AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೊಲದಲ್ಲಿ ಕರಡಿ ವೇಷ ಹಾಕಿ ಓಡಾಡಿದರೆ ತಿಂಗಳಿಗೆ 15,000 ರೂ. ಸಂಬಳ!

ತೆಲಂಗಾಣದ ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ಕರಡಿಯ ವೇಷ ಧರಿಸಲು ವ್ಯಕ್ತಿಯನ್ನು ನೇಮಿಸಿದ್ದಾರೆ.

Viral Video: ಹೊಲದಲ್ಲಿ ಕರಡಿ ವೇಷ ಹಾಕಿ ಓಡಾಡಿದರೆ ತಿಂಗಳಿಗೆ 15,000 ರೂ. ಸಂಬಳ!
ಕರಡಿ ವೇಷ ಧರಿಸಿ ನಿಂತಿರುವ ಮನುಷ್ಯ
TV9 Web
| Edited By: |

Updated on: Apr 01, 2022 | 3:41 PM

Share

ಹೈದರಾಬಾದ್: ಜೀವನೋಪಾಯಕ್ಕಾಗಿ ಜನರು ಏನೇನೋ ಉದ್ಯೋಗ ಮಾಡುತ್ತಾರೆ. ಕೆಲವೊಂದು ಉದ್ಯೋಗ ನೋಡಲು ವಿಚಿತ್ರವೆನಿಸಿದರೂ ಅದರಿಂದ ನೀವು ಊಹಿಸಲೂ ಸಾಧ್ಯವಾಗದಷ್ಟು ಹಣ ಬರುತ್ತದೆ. ಕೆಲವೊಂದು ಕೆಲಸ ನೋಡಲು ಯಕಃಶ್ಚಿತ್ ಎನಿಸಿದರೂ ಬೇರೆ ವಿಧಿಯಿಲ್ಲದೆ ಆ ಕೆಲಸ ಮಾಡಲೇಬೇಕಾಗುತ್ತದೆ. ತೆಲಂಗಾಣದ (Telangana) ಸಿದ್ದಿಪೇಟ್ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು (Monkey) ಮತ್ತು ಕಾಡುಹಂದಿಗಳಿಂದ ರಕ್ಷಿಸಲು ಒಂದು ವಿಶಿಷ್ಟ ಉಪಾಯವನ್ನು ಮಾಡಿದ್ದಾರೆ. ವ್ಯಕ್ತಿಯೊಬ್ಬನಿಗೆ ಕರಡಿಯ ವೇಷ ಹಾಕಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ತಮ್ಮ ಹೊಲಕ್ಕೆ ಕೋತಿಗಳು ಬಾರದಂತೆ ತಡೆಯುತ್ತಿದ್ದಾರೆ.

ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ಕರಡಿಯ ವೇಷ ಧರಿಸಲು ವ್ಯಕ್ತಿಯನ್ನು ನೇಮಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

“ಕೋತಿಗಳು ಹಾಗೂ ಹಂದಿಗಳ ಹಾವಳಿಯನ್ನು ತಪ್ಪಿಸಲು ಒಬ್ಬ ವ್ಯಕ್ತಿಗೆ ಕರಡಿಯ ವೇಷ ಹಾಕಿ, ಹೊಲದ ತುಂಬ ಓಡಾಡಲು ದಿನಕ್ಕೆ 500 ರೂ.ಗೆ ವ್ಯಕ್ತಿಯನ್ನು ನೇಮಿಸಿಕೊಂಡಿದ್ದೇನೆ” ಎಂದು ಅವರು ಎಎನ್‌ಐಗೆ ತಿಳಿಸಿದ್ದಾರೆ.

ಹೊಲದ ಬೆಳೆಯನ್ನು ಸುರಕ್ಷಿತವಾಗಿಡಲು ವ್ಯಕ್ತಿಯೊಬ್ಬ ದಿನವಿಡೀ ಹೊಲದಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೆಲಸಕ್ಕಾಗಿ ಮನುಷ್ಯನಿಗೆ ದಿನಕ್ಕೆ 500 ರೂಪಾಯಿ ನೀಡಲಾಗುತ್ತಿದೆ ಎಂದು ಕೆಲವು ನೆಟಿಜನ್‌ಗಳು ಆಶ್ಚರ್ಯಪಟ್ಟರೆ, ಇನ್ನು ಕೆಲವರು ದಿನವಿಡೀ ಕರಡಿಯ ವೇಷಭೂಷಣವನ್ನು ಧರಿಸುವುದು ಮತ್ತು ಪ್ರಾಣಿಗಳನ್ನು ದೂರ ಇಡುವುದು ಅಷ್ಟು ಸುಲಭವಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಕರಡಿ ವೇಷ ಹಾಕಿಕೊಳ್ಳಲು ತಿಂಗಳಿಗೆ 15,000 ರೂ. ಸಂಬಳವೇ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಕರಡಿ ವೇಷದಲ್ಲಿರುವ ಮನುಷ್ಯ ಸ್ವತಂತ್ರ ಬರಹಗಾರರಿಗಿಂತ ಹೆಚ್ಚು ಗಳಿಸುತ್ತಿದ್ದಾನೆ ಎಂದು ತಮಾಷೆ ಮಾಡಿದ್ದಾರೆ.

ಕರಡಿಯ ವೇಷವನ್ನು ಧರಿಸಲು ಮತ್ತು ಕೋತಿ ಮತ್ತು ಕಾಡುಹಂದಿಗಳನ್ನು ದೂರವಿರಿಸಲು ಹೊಲಗಳಲ್ಲಿ ತಿರುಗಾಡಲು ತಿಂಗಳಿಗೆ 15,000 ರೂ. ನೀಡಲಾಗುತ್ತಿದೆ. ಕೆಲವು ಸಾಫ್ಟ್​ವೇರ್ ಇಂಜಿನಿಯರ್​ಗೂ ಆರಂಭದಲ್ಲಿ ಇಷ್ಟು ಸಂಬಳ ಸಿಗುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್​ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!

Viral Video: ತನ್ನ ಮೇಲೆ ಮುತ್ತಿನ ಮಳೆ ಸುರಿಸಿದವನಿಗೆ ಬೆಕ್ಕಿನ ಮರಿ ಏನು ಮಾಡಿತು ಗೊತ್ತಾ?; ಕ್ಯೂಟ್ ವಿಡಿಯೋ ಇಲ್ಲಿದೆ