Vodafone Idea: ವೊಡಾಫೋನ್ ಐಡಿಯಾ ಪರಿಚಯಿಸಿದ ಹೊಸ ಪ್ಲಾನ್​ಗೆ ದಂಗಾದ ಜಿಯೋ, ಏರ್ಟೆಲ್

Vi 30 and 31 days prepaid plans: ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಇತ್ತೀಚೆಗಷ್ಟೆ ಹೊಸ ಯೋಜನೆ ಬಿಡುಗಡೆ ಮಾಡಿ ಗ್ರಾಹಕರಿಗೆ ಖುಷಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ವಿ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ 30 ಮತ್ತು 31 ದಿನಗಳ ಮಾನ್ಯತೆಯೊಂದಿಗೆ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.

Vodafone Idea: ವೊಡಾಫೋನ್ ಐಡಿಯಾ ಪರಿಚಯಿಸಿದ ಹೊಸ ಪ್ಲಾನ್​ಗೆ ದಂಗಾದ ಜಿಯೋ, ಏರ್ಟೆಲ್
Vodafone Idea New Plans
Follow us
TV9 Web
| Updated By: Vinay Bhat

Updated on:Apr 03, 2022 | 2:11 PM

ದೇಶದ ಮೂರನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ವೊಡಾಫೋನ್ ಐಡಿಯಾ (Vodafone Idea) ವಿ ಟೆಲಿಕಾಂ ನಂಬರ್ ಒನ್ ಕಂಪನಿ ಜಿಯೋ (Jio) ಹಾಗೂ ಏರ್ಟೆಲ್ (Airtel) ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತ ಮುನ್ನಡೆಯುತ್ತಿದೆ. ಸಾಮಾನ್ಯವಾಗಿ ಬಹುತೇಕ ಟೆಲಿಕಾಂ ಕಂಪನಿ ಪ್ಲಾನ್​ಗಳು ಅಲ್ಪಾವಧಿ ಬೆಲೆಯ ಯೋಜನೆಗಳ ಆಯ್ಕೆಯೊಂದಿಗೆ ವಾರ್ಷಿಕ ಪ್ಲಾನ್‌ಗಳ ಆಯ್ಕೆಯನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಅಧಿಕ ಡೇಟಾ ಪ್ರಯೋಜನ ಕೂಡ ಪಡೆದಿದೆ. ಇದೀಗ ಜಿಯೋ, ಏರ್ಟೆಲ್​ಗೆ ನೇರವಾಗಿ ಸವಾಲೊಡ್ಡಿರುವ ವೊಡಾಫೋನ್ ಐಡಿಯಾ ಎರಡು ಹೊಸ ಯೋಜನೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಇತ್ತೀಚೆಗಷ್ಟೆ ಹೊಸ ಯೋಜನೆ ಬಿಡುಗಡೆ ಮಾಡಿ ಗ್ರಾಹಕರಿಗೆ ಖುಷಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ವಿ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ 30 ಮತ್ತು 31 ದಿನಗಳ ಮಾನ್ಯತೆಯೊಂದಿಗೆ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅದುವೆ 327 ರೂ. ಮತ್ತು 377 ರೂ. ಬೆಲೆಯಲ್ಲಿ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳಾಗಿವೆ.

ವೊಡಾಫೋನ್‌ ಐಡಿಯಾ 327 ರೂ. ಪ್ಲಾನ್:

ವೊಡಾಫೋನ್‌ ಐಡಿಯಾದ ರೂ. 327 ಪ್ರಿಪೇಯ್ಡ್ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ದಿನಕ್ಕೆ 100 ಎಸ್‌ಎಮ್‌ಎಸ್ ಜೊತೆಗೆ ಒಟ್ಟು 25GB ಡೇಟಾ ನೀಡುತ್ತದೆ. ಅದರೊಂದಿಗೆ, ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ಮತ್ತು Vi Movies and TVಯ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.  ಪ್ರಿಪೇಯ್ಡ್ ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿಯನ್ನು ನೀಡುತ್ತದೆಯಾರೂ, ಇದು ದೈನಂದಿನ ಡೇಟಾ ಪ್ರಯೋಜನಗಳನ್ನು ಒದಗಿಸುವುದಿಲ್ಲ. ಚಂದಾದಾರರು ಒಟ್ಟು 25GB ಡೇಟಾವನ್ನು ಪಡೆಯುತ್ತಾರೆ, ಇದು ಒಂದು ತಿಂಗಳಿಗೆ ಸಾಕಾಗುತ್ತದೆ. ಆದರೆ ನೀವು ಭಾರೀ ಬಳಕೆದಾರರಾಗಿದ್ದರೆ, ದೈನಂದಿನ ಡೇಟಾ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಯೋಜನೆಗಳನ್ನು ಆಯ್ಕೆ ಮಾಡಬಹುದು.

ವೊಡಾಫೋನ್‌ ಐಡಿಯಾ 337 ರೂ. ಪ್ಲಾನ್:

ವಿ ಟೆಲಿಕಾಂನ 337ರೂ. ಪ್ರಿಪೇಯ್ಡ್ ಪ್ಲಾನ್‌ 31 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶಗಳ ಪ್ರಯೋಜನ ಪಡೆಯಬಹುದು.ಇದಲ್ಲದೆ ಒಟ್ಟು 28GB ಡೇಟಾ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಜೊತೆಗೆ ಈ ರೀಚಾರ್ಜ್ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ವಿ ಮೂವೀಸ್‌ ಮತ್ತು TV ​​ಅಪ್ಲಿಕೇಶನ್‌ಗೆ ಪೂರಕ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಇದುಕೂಡ ಯೋಜನೆಯು ದೈನಂದಿನ ಡೇಟಾ ಪ್ರಯೋಜನಗಳನ್ನು ನೀಡುವುದಿಲ್ಲ, ಇದು ಕೆಲವು ಬಳಕೆದಾರರಿಗೆ ನಿರಾಶಾದಾಯಕವಾಗಿರಬಹುದು.

ಇನ್ನು ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಕೂಡ ಗ್ರಾಹಕರಿಗೆ ಇದೇ ರೀತಿಯ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಇತ್ತೀಚೆಗೆ, ಏರ್‌ಟೆಲ್ ಕಂಪೆನಿ 296 ರೂ. ಮತ್ತು 319 ರೂ. ಮೌಲ್ಯದ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿತ್ತು. ಈ ಎರಡೂ ಯೋಜನೆಗಳು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶ ಸೌಲಭ್ಯ ಲಬ್ಯವಿದೆ. ಇದರಲ್ಲಿ ಏರ್‌ಟೆಲ್‌ 296 ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 25GB ಡೇಟಾ ಪ್ರಯೋಜನ ನೀಡಲಿದ್ದು, 30 ದಿನಗಳ ಮಾನ್ಯತೆ ನೀಡಲಿದೆ. ಆದರೆ 319 ರೂ. ಬೆಲೆಯ ಪ್ಲಾನ್‌ ಒಂದು ತಿಂಗಳ ಮಾನ್ಯತೆ ಹೊಂದಿದೆ.

ರಿಲಯನ್ಸ್ ಜಿಯೋ ಕೂಡ ಒಂದು ತಿಂಗಳ ವ್ಯಾಲಿಡಿಟಿಯ ಯೋಜನೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ  259 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 1.5GB ಡೇಟಾವನ್ನು ನೀಡುತ್ತದೆ. ಒಮ್ಮೆ ನೀವು ದೈನಂದಿನ ಡೇಟಾ ಪ್ರಯೋಜನವನ್ನು ಖಾಲಿ ಮಾಡಿದರೆ, ನೀವು 64kbps ವೇಗದಲ್ಲಿ ಇಂಟರ್ನೆಟ್ ಬ್ರೌಸ್ ಮಾಡಬಹುದು.  ದೈನಂದಿನ ಡೇಟಾ ಪ್ರಯೋಜನಗಳ ಜೊತೆಗೆ, ರಿಲಯನ್ಸ್ ಜಿಯೋ ಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ಸಹ ನೀಡುತ್ತದೆ. ನೀವು ದಿನಕ್ಕೆ 100 ಎಸ್‌ಎಮ್‌ಎಸ್  ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ. ಯೋಜನೆಯು ಒಂದು ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಪ್ರತಿ ತಿಂಗಳ ಕೊನೆಯಲ್ಲಿ ನವೀಕರಣಗೊಳ್ಳುತ್ತದೆ.

Airtel: ನೀವು ಏರ್ಟೆಲ್ ಬಳಕೆದಾರರೇ?: ಹಾಗಿದ್ರೆ ಡಿಸ್ನಿ+ ಹಾಟ್​ಸ್ಟಾರ್​​ನ ಈ ಬಂಪರ್ ಪ್ಲಾನ್ ನೋಡಿ

Published On - 2:05 pm, Sun, 3 April 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು