Video: 3000 ಲೀಟರ್​ ಮದ್ಯವನ್ನು ಕಾಬೂಲ್​ ಕಾಲುವೆಗೆ ಸುರಿದ ತಾಲಿಬಾನಿಗಳು; ಮದ್ಯ ಮಾರಾಟ, ಸೇವನೆಯಿಂದ ದೂರವಿರಬೇಕಂತೆ

Video: 3000 ಲೀಟರ್​ ಮದ್ಯವನ್ನು ಕಾಬೂಲ್​ ಕಾಲುವೆಗೆ ಸುರಿದ ತಾಲಿಬಾನಿಗಳು; ಮದ್ಯ ಮಾರಾಟ, ಸೇವನೆಯಿಂದ ದೂರವಿರಬೇಕಂತೆ
ಮದ್ಯವನ್ನು ಕಾಲುವೆಗೆ ಸುರಿದ ತಾಲಿಬಾನಿಗಳು

ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಇದ್ದ ಯುಎಸ್ ಬೆಂಬಲಿತ ಸರ್ಕಾರವೂ ಕೂಡ ಮದ್ಯ ಮಾರಾಟ, ಸೇವನೆಯನ್ನು ನಿಷೇಧಿಸಿತ್ತು. ಆದರೆ ಇದೀಗ ಬಂದಿರುವ ತಾಲಿಬಾನ್​ ಕಟ್ಟಾ ಇಸ್ಲಾಂ ಸಂಪ್ರದಾಯ ಪಾಲಕವಾಗಿದೆ.

TV9kannada Web Team

| Edited By: Lakshmi Hegde

Jan 03, 2022 | 9:11 PM

ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದ ಗುಪ್ತಚರ ದಳದ ಏಜೆಂಟ್​​ಗಳು ಬರೋಬ್ಬರಿ 3000 ಲೀಟರ್​ ಮದ್ಯವನ್ನು ಕಾಬೂಲ್​ನ ಕಾಲುವೆಗೆ ಸುರಿದಿದ್ದಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಂದಹಾಗೆ, ಅಫ್ಘಾನ್​ ಗುಪ್ತಚರ ದಳ, ಮದ್ಯವನ್ನು ಕಾಲುವೆಗೆ ಸುರಿದಿದ್ದನ್ನು ಅಲ್ಲಿನ ಬೇಹುಗಾರಿಕೆ ವಿಭಾಗ ದೃಢಪಡಿಸಿದೆ. ಅಲ್ಲದೆ, ಮದ್ಯ ಮಾರಾಟ, ಪೂರೈಕೆಯಲ್ಲಿ ಸಕ್ರಿಯರಾಗಿದ್ದ ಮೂವರು ಡೀಲರ್​ಗಳನ್ನು ಬಂಧಿಸಲಾಗಿದೆ ಎಂದೂ ವರದಿಯಾಗಿದೆ. ಆದರೆ ಈ ಮದ್ಯವನ್ನು ಎಲ್ಲಿಂದ ವಶಪಡಿಸಿಕೊಳ್ಳಲಾಯಿತು? ಯಾರಿಂದ ವಶಪಡಿಸಿಕೊಳ್ಳಲಾಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. 

ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಇದ್ದ ಯುಎಸ್ ಬೆಂಬಲಿತ ಸರ್ಕಾರವೂ ಕೂಡ ಮದ್ಯ ಮಾರಾಟ, ಸೇವನೆಯನ್ನು ನಿಷೇಧಿಸಿತ್ತು. ಆದರೆ ಇದೀಗ ಬಂದಿರುವ ತಾಲಿಬಾನ್​ ಕಟ್ಟಾ ಇಸ್ಲಾಂ ಸಂಪ್ರದಾಯ ಪಾಲಕವಾಗಿದ್ದು, ಅದರ ಅನ್ವಯ ಮದ್ಯ ಸೇವನೆ, ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕದ್ದುಮುಚ್ಚಿ ಮಾರಾಟ ಮಾಡುತ್ತಿರುವವರನ್ನೂ ಬೇಧಿಸುತ್ತಿದೆ. ಮದ್ಯವನ್ನು ಕಾಲುವೆಗೆ ಸುರಿಯುತ್ತಿರುವ ವಿಡಿಯೋವನ್ನು ಅಫ್ಘಾನಿಸ್ತಾನದ ಜನರಲ್ ಡೈರೆಕ್ಟರೇಟ್​ ಆಫ್​ ಇಂಟಲಿಜೆನ್ಸ್​ (DGI) ಬಿಡುಗಡೆ ಮಾಡಿದೆ.  ಮುಸ್ಲಿಮರು ಮದ್ಯ ತಯಾರಿಕೆ ಮತ್ತು ಪೂರೈಕೆ, ಸೇವನೆಯಿಂದ ಸಂಪೂರ್ಣವಾಗಿ ದೂರ ಇರಬೇಕು ಎಂದು ಇಸ್ಲಾಂ ಧಾರ್ಮಿಕ ಮುಖಂಡರು ಹೇಳಿದ್ದಾಗಿ ಡಿಜಿಐ ಹೇಳಿದೆ.

ಇದನ್ನೂ ಓದಿ: ಮೋದಿ ಅಹಂಕಾರಿ ಎಂದ ಮೇಘಾಲಯ ಗವರ್ನರ್ ; ಮಲಿಕ್ ಆರೋಪ ಸತ್ಯವಾಗಿದ್ದರೆ ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಪಟ್ಟು

Follow us on

Related Stories

Most Read Stories

Click on your DTH Provider to Add TV9 Kannada