್ನತ ಅಧಿಕಾರಿಗಳು ಸರ್ಕಾರ ಶಾಂಘೈಗೆ ಕಳುಹಿಸಿದೆ. ಭಾನುವಾರ ಮುಂಜಾನೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶಾಂಘೈ ನಗರದಲ್ಲಿ ಪ್ರಸ್ತುತ 8,200ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಡೀ ದೇಶದ ಒಟ್ಟು ಸೋಂಕಿತರ ಪೈಕಿ ಇದು ಶೇ 70ರಷ್ಟು ಪ್ರಮಾಣವಾಗಿದೆ. ಜಾಗತಿಕವಾಗಿ ವರದಿಯಾಗಿರುವ ಕೊರೊನಾ ಸೋಂಕು ಪ್ರಕರಣಗಳಿಗೆ ಹೋಲಿಸಿದರೆ ಚೀನಾದಲ್ಲಿ ಇದೀಗ ಕಂಡುಬರುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚೇನೂ ಅಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಸೋಂಕು ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡು ಬಂದಿದ್ದ ದೇಶಕ್ಕೆ ಇದು ಹೊಸ ತಲೆನೋವು ತಂದೊಡ್ಡಿದೆ.

ಶಾಂಘೈನಲ್ಲಿ ಜಾರಿ ಮಾಡಿರುವ ನಿರ್ಬಂಧ ಆದೇಶಗಳು ವಿಶ್ವ ಪೂರೈಕೆ ಸರಪಣಿಯ ಮೇಲೆಯೂ ಪರಿಣಾಮ ಬೀರುತ್ತವೆ. ಹಲವು ದೇಶಗಳಿಗೆ ಸೇವೆ ಒದಗಿಸುವ ಮೆರ್ಸ್​ಕ್ ಕಂಪನಿಯು ತನ್ನ ಡಿಪೊಗಳಲ್ಲಿ ಕಾರ್ಯ ಸ್ಥಗಿತಗೊಳಿಸಲಾಗಿದೆ ಶುಕ್ರವಾರ ಹೇಳಿಕೆ ಹೊರಡಿಸಿತ್ತು. ಟ್ರಕ್ ಸಂಚಾರಕ್ಕೂ ನಿರ್ಬಂಧವಿರುವ ಕಾರಣ ಸರಕುಸಾಗಣೆ ನಿಂತುಹೋಗಿದೆ. ಮುಂದಿನ ದಿನಗಳಲ್ಲಿ ಲಾಕ್​ಡೌನ್ ಆದೇಶ ಬಿಗಿಯಾದರೆ ಸಮಸ್ಯೆ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ.

ಲಾಕ್​ಡೌನ್ ವಿರುದ್ಧ ಶಾಂಘೈ ನಿವಾಸಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಆರಂಭದಲ್ಲಿ ಕೇವಲ ನಾಲ್ಕು ದಿನಗಳ ಅವಧಿಗೆಂದು ಲಾಕ್​ಡೌನ್ ನಿರ್ಬಂಧ ವಿಧಿಸಲಾಗಿತ್ತು. ಆದರೆ ನಂತರ ಇದನ್ನು ಒಂದು ವಾರಕ್ಕೆ, ಅನಂತರ ಇನ್ನೂ ಹೆಚ್ಚಿನ ಅವಧಿಗೆ ವಿಸ್ತರಿಸಲಾಯಿತು. ಚೀನಾದಲ್ಲಿ 2019ರಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೊರೊನಾ ವಿಚಾರದಲ್ಲಿ ಆರಂಭದಿಂದಲೂ ಚೀನಾ ಕಟ್ಟುನಿಟ್ಟಾಗಿ ವರ್ತಿಸುತ್ತಿದೆ. ಹಲವು ಕಠಿಣ ನಿರ್ಬಂಧ ಆದೇಶಗಳನ್ನು ಜಾರಿಗಳಿಸಿದೆ. ಈ ನಡುವೆ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಅಲ್ಲಿನ ಸರ್ಕಾರವನ್ನು ಚಿಂತೆಗೀಡು ಮಾಡಿದೆ.

ಇದನ್ನೂ ಓದಿ: Covid 4th Wave: ಚೀನಾದಲ್ಲಿ ಲಾಕ್​ಡೌನ್, ಫ್ರಾನ್ಸ್​ನಲ್ಲಿ ಹೆಚ್ಚಿದ ಕೊವಿಡ್ ರೋಗಿಗಳ ಸಂಖ್ಯೆ; ಭಾರತದಲ್ಲೂ ಮತ್ತೆ ಕೊರೊನಾ ಆತಂಕ

ಇದನ್ನೂ ಓದಿ: ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ ಆಂಬುಲೆನ್ಸ್ ಚಾಲಕ ದೇಹದಾನ -ನೇತ್ರದಾನ ಮಾಡಿದರು