ಸುಲಭವಾಗಿ ಆನೆ ಸೊಂಡಿಲು ಮೇಲೆ ಕಾಲಿಟ್ಟು ಮೇಲೇರಿ ಕುಳಿತ ಮಾವುತ; ನಿಜ ಜೀವನದ ಬಾಹುಬಲಿ ಎಂದ ನೆಟ್ಟಿಗರು
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು #ಬಾಹುಬಲಿ 2ನಲ್ಲಿ @ಪ್ರಭಾಸ್ರಾಜು ಹಾಗೆ ಮಾಡಿದ್ದಾರೆ ಎಂದು ಬರೆದಿಕೊಂಡಿದ್ದಾರೆ.
(viral video) ಬಾಹುಬಲಿ 2, 2017 ರ ಅತ್ಯಂತ ಪ್ರೀತಿ ಪಾತ್ರ ಭಾರತೀಯ ಮಹಾಕಾವ್ಯ ಚಲನಚಿತ್ರಗಳಲ್ಲಿ ಒಂದಾಗಿದೆ. ಅದು ಬಿಡುಗಡೆಯಾದಾಗಿನಿಂದ, ನಟ ಪ್ರಭಾಸ್‌ಗೆ ಮತ್ತಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅವರ ವಿಶೇಷ ಫಿಲ್ಮಿ ಶೈಲಿಯ ಆಕ್ಷನ್ ಸೀಕ್ವೆನ್ಸ್‌ಗಳು ಅನೇಕ ಜನರನ್ನು ಚಲನಚಿತ್ರ ದೃಶ್ಯಗಳನ್ನು ಮರುಸೃಷ್ಟಿಸಲು ಕಾರಣವಾಗಿವೆ. ಪ್ರಭಾಸ್ ಅವರ ಗ್ರ್ಯಾಂಡ್ ಎಂಟ್ರಿ ದೃಶ್ಯವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನವರು ಯಶಸ್ವಿಯಾಗಲಿಲ್ಲ, ಆದರೆ ಈ ವ್ಯಕ್ತಿ ಅದನ್ನು ಹಿಂದೆಂದೂ ಯಾರೂ ಕೂಡ ಮಾಡದಂತೆ ಮಾಡಿದ್ದಾರೆ. ಹೌದು ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾವುತ ಆನೆಯ ಮೇಲೆ ಹತ್ತುವುದು ಮತ್ತು ಸವಾರಿ ಮಾಡುವುದು ಆತನಿಗೆ ಅದು ದೈನಂದಿನ ವಿಷಯ. ಆದರೆ ಅವರು ಆನೆಯನ್ನು ಹತ್ತುವುದು ಎಷ್ಟು ಸುಲಭ ಎಂಬುದು ಜನರು ಬಾಹುಬಲಿ 2ರ ಚಿತ್ರದಲ್ಲಿ ಆನೆಯನ್ನು ಪಳಗಿಸಿ ಅದರ ಸೊಂಡಿಲಿನ ಮೇಲೆ ನಿಲ್ಲುವ ದೃಶ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ವಯಸ್ಸಾದ ಮಾವುತ ಆನೆಯ ಸೊಂಡಿಲಿನ ಮೇಲೆ ಎಷ್ಟು ಅನಾಯಾಸವಾಗಿ ಹತ್ತಿ, ಕ್ರಮೇಣ ಅದರ ಮೇಲೆ ಕುಳಿತುಕೊಳ್ಳುವುದನ್ನು ನೋಡಿ ಜನರು ಆಶ್ಚರ್ಯ ಪಟ್ಟಿದ್ದು, ಆನೆ ಕೂಡ ತನ್ನ ಸೊಂಡಿಲನ್ನು ಕೆಳಕ್ಕೆ ಇಳಿಸಿ ತನ್ನ ಮಾವುತನನ್ನು ಮೇಲೆ ಏರಲು ಸಹಾಯ ಮಾಡುತ್ತದೆ.
He did it like @PrabhasRaju in #Baahubali2. @BaahubaliMovie @ssrajamouli pic.twitter.com/nCpTLYXp7g
— Dipanshu Kabra (@ipskabra) March 30, 2022
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು #ಬಾಹುಬಲಿ 2ನಲ್ಲಿ @ಪ್ರಭಾಸ್ರಾಜು ಹಾಗೆ ಮಾಡಿದ್ದಾರೆ ಎಂದು ಬರೆದಿಕೊಂಡಿದ್ದಾರೆ. ಜನರು ವೀಡಿಯೋವನ್ನು ಎಷ್ಟು ಇಷ್ಟಪಟ್ಟಿದ್ದಾರೆ ಎಂದರೆ ಇದುವರೆಗೂ 28,000 ಕ್ಕೂ ಹೆಚ್ಚು ವೀಕ್ಷಣೆ ಮತ್ತು 420 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ.
ಕೆಲವರು ಮಾವುತನನ್ನು ನಿಜವಾದ ಬಾಹುಬಲಿ ಎಂದು ಕರೆಯುತ್ತಿದ್ದರೆ, ಇತರರು ಪ್ರಾಣಿ ಮತ್ತು ಮನುಷ್ಯನ ನಡುವಿನ ಶುದ್ಧ ಬಂಧವನ್ನು ಶ್ಲಾಘಿಸುತ್ತಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಪ್ರಭಾಸ್ ಅವರಂತೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಹೆಲಿಕಾಪ್ಟರ್ ಮೂಲಕ ವಿಜಯ್ ದೇವರಕೊಂಡ ಮಾಸ್ ಎಂಟ್ರಿ; ಇಲ್ಲಿದೆ ವಿಡಿಯೋ
ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ