ಅಸಮಾನತೆಯನ್ನು ಕೊನೆಗೊಳಿಸಿದರೆ ಕೊವಿಡ್-19 ಸಾಂಕ್ರಾಮಿಕ 2022ರಲ್ಲಿ ಕೊನೆಗೊಳ್ಳಬಹುದು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಯಾವುದೇ ದೇಶವು ಸಾಂಕ್ರಾಮಿಕ ರೋಗದಿಂದ ಹೊರಬಂದಿಲ್ಲವಾದರೂ ಕೊವಿಡ್ ಅನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ನಮ್ಮಲ್ಲಿ ಅನೇಕ ಹೊಸ ಸಾಧನಗಳಿವೆ. ಹೀಗೆ ಅಸಮಾನತೆಯು ಮುಂದುವರಿದರೆ, ಈ ವೈರಸ್‌ನ ಹೆಚ್ಚಿನ ಅಪಾಯಗಳು ನಾವು ತಡೆಯಲು ಅಥವಾ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ವಿಕಸನಗೊಳ್ಳುತ್ತವೆ.

ಅಸಮಾನತೆಯನ್ನು ಕೊನೆಗೊಳಿಸಿದರೆ ಕೊವಿಡ್-19 ಸಾಂಕ್ರಾಮಿಕ 2022ರಲ್ಲಿ ಕೊನೆಗೊಳ್ಳಬಹುದು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ
ಟುಡ್ರೊಸ್‌ ಅಡೆನಾಮೊ ಗೆಬ್ರೆಯಾಸಸ್‌
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 03, 2022 | 10:50 AM

“ನಾವು ಅಸಮಾನತೆಯನ್ನು ಕೊನೆಗೊಳಿಸಿದರೆ” ಕೊರೊನಾವೈರಸ್ ಕಾಯಿಲೆ (Covid-19) ಸಾಂಕ್ರಾಮಿಕವು 2022 ರಲ್ಲಿ  ಕೊನೆಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ (Tedros Adhanom Ghebreyesus) ಪುನರುಚ್ಚರಿಸಿದ್ದಾರೆ. ಅವರು ತಮ್ಮ ಹೊಸ ವರ್ಷದ ಭಾಷಣದಲ್ಲಿ ಈ  ಸಂದೇಶವನ್ನು ನೀಡಿದರು. ಸಾಂಕ್ರಾಮಿಕ ರೋಗದ ಮೂರನೇ ವರ್ಷಕ್ಕೆ ಜಗತ್ತು ಪ್ರವೇಶಿಸಿದೆ. ಯಾವುದೇ ದೇಶವು ಸಾಂಕ್ರಾಮಿಕ ರೋಗದಿಂದ ಹೊರಬಂದಿಲ್ಲವಾದರೂ ಕೊವಿಡ್ ಅನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ನಮ್ಮಲ್ಲಿ ಅನೇಕ ಹೊಸ ಸಾಧನಗಳಿವೆ. ಹೀಗೆ ಅಸಮಾನತೆಯು ಮುಂದುವರಿದರೆ, ಈ ವೈರಸ್‌ನ ಹೆಚ್ಚಿನ ಅಪಾಯಗಳು ನಾವು ತಡೆಯಲು ಅಥವಾ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ವಿಕಸನಗೊಳ್ಳುತ್ತವೆ. ನಾವು ಅಸಮಾನತೆಯನ್ನು ಕೊನೆಗೊಳಿಸಿದರೆ, ನಾವು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಬಹುದು ಎಂದು ಅವರು ಹೇಳಿದರು.

ಮುಂದಿನ ವರ್ಷ ವಿಶ್ವದ ಜನರು ಎದುರಿಸಲಿರುವ ಏಕೈಕ ಆರೋಗ್ಯ ಬೆದರಿಕೆ ಕೊವಿಡ್ -19 ಅಲ್ಲ ಎಂದು ಹೈಲೈಟ್ ಮಾಡಿದ ಟೆಡ್ರೋಸ್, ಲಕ್ಷಾಂತರ ಜನರು ದಿನನಿತ್ಯದ ವ್ಯಾಕ್ಸಿನೇಷನ್, ಕುಟುಂಬ ಯೋಜನೆಗಾಗಿ ಸೇವೆಗಳು, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.

ಭವಿಷ್ಯದ ಪಿಡುಗು ಮತ್ತು ಸಾಂಕ್ರಾಮಿಕ ರೋಗಗಳಿಗೆ ಜಗತ್ತನ್ನು ಸಿದ್ಧಪಡಿಸಲು ಸಹಾಯ ಮಾಡಲು, “ನಾವು ಹೊಸ ಜೈವಿಕ ವಸ್ತುಗಳನ್ನು ಹಂಚಿಕೊಳ್ಳಲು ದೇಶಗಳಿಗಾಗಿ ವಿಶ್ವಸಸಂಸ್ಥೆ ಹೊಸ ಬಯೋಹಬ್ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ” ಎಂದು ಅವರು ಹೇಳಿದರು.

ಎಲ್ಲಾ ದೇಶಗಳು ತಮ್ಮ ಜನಸಂಖ್ಯೆ ಹೆಚ್ಚು ಲಸಿಕೆ ಹಾಕುವತ್ತ ಗಮನಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದರು. “2022ರ ಮಧ್ಯದ ವೇಳೆಗೆ ಎಲ್ಲಾ ದೇಶಗಳಲ್ಲಿ ಶೇ 70ರಷ್ಟು ಜನರಿಗೆ ಲಸಿಕೆ ಹಾಕುವ ಜಾಗತಿಕ ಗುರಿಯನ್ನು ತಲುಪಲು ನಾವು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಟೆಡ್ರೋಸ್ ಹೇಳಿದರು.ಒಮಿಕ್ರಾನ್ ಹೆಸರಿನ ಕೊರೊನಾವೈರಸ್‌ನ ಹೊಸ ರೂಪಾಂತರವು ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಹೊರಹೊಮ್ಮಿದ್ದು ಪ್ರಪಂಚದಾದ್ಯಂತ ಕೊವಿಡ್ -19 ಸೋಂಕಿನ ಉಲ್ಬಣವನ್ನು ಉಂಟುಮಾಡುತ್ತಿದೆ. ಇದನ್ನು ಈಗಾಗಲೇ ವಿಶ್ವ ಸಂಸ್ಥೆ ‘ಕಳವಳಿಕೆಯ ರೂಪಾಂತರ’ ಎಂದು ವರ್ಗೀಕರಿಸಲಾಗಿದೆ.ಕೆಲವು ದಿನಗಳ ಹಿಂದೆ, ಟೆಡ್ರೋಸ್  ಮಾಧ್ಯಮಗೋಷ್ಠಿಯಲ್ಲಿ “2022 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ವರ್ಷವಾಗಿರಬೇಕು” ಎಂದು ಹೇಳಿದ್ದರು.

ನೊವಾವಾಕ್ಸ್ (Novavax) ಪರವಾನಗಿ ಅಡಿಯಲ್ಲಿ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಉತ್ಪಾದಿಸಿದ ಒಂಬತ್ತನೇ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದ ನಂತರ ಈ ಹೇಳಿಕೆ ಬಂದಿದೆ. ಹೊಸ ಲಸಿಕೆಯು ಕೊವಾಕ್ಸ್ (COVAX) ಪೋರ್ಟ್‌ಫೋಲಿಯೊದ ಭಾಗವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದರು. ಜಾಗತಿಕ ವ್ಯಾಕ್ಸಿನೇಷನ್ ಗುರಿಗಳನ್ನು ಸಾಧಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಆಶಿಸಿದರು.

ಇದನ್ನೂ ಓದಿ:ಉಚಿತ ಲಸಿಕೆ: ಇಂದಿನಿಂದ ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊವಿಡ್ ಲಸಿಕೆ ಅಭಿಯಾನ

Published On - 10:40 am, Mon, 3 January 22