ಲ್ಯಾಂಬೋರ್ಗಿನಿ, ಫೆರಾರಿ ಕಾರುಗಳನ್ನು ಚಲಾಯಿಸಲು ಅವಕಾಶ ಪಡೆದ 10 ವರ್ಷದ ಮಕ್ಕಳು

ಲ್ಯಾಂಬೋರ್ಗಿನಿ, ಫೆರಾರಿ ಕಾರುಗಳನ್ನು ಚಲಾಯಿಸಲು ಅವಕಾಶ ಪಡೆದ 10 ವರ್ಷದ ಮಕ್ಕಳು
ಟ್ರಾಕ್​ಡೇಸ್​ನ ಚಿತ್ರ

ಫೆರಾರಿ 458 ಇಟಾಲಿಯಾ ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿ ಫೆರಾರಿಗಳಲ್ಲಿ ಒಂದಾಗಿದೆ. 2009 ಮತ್ತು 2015ರ ನಡುವೆ ಈ ಕಾರನ್ನು ಉತ್ಪಾದಿಸಲಾಯಿತು.

TV9kannada Web Team

| Edited By: Sushma Chakre

Apr 02, 2022 | 3:51 PM

ನವದೆಹಲಿ: ಟ್ರ್ಯಾಕ್‌ಡೇಸ್‌ನ ಜೂನಿಯರ್ ಡ್ರೈವರ್ ಕಾರ್ಯಕ್ರಮದ ಭಾಗವಾಗಿ ಇಂಗ್ಲೆಂಡ್​ನಲ್ಲಿ 10ರಿಂದ 17 ವರ್ಷದ ಮಕ್ಕಳಿಗೆ ಒಂದು ಜೋಡಿ ಸೂಪರ್‌ಕಾರ್‌ಗಳು ಲಭ್ಯವಿರುತ್ತವೆ. ಹೀಗಾಗಿ, ಇಂಗ್ಲೆಂಡ್​ನಲ್ಲಿ ಮಕ್ಕಳು ಲೈಸೆನ್ಸ್​ ಪಡೆಯುವ ಮೊದಲೇ ಫೆರಾರಿ 458 ಇಟಾಲಿಯಾ ಅಥವಾ ಲ್ಯಾಂಬೋರ್ಘಿನಿ ಗಲ್ಲಾರ್ಡೊ LP 570 ಪರ್ಫಾರ್ಮಂಟೆಯನ್ನು ಚಲಾಯಿಸಬಹುದು. ವಯಸ್ಕರ ಮೇಲ್ವಿಚಾರಣೆಯಲ್ಲಿ ಮಕ್ಕಳು ಟ್ರಾಕ್​ ಡೇಸ್​ (TrackDays) ಕಾರ್ಯಕ್ರಮದ ಜೂನಿಯರ್ ಪ್ಲಾಟಿನಂ ಸೂಪರ್‌ಕಾರ್ ಅನುಭವದ ಭಾಗವಾಗಿ ರೇಸ್ ಟ್ರ್ಯಾಕ್‌ನ ಸುತ್ತಲೂ ಆರು ಮೈಲುಗಳವರೆಗೆ ಫೆರಾರಿ ಅಥವಾ ಲ್ಯಾಂಬೋರ್ಘಿನಿಯನ್ನು ಓಡಿಸಬಹುದು.

ನಾರ್ತ್ ವೇಲ್ಸ್‌ನ ಆಂಗ್ಲೆಸಿ ಸರ್ಕ್ಯೂಟ್ ಮತ್ತು ಸರ್ರೆಯ ಡನ್ಸ್‌ಫೋಲ್ಡ್ ಪಾರ್ಕ್ ಸೇರಿದಂತೆ ಇಂಗ್ಲೆಂಡ್​ನ ಸುತ್ತಲಿನ 10 ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಆನಂದಿಸಬಹುದು. ಈ ಕೊಡುಗೆ ಕಾನೂನುಬದ್ಧವಾಗಿದ್ದು, ಇಂಗ್ಲೆಂಡ್​​ನ ರೇಸ್ ಟ್ರ್ಯಾಕ್‌ನ ಅವಶ್ಯಕತೆಗಳಿಗೆ ಅನುಗುಣವಾಗಿ ಕಲಿಯುವ ಚಾಲಕರು ಯಾವುದೇ ಕಾರನ್ನು ಚಲಾಯಿಸಲು ಅನುಮತಿಸಲಾಗಿದೆ.

ಫೆರಾರಿ 458 ಇಟಾಲಿಯಾ ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿ ಫೆರಾರಿಗಳಲ್ಲಿ ಒಂದಾಗಿದೆ. 2009 ಮತ್ತು 2015ರ ನಡುವೆ ಈ ಕಾರನ್ನು ಉತ್ಪಾದಿಸಲಾಯಿತು. ಲ್ಯಾಂಬೋರ್ಘಿನಿ ಗಲ್ಲಾರ್ಡೊ LP 570 ಪರ್ಫಾರ್ಮೆಂಟ್ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ. 567 PS ಪವರ್ ಮತ್ತು 540 NM ಟಾರ್ಕ್‌ನೊಂದಿಗೆ 5.2 ಲೀಟರ್ ಸಾಮರ್ಥ್ಯದ V10 ಎಂಜಿನ್‌ನನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಇದನ್ನೂ ಓದಿ: Viral Video: ಉದ್ದೇಶಪೂರ್ವಕವಾಗಿ ವೃದ್ಧನ ಮೇಲೆ ಕಾರು ಹತ್ತಿಸಿದ ಚಾಲಕ; ಶಾಕಿಂಗ್ ವಿಡಿಯೋ ವೈರಲ್

ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ಮಹಿಳೆ

Follow us on

Related Stories

Most Read Stories

Click on your DTH Provider to Add TV9 Kannada