AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಬಾತ್​ರೂಂನೊಳಗೆ ನುಗ್ಗಿ ಟಾಯ್ಲೆಟ್ ಪೇಪರ್ ಸುತ್ತಿಕೊಂಡ ಕಾಳಿಂಗ ಸರ್ಪ; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಕಾಳಿಂಗ ಸರ್ಪ ವ್ಯಕ್ತಿಯೊಬ್ಬನ ಮನೆಗೆ ನುಗ್ಗಿ ಆತನ ಬಾತ್​ರೂಂನೊಳಗೆ ಸೇರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Shocking Video: ಬಾತ್​ರೂಂನೊಳಗೆ ನುಗ್ಗಿ ಟಾಯ್ಲೆಟ್ ಪೇಪರ್ ಸುತ್ತಿಕೊಂಡ ಕಾಳಿಂಗ ಸರ್ಪ; ಶಾಕಿಂಗ್ ವಿಡಿಯೋ ಇಲ್ಲಿದೆ
ಬಾತ್​ರೂಂನೊಳಗೆ ನುಗ್ಗಿದ ಹಾವು
TV9 Web
| Edited By: |

Updated on: Apr 01, 2022 | 7:34 PM

Share

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿರುವ ಕಾಳಿಂಗ ಸರ್ಪ (King Cobra) ಬೇರೆಲ್ಲ ಹಾವುಗಳಿಗಿಂತಲೂ ಉದ್ದವಾದ ಹಾವು. ಈ ಕಾಳಿಂಗ ಸರ್ಪ ಕಚ್ಚಿದರೆ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ. ಕಾಳಿಂಗ ಸರ್ಪ ಸುಮಾರು 10ರಿಂದ 12 ಅಡಿ ಉದ್ದವಿರುತ್ತದೆ ಮತ್ತು ಸರಾಸರಿ 20 ಪೌಂಡ್​ನಷ್ಟು ತೂಕವಿರುತ್ತದೆ. ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿಗಳು ಅಥವಾ ಇತರ ಹಾವುಗಳನ್ನು ತಿನ್ನುತ್ತವೆ. ಅವುಗಳಿಗೆ ತೊಂದರೆ ಕೊಡದಿದ್ದರೆ ಕಾಳಿಂಗ ಸರ್ಪಗಳು ಮನುಷ್ಯರನ್ನು ಕಚ್ಚುವುದು ಬಹಳ ಅಪರೂಪ.

ಇದೇ ಕಾಳಿಂಗ ಸರ್ಪ ವ್ಯಕ್ತಿಯೊಬ್ಬನ ಮನೆಗೆ ನುಗ್ಗಿ ಆತನ ಬಾತ್​ರೂಂನೊಳಗೆ ಸೇರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿ ತನ್ನ ಬಾತ್​ರೂಮ್‌ನ ಬಾಗಿಲು ತೆರೆಯುತ್ತಿದ್ದಂತೆ ಕಮೋಡ್​ನ ಸುತ್ತ ತನ್ನ ಬಾಲವನ್ನು ಸುತ್ತಿ ಗೋಡೆಯ ಮೇಲೆ ಹರಿದಾಡಲು ಪ್ರಯತ್ನಿಸುತ್ತಿದ್ದ ದೊಡ್ಡ ಕಾಳಿಂಗ ಸರ್ಪವನ್ನು ವಿಡಿಯೋದಲ್ಲಿ ನೋಡಬಹುದು.

ಈ ಭಯಾನಕ ದೃಶ್ಯವು ಕಾಳಿಂಗ ಸರ್ಪ ಬಾತ್​ರೂಂನ ಸುತ್ತಲೂ ಚಲಿಸುತ್ತಿರುವುದನ್ನು ಮತ್ತು ಹೊರಬರಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಆಗ ಅಲ್ಲೇ ಇದ್ದ ಟಾಯ್ಲೆಟ್ ಪೇಪರ್ ಅನ್ನು ತನ್ನ ಮೈಗೆ ಸುತ್ತಿಕೊಳ್ಳುವ ಹಾವು ಗೋಡೆಯ ಮೇಲೆ ಹರಿದಾಡತೊಡಗುತ್ತದೆ. ಆ ಹಾವು ಹೊರಬರದಂತೆ ಆ ವ್ಯಕ್ತಿ ಬಾತ್​ರೂಮ್ ಬಾಗಿಲು ಮುಚ್ಚುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ಈ ಶಾಕಿಂಗ್ ವಿಡಿಯೋವನ್ನು 55,700ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಭಾರೀ ಶೇರ್ ಕೂಡ ಆಗಿದೆ.

ಇದನ್ನೂ ಓದಿ: Viral Video: ಹೊಲದಲ್ಲಿ ಕರಡಿ ವೇಷ ಹಾಕಿ ಓಡಾಡಿದರೆ ತಿಂಗಳಿಗೆ 15,000 ರೂ. ಸಂಬಳ!

Viral News: ಶಾಪಿಂಗ್ ಮಾಡುವಾಗ ಗಂಡ ಕಿರಿಕಿರಿ ಮಾಡ್ತಾನಾ?; ಈ ಮಾಲ್​ನಲ್ಲಿದೆ ಹಸ್ಬೆಂಡ್ ಸ್ಟೋರೇಜ್ ಪಾಡ್ಸ್

Follow Us
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!