Viral News: ಶಾಪಿಂಗ್ ಮಾಡುವಾಗ ಗಂಡ ಕಿರಿಕಿರಿ ಮಾಡ್ತಾನಾ?; ಈ ಮಾಲ್ನಲ್ಲಿದೆ ಹಸ್ಬೆಂಡ್ ಸ್ಟೋರೇಜ್ ಪಾಡ್ಸ್
ಶಾಪಿಂಗ್ ಮಾಡುವಾಗ ಬೇಗ ಮುಗಿಸೆಂದು ಕಿರಿ ಕಿರಿ ಮಾಡುವ ಗಂಡನಿಂದ ದೂರವಿರಲು ಬಯಸುವ ಮಹಿಳೆಯರಿಗಾಗಿ ಚೀನಾದ ಮಾಲ್‌ನವರು 'ಹಸ್ಬೆಂಡ್ ಸ್ಟೋರೇಜ್' ಪಾಡ್‌ಗಳನ್ನು ಪರಿಚಯಿಸಿದ್ದಾರೆ.
ಮಹಿಳೆಯರು ಶಾಪಿಂಗ್ಗೆ (Shopping) ಹೋದರೆ ಬೆಳಗ್ಗೆಯಿಂದ ಸಂಜೆಯವರೆಗೂ ಸುತ್ತಾಡಿದರೂ ಅವರಿಗೆ ಸುಸ್ತಾಗುವುದೇ ಇಲ್ಲ. ಅದರಲ್ಲೂ ಮಾಲ್ಗಳಲ್ಲಿ (Mall) ಎಲ್ಲ ವಸ್ತುಗಳೂ ಒಂದೇ ಕಡೆ ಸಿಗುವುದರಿಂದ ಮಹಿಳೆಯರನ್ನೂ ಹಿಡಿಯುವುದೇ ಕಷ್ಟ. ಹೀಗಿದ್ದಾಗ ತಮ್ಮ ಹೆಂಡತಿಯರಿಗೆ ಶಾಪಿಂಗ್ ಮಾಡಿಸಲು ಅವರ ಜೊತೆ ಹೋಗುವ ಗಂಡಸರ ಪಾಡು ಕೇಳೋದೇ ಬೇಡ. ಹೆಂಡತಿ ಶಾಪಿಂಗ್ ಮಾಡುವಾಗ ಕಾದು ಕಾದು ಸುಸ್ತಾಗುವ ಗಂಡಸರಿಗಾಗಿ ಚೀನಾದಲ್ಲಿ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ. ಶಾಪಿಂಗ್ ಮಾಡುವಾಗ ಬೇಗ ಮುಗಿಸೆಂದು ಕಿರಿ ಕಿರಿ ಮಾಡುವ ಗಂಡನಿಂದ ದೂರವಿರಲು ಬಯಸುವ ಮಹಿಳೆಯರಿಗಾಗಿ ಚೀನಾದ ಮಾಲ್‌ನವರು ‘ಹಸ್ಬೆಂಡ್ ಸ್ಟೋರೇಜ್’ ಪಾಡ್‌ಗಳನ್ನು ಪರಿಚಯಿಸಿದ್ದಾರೆ.
ಶಾಂಘೈನಲ್ಲಿರುವ ಗ್ಲೋಬಲ್ ಹಾರ್ಬರ್ ಮಾಲ್‌ನಲ್ಲಿ ಹಸ್ಬಂಡ್ ಸ್ಟೋರೇಜ್ ಪಾಡ್ ನಿರ್ಮಿಸಲಾಗಿದೆ. ಒಬ್ಬ ವ್ಯಕ್ತಿ ಕುಳಿತುಕೊಳ್ಳಬಹುದಾದ ಗಾಜಿನ ರೂಂಗಳನ್ನು ನಿರ್ಮಿಸಲಾಗಿದ್ದು, ಶಾಪಿಂಗ್ ಮಾಡಲು ಬಂದ ಮಹಿಳೆಯರು ತಮ್ಮ ಗಂಡನನ್ನು ಆ ರೂಮಿನೊಳಗೆ ಕೂರಿಸಿ, ತಮ್ಮ ಮನಸೋಇಚ್ಛೆ ಶಾಪಿಂಗ್ ಮಾಡಬಹುದು. ಹಾಗೇ, ಇದರಿಂದ ಗಂಡಸರು ಹೆಂಡತಿಯ ಹಿಂದೆ ಮಾಲ್ ತುಂಬ ಸುತ್ತಾಡಬೇಕಾದ ಅನಿವಾರ್ಯತೆ ಕೂಡ ತಪ್ಪುತ್ತದೆ.
ಅಂದಹಾಗೆ, ಗಾಜಿನ ರೂಂಗಳೆಂದರೆ ಇದೇನೂ ಬೋರಿಂಗ್ ಏರಿಯಾವಲ್ಲ. ಇದರೊಳಗೆ ಕುರ್ಚಿ, ಮಾನಿಟರ್, ಗೇಮ್‌ಪ್ಯಾಡ್ ಮತ್ತು ಸಾಕಷ್ಟು ರೆಟ್ರೊ ಆಟಗಳನ್ನು ಕೂಡ ವ್ಯವಸ್ಥೆ ಮಾಡಲಾಗಿರುತ್ತದೆ. ಇವೆಲ್ಲವನ್ನೂ ಎಂಜಾಯ್ ಮಾಡುತ್ತಾ ಗಂಡಸರು ತಮ್ಮ ಹೆಂಡತಿಯ ಶಾಪಿಂಗ್ ಸಮಯವನ್ನು ಖುಷಿಯಾಗಿ ಕಳೆಯಬಹುದು.
ಈ ಗ್ಲಾಸ್ ರೂಂನೊಳಗೆ ಹೋಗುವ ಎಲ್ಲಾ ಬಳಕೆದಾರರು ಪಾಡ್‌ಗಳ ಒಳಗೆ ಆಟಗಳನ್ನು ಉಚಿತವಾಗಿ ಆಡಬಹುದು. ಆದರೆ ಅವರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಮನರಂಜನೆಗಾಗಿ ಸ್ವಲ್ಪ ಹಣವನ್ನು ಪಾವತಿಸುವಂತೆ ಮಾಡುವ ಯೋಜನೆಯನ್ನು ಮಾಲ್ ಮುಂದಿನ ದಿನಗಳಲ್ಲಿ ಹಾಕಿಕೊಂಡಿದೆ. ಈ ವಿಚಾರ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Viral News: ತನ್ನ ಹೆಂಡತಿ ಹೆಣ್ಣಲ್ಲವೆಂದು ತಿಳಿದ ಪತಿ ಮುಂದೆ ಮಾಡಿದ್ದೇನು ಗೊತ್ತಾ..?
Shocking News: ಹೊಲದಲ್ಲಿ ಚಿರತೆಯೊಂದಿಗೆ ಹೋರಾಡಿ ಮೊಮ್ಮಗಳನ್ನು ಕಾಪಾಡಿದ ಅಜ್ಜಿ
Published On - 1:40 pm, Thu, 17 March 22