Viral News: ಮಗು ಹುಟ್ಟಿದ ಬಳಿಕ ನಿದ್ರೆಗೆಡಬೇಕಾದ ಗಂಡನಿಗೆ ಲ್ಯಾಂಬೋರ್ಗಿನಿ ಗಿಫ್ಟ್​ ಕೊಟ್ಟ ಗರ್ಭಿಣಿ ಹೆಂಡತಿ!

ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ಮಾಡಲಾಗಿದ್ದು, ಕಣ್ಣು ಮುಚ್ಚಿ ಕುಳಿತಿದ್ದ ವೆಲ್ಡಾನ್‌ಗೆ ಅಚ್ಚರಿಯ ಉಡುಗೊರೆಯನ್ನು ನೀಡುವ ವೀಡಿಯೊವನ್ನು ಆನೆಸ್ ಪೋಸ್ಟ್ ಮಾಡಿದ್ದಾರೆ.

Viral News: ಮಗು ಹುಟ್ಟಿದ ಬಳಿಕ ನಿದ್ರೆಗೆಡಬೇಕಾದ ಗಂಡನಿಗೆ ಲ್ಯಾಂಬೋರ್ಗಿನಿ ಗಿಫ್ಟ್​ ಕೊಟ್ಟ ಗರ್ಭಿಣಿ ಹೆಂಡತಿ!
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 17, 2022 | 4:44 PM

ಗಂಡ ಹೆಂಡತಿ ನಡುವೆಯೂ ಉಡುಗೊರೆಗಳ ವಿನಿಮಯ ಆಗಾಗ ಆಗುತ್ತಿರುತ್ತದೆ. ಗರ್ಭಿಣಿ ಮಹಿಳೆಯೊಬ್ಬರು ತಮ್ಮ ಮೊದಲ ಮಗುವಿನ ಜನನದ ಮೊದಲು ತನ್ನ ಪತಿಗೆ ಲಂಬೋರ್ಗಿನಿ ( Lamborghini) ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ತಾನು ಮಗುವನ್ನು ಹೆತ್ತ ನಂತರ ಆ ಮಗುವಿನ ಬೇಕು-ಬೇಡಗಳನ್ನು ನೋಡಿಕೊಳ್ಳುವ, ಮಗುವಿಗಾಗಿ ರಾತ್ರಿಯಿಡೀ ನಿದ್ರೆಯಿಲ್ಲದೆ ಕಾಯಬೇಕಾದ ಅನಿವಾರ್ಯತೆ ಇರುವುದರಿಂದ ಆಕೆ ತನ್ನ ಗಂಡನಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾಳೆ.

ಕಾಸ್ಮೆಟಿಕ್ ಗುರುವಾಗಿರುವ 19 ವರ್ಷದ ಆನೆಸ್ ಅಯುನಿ ಒಸ್ಮಾನ್ ಮಾರ್ಚ್ ಅಂತ್ಯದಲ್ಲಿ ತನ್ನ ಪತಿಯಾದ 20 ವರ್ಷದ ಉದ್ಯಮಿ ವೆಲ್ಡಾನ್ ಜುಲ್ಕೆಫ್ಲಿಯ ಮಗುವಿಗೆ ತಾಯಿಯಾಗಲಿದ್ದಾರೆ. ಸಂಪ್ರದಾಯದ ಪ್ರಕಾರ, ಪ್ರಸವದ ನಂತರದ ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ಆಕೆ ಸಂಪೂರ್ಣ ವಿಶ್ರಾಂತಿಯಲ್ಲಿರಬೇಕಾಗುತ್ತದೆ. ಹೀಗಾಗಿ, ಈ ಸಮಯದಲ್ಲಿ, ಆನೆಸ್ ತನ್ನ ಸಹಾಯಕ್ಕಾಗಿ ತನ್ನ ಪತಿಯನ್ನು ಅವಲಂಬಿಸಬೇಕಾಗುತ್ತದೆ. ಹೀಗಾಗಿ, ನನ್ನ ಗಂಡನ ನಿದ್ದೆಯಿಲ್ಲದ ಮುಂಬರುವ ರಾತ್ರಿಗಳಿಗೆ ಧನ್ಯವಾದಗಳು. ಆತ ಮುಂದೆ ನನ್ನ ಮತ್ತು ನನ್ನ ಮಗುವಿನ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾದ್ದರಿಂದ ಈ ಉಡುಗೊರೆ ನೀಡುತ್ತಿದ್ದೇನೆ ಎಂದು ಆನೆಸ್ ಹೇಳಿದ್ದಾರೆ.

ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ಮಾಡಲಾಗಿದ್ದು, ಕಣ್ಣು ಮುಚ್ಚಿ ಕುಳಿತಿದ್ದ ವೆಲ್ಡಾನ್‌ಗೆ ಅಚ್ಚರಿಯ ಉಡುಗೊರೆಯನ್ನು ನೀಡುವ ವೀಡಿಯೊವನ್ನು ಆನೆಸ್ ಪೋಸ್ಟ್ ಮಾಡಿದ್ದಾರೆ. ಗಂಡನೊಂದಿಗೆ ಕಾರ್ ಡೀಲರ್‌ಶಿಪ್‌ಗೆ ತೆರಳುವ ಆಕೆ ಅಲ್ಲಿ ವೆಲ್ಡಾನ್ ಕಣ್ಣುಮುಚ್ಚಿ, ಆತನಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುತ್ತಾಳೆ. ಆತ ತನ್ನ ಹೆಂಡತಿಯನ್ನು ಖುಷಿಯಿಂದ ತಬ್ಬಿಕೊಳ್ಳುತ್ತಾನೆ.

ಇದಕ್ಕೆ ಹಲವರು ಕಮೆಂಟ್ ಮಾಡಿದ್ದು, ನಿಮ್ಮ ಕಾಳಜಿ ವಹಿಸಿಕೊಳ್ಳಬೇಕೆಂಬ ಕಾರಣಕ್ಕೆ ಗಂಡನಿಗೆ ಈ ಲ್ಯಾಂಬೋರ್ಗಿನಿ ನೀಡುವ ಬದಲು ನರ್ಸ್​ ಒಬ್ಬಳನ್ನು ಅಪಾಯಿಂಟ್​ ಮಾಡಿಕೊಳ್ಳುವುದು ಅಗ್ಗವಾಗುತ್ತಿತ್ತು ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಆನೆಸ್, “ನನ್ನ ಪತಿ ಎಲ್ಲಾ ಸಮಯದಲ್ಲೂ ನನ್ನೊಂದಿಗೆ ಇರಬೇಕೆಂದು ನಾನು ನಿರೀಕ್ಷಿಸುತ್ತೇನೆ. ಅವನು ಮಗುವನ್ನು ಹಗಲು ರಾತ್ರಿ ಕಾಳಜಿ ವಹಿಸಬೇಕು. ಏಕೆಂದರೆ ನಾನು ಸಿಸೇರಿಯನ್ ಹೆರಿಗೆಗೆ ಒಳಗಾಗುವ ಸಾಧ್ಯತೆಯಿದೆ” ಎಂದಿದ್ದಾರೆ.

ಇದನ್ನೂ ಓದಿ: Viral News: ಶಾಪಿಂಗ್ ಮಾಡುವಾಗ ಗಂಡ ಕಿರಿಕಿರಿ ಮಾಡ್ತಾನಾ?; ಈ ಮಾಲ್​ನಲ್ಲಿದೆ ಹಸ್ಬೆಂಡ್ ಸ್ಟೋರೇಜ್ ಪಾಡ್ಸ್

Viral News: ಅಮ್ಮ ಬರೆದ ಪತ್ರ ಹಿಡಿದು ಏಕಾಂಗಿಯಾಗಿ 1,400 ಕಿ.ಮೀ ನಡೆದು ಉಕ್ರೇನ್ ಗಡಿ ದಾಟಿದ ಬಾಲಕ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ