Viral Video: ಉದ್ದೇಶಪೂರ್ವಕವಾಗಿ ವೃದ್ಧನ ಮೇಲೆ ಕಾರು ಹತ್ತಿಸಿದ ಚಾಲಕ; ಶಾಕಿಂಗ್ ವಿಡಿಯೋ ವೈರಲ್
Shocking Video: ಗಾಜಿಯಾಬಾದ್‌ನಲ್ಲಿ ಕಾರು ಕಿರಿದಾದ ಲೇನ್‌ಗೆ ಬಂದು ನಂತರ ತನ್ನ ಮನೆಯ ಹೊರಗೆ ರಸ್ತೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಕಡೆಗೆ ವೇಗವಾಗಿ ಬಂದ ಕಾರು ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ.
ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Ghaziabad) ವೇಗವಾಗಿ ಬಂದ ಕಾರು ವೃದ್ಧನೊಬ್ಬನಿಗೆ ಡಿಕ್ಕಿ ಹೊಡೆದು ಅಷ್ಟೇ ವೇಗವಾಗಿ ಹೊರಟುಹೋಗಿದೆ. ಈ ವಿಡಿಯೋ ಭಾರೀ ವೈರಲ್ (Video Viral) ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಎಲ್ಲೆಡೆ ವೈರಲ್ ಆಗಿರುವ ಈ ಮನಕಲಕುವ ವಿಡಿಯೋದಲ್ಲಿ ವೃದ್ಧನೊಬ್ಬನಿಗೆ ಕಾರು ಡಿಕ್ಕಿ ಹೊಡೆದು, ವೇಗವಾಗಿ ಹೊರಟು ಹೋಗಿದೆ. ಕಾರು ಕಿರಿದಾದ ಲೇನ್‌ಗೆ ಬಂದು ನಂತರ ತನ್ನ ಮನೆಯ ಹೊರಗೆ ರಸ್ತೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಕಡೆಗೆ ವೇಗವಾಗಿ ಬರುವುದನ್ನು ನೋಡಬಹುದು. ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ಕಾರು ಆ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ವೃದ್ಧ ರಸ್ತೆಯ ಮೇಲೆ ಬಿದ್ದಿದ್ದಾನೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ವೇಗವಾಗಿ ಬಂದ ಕಾರೊಂದು ವೃದ್ಧರೊಬ್ಬರ ಮೇಲೆ ಹರಿದ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯ ವಿಡಿಯೋದಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದ ವೃದ್ಧನ ಮೇಲೆ ಕಾರು ಹರಿದಿರುವುದನ್ನು ತೋರಿಸಿದೆ.
Viral Video : ಯುಪಿಯ ಗಾಜಿಯಾಬಾದ್ ನಲ್ಲಿ ವೃದ್ಧನೊಬ್ಬನಿಗೆ ಕಾರು ಡಿಕ್ಕಿ ಹೊಡೆದು, ವೇಗವಾಗಿ ಹೊರಟು ಹೋಗಿದೆ. ಕಾರು ಕಿರಿದಾದ ಲೇನ್‌ಗೆ ಬಂದು ನಂತರ ತನ್ನ ಮನೆಯ ಹೊರಗೆ ರಸ್ತೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಕಡೆಗೆ ವೇಗವಾಗಿ ಬಂದು ಆ ಕಾರು ಆ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ. #viralvideo pic.twitter.com/nvDIDyzVFf
— TV9 Kannada (@tv9kannada) April 1, 2022
ಈ ಘಟನೆಯು ಉದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿರುವ ವೃದ್ಧ, ಆರು ತಿಂಗಳ ಹಿಂದೆ ಪ್ರಾರಂಭವಾದ ವಿವಾದದಿಂದಾಗಿ ತನ್ನ ನೆರೆಹೊರೆಯವರು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆರು ತಿಂಗಳ ಹಿಂದೆ ಪ್ರಾರಂಭವಾದ ವಿವಾದದಿಂದಾಗಿ ತನ್ನ ನೆರೆಹೊರೆಯವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ. ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದೆ. ಈ ಘಟನೆಯ ನಂತರ ಆ ವೃದ್ಧ ತನ್ನ ನೆರೆಹೊರೆಯವರ ವಿರುದ್ಧ ದೂರು ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ನಡುರಸ್ತೆಯಲ್ಲಿ ವಿಕಲಚೇತನನನ್ನು ಥಳಿಸಿ, ಸ್ಕೂಟಿ ಮುರಿದು ಹಾಕಿದ ದಂಪತಿ; ಶಾಕಿಂಗ್ ವಿಡಿಯೋ ವೈರಲ್
Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!
Published On - 1:12 pm, Fri, 1 April 22