AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಕೊವಿಡ್​ 19 ನಿಯಂತ್ರಣ ನಿರ್ಬಂಧಗಳು ಇಂದಿನಿಂದ ಇರೋದಿಲ್ಲ; ಏನೆಲ್ಲ ಬದಲಾವಣೆ ಆಗಲಿದೆ? ಮಾಸ್ಕ್​ ಧರಿಸೋದೂ ಬೇಡ್ವಾ?

ಮಾರ್ಚ್​​ನಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್​ ಭಲ್ಲಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದರು. ಏಪ್ರಿಲ್​ 1ನೇ ತಾರೀಖಿನಿಂದ ದೇಶದಲ್ಲಿ ಕೊವಿಡ್​ 19 ನಿಯಂತ್ರಣಾ ನಿಯಮಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಬರುವುದಿಲ್ಲ ಎಂದು ಹೇಳಿದ್ದರು.

ದೇಶದಲ್ಲಿ ಕೊವಿಡ್​ 19 ನಿಯಂತ್ರಣ ನಿರ್ಬಂಧಗಳು ಇಂದಿನಿಂದ ಇರೋದಿಲ್ಲ; ಏನೆಲ್ಲ ಬದಲಾವಣೆ ಆಗಲಿದೆ? ಮಾಸ್ಕ್​ ಧರಿಸೋದೂ ಬೇಡ್ವಾ?
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Apr 01, 2022 | 11:46 AM

Share

ಈಗೊಂದು ಎರಡು ವರ್ಷಗಳಿಂದ ದೇಶದಲ್ಲಿ ಕೊವಿಡ್​ 19 ಸಾಂಕ್ರಾಮಿಕ ಇನ್ನಿಲ್ಲದಂತೆ ಕಾಡಿದೆ. ರೋಗ ಭಯ, ಅದನ್ನು ತಡೆಯಲು ಮಾಡಿದ ಕಟ್ಟುನಿಟ್ಟಿನ ಕಾನೂನುಗಳು, ಅದನ್ನು ಮೀರಿದರೆ ದಂಡ-ಶಿಕ್ಷೆಯ ಆತಂಕ..ಹೀಗೆ ಒಂದೆರಡೇ ಅಲ್ಲ. ಮನೆಯಿಂದ ಹೊರಗೆ ಬಂದು ಯಾವುದೇ ಕೆಲಸಕ್ಕೆ ಹೋದರೂ ಕೊವಿಡ್​ 19 ನಿಯಂತ್ರಣ ನಿಯಮಗಳು ನಮ್ಮನ್ನು ಹಿಂಬಾಲಿಸುತ್ತಲೇ ಇದ್ದವು. ಆದರೆ ಇಂದಿನಿಂದ ಬದಲಾವಣೆಯಾಗಿದೆ. ಕೊರೊನಾ ನಿಯಂತ್ರಣಕ್ಕೆ ಹೇರಲಾಗಿದ್ದ ಎಲ್ಲ ನಿರ್ಬಂಧಗಳನ್ನೂ ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಇನ್ನು ಮುಂದೆ ಕೊವಿಡ್ 19 ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಆಗುವುದಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳು, ಜಿಮ್​, ರೆಸ್ಟೋರೆಂಟ್​, ಪಾರ್ಕ್​ಗಳು, ಸಿನಿಮಾ ಹಾಲ್​ಗಳು, ಮದುವೆ ಸಮಾರಂಭ, ಅಂತ್ಯಕ್ರಿಯೆ, ಸಾರ್ವಜನಿಕ ಸಭೆ-ಸಮಾರಂಭ..ಹೀಗೆ ಯಾವುದಕ್ಕೂ ಜನಮಿತಿಯಿಲ್ಲ, ನಿರ್ಬಂಧಗಳಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ನಿಯಮಗಳು ಹಾಗೇ ಇವೆ. ದೆಹಲಿ, ಮಹಾರಾಷ್ಟ್ರಗಳು ಮಾಸ್ಕ್​ ಕೂಡ ಕಡ್ಡಾಯವಾಗಿ ಇಟ್ಟಿಲ್ಲ. ಒಮ್ಮೆ ಮಾಸ್ಕ್​ ಧರಿಸಿದೆ ಇದ್ದರೆ ದಂಡ ವಿಧಿಸುವುದಿಲ್ಲ ಎಂದು ಹೇಳಿವೆ.

ಮಾರ್ಚ್​​ನಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್​ ಭಲ್ಲಾ ಅವರು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದರು. ಏಪ್ರಿಲ್​ 1ನೇ ತಾರೀಖಿನಿಂದ ದೇಶದಲ್ಲಿ ಕೊವಿಡ್​ 19 ನಿಯಂತ್ರಣಾ ನಿಯಮಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಬರುವುದಿಲ್ಲ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಪತ್ತೆ ಹಚ್ಚುವಿಕೆ, ಕಣ್ಗಾವಲು, ಸಂಪರ್ಕಿತರನ್ನು ಟ್ರೇಸ್​ ಮಾಡುವುದು, ಚಿಕಿತ್ಸೆ, ಲಸಿಕೆ ನೀಡಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳು, ವ್ಯವಸ್ಥೆಗಳನ್ನೂ ಹೆಚ್ಚಿಸಲಾಗಿದೆ. ಹಾಗಾಗಿ ನಿಯಮಗಳನ್ನು ಸಡಿಲಿಸಬಹುದು ಎಂದೂ ಹೇಳಿದ್ದರು.

2020ರ ಮಾರ್ಚ್​ 24ರಿಂದು ಮೊದಲ ಬಾರಿಗೆ ದೇಶದಲ್ಲಿ ಕೊವಿಡ್​ 19 ನಿಯಂತ್ರಣ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ವಿಧಿಸಿತ್ತು. ಈ ನಿಯಮಗಳು ವಿಪತ್ತು ನಿರ್ವಹಣಾ ಕಾಯ್ದೆಯಡಿ ಒಳಪಡುತ್ತಿದ್ದವು. ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರದ ನಿಯಮಗಳು, ಕಾನೂನುಗಳು ಹಲವು ಬಾರಿ ಪರಿಷ್ಕೃತ, ನವೀಕರಣಗೊಂಡಿವೆ ಹೊರತು ಅದನ್ನು ಪೂರ್ಣವಾಗಿ ತೆಗೆದಿರಲಿಲ್ಲ. ಆದರೆ ಇದೀಗ ಎಲ್ಲ ನಿಯಮಗಳನ್ನೂ ತೆಗೆದುಹಾಕಲಾಗಿದೆ. ಹಾಗಿದ್ದಾಗ್ಯೂ ಮಾಸ್ಕ್​ ಸದ್ಯ ಕಡ್ಡಾಯವಾಗಿಡುವಂತೆ ಹೇಳಿದೆ.  ಹಾಗಾಗಿ ಸಾರ್ವಜನಿಕರು ಮನೆಯಿಂದ ಹೊರ ಹೋಗುವಾಗ ಯಾವುದಕ್ಕೂ ಮಾಸ್ಕ್​ ಇಟ್ಟುಕೊಳ್ಳುವುದು ಒಳಿತು.

ದೇಶದಲ್ಲೀಗ ಪ್ರತಿದಿನ ಸುಮಾರು 1000 ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ  4,30,24,440 ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 14,307 ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಮೂರಲೇ ಅಲೆಯಲ್ಲಿ ಸಾವಿನ ಪ್ರಮಾಣ ತುಂಬ ಕಡಿಮೆ ಇತ್ತು. ಒಟ್ಟಾರೆ ಮೃತಪಟ್ಟವರ ಸಂಖ್ಯೆ 5,21,129. ದೇಶದಲ್ಲಿ ಚೇತರಿಕೆ ದರ ಶೇ.98.76ರಷ್ಟಿದೆ. ಸದ್ಯಕ್ಕೇನೂ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟು ಬೇರೆ ಆದೇಶವಿಲ್ಲ ಎಂದೂ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್​ ಭಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Published On - 11:33 am, Fri, 1 April 22

ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!