ಜಮ್ಮು-ಕಾಶ್ಮೀರದಲ್ಲಿ ಭೀಕರ ದುರಂತ; ಕಂದಕಕ್ಕೆ ಬಿದ್ದ ವಾಹನ, 9 ಮಂದಿ ದುರ್ಮರಣ

ವಾಹನದಲ್ಲಿ ಒಟ್ಟು 13 ಮಂದಿ ಪ್ರಯಾಣ ಮಾಡುತ್ತಿದ್ದರು. ಕಂದಕ್ಕೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ. ಅದಾದ ನಂತರ ಪೊಲೀಸರು, ಆರೋಗ್ಯ ಸಿಬ್ಬಂದಿ ಆಗಮಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭೀಕರ ದುರಂತ; ಕಂದಕಕ್ಕೆ ಬಿದ್ದ ವಾಹನ, 9 ಮಂದಿ ದುರ್ಮರಣ
ಜಮ್ಮು-ಕಾಶ್ಮೀರದಲ್ಲಿ ಅಪಘಾತ
Follow us
| Updated By: Lakshmi Hegde

Updated on: Apr 01, 2022 | 8:48 AM

ಜಮ್ಮು-ಕಾಶ್ಮೀರದ (Jammu Kashmir) ಪೂಂಚ್​ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಇದರಲ್ಲಿ 9 ಮಂದಿ ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂಂಚ್​​ನ ಬುಫಲಿಯಾಜ್​ ಎಂಬಲ್ಲಿ ದುರ್ಘಟನೆ ನಡೆದಿದ್ದು, ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ಎಲ್ಲ ರೀತಿಯ ನೆರವುಗಳನ್ನೂ ನೀಡುತ್ತಿರುವುದಾಗಿ ಸ್ಥಳೀಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇವರೆಲ್ಲ ಸುರಾನ್​ಕೋಟೆ ಉಪ ವಿಭಾಗಕ್ಕೆ ಸೇರಿದ ಮರಹಾ ಎಂಬ ಗ್ರಾಮದಲ್ಲಿ ಮದುವೆ ಮುಗಿಸಿ, ವಾಪಸ್​ ಬರುತ್ತಿದ್ದರು. ಮರಹಾ-ಬುಫಲಿಯಾಜ್​ ರಸ್ತೆಯಲ್ಲಿ, ತರರಾನಿ ವಾಲಿ ಗಲಿ ಎಂಬಲ್ಲಿ  ಚಾಲಕನ ನಿಯಂತ್ರಣ ತಪ್ಪಿ ವಾಹನ ಕಂದಕಕ್ಕೆ ಬಿದ್ದಿದೆ.  

ವಾಹನದಲ್ಲಿ ಒಟ್ಟು 13 ಮಂದಿ ಪ್ರಯಾಣ ಮಾಡುತ್ತಿದ್ದರು. ಕಂದಕ್ಕೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ. ಅದಾದ ನಂತರ ಪೊಲೀಸರು, ಆರೋಗ್ಯ ಸಿಬ್ಬಂದಿ ಆಗಮಿಸಿದ್ದಾರೆ. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಉಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಇಬ್ಬರು ಬದುಕುಳಿಯಲಿಲ್ಲ. ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಮಹಿಳೆಯರು, ಮಕ್ಕಳೂ ಇದ್ದರು. ಸದ್ಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಹೋಟೆಲ್ ತಿಂಡಿ ದುಬಾರಿ: ಖಾದ್ಯತೈಲ, ಸಿಲಿಂಡರ್ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ವರ್ಗಾಯಿಸಲು ಚಿಂತನೆ