ಪಾಕಿಸ್ತಾನದ 100ವರ್ಷ ಹಳೇ ದೇಗುಲದಲ್ಲಿ, ಬಿಗಿ ಭದ್ರತೆಯಲ್ಲಿ ಹಿಂದು ಯಾತ್ರಾರ್ಥಿಗಳಿಂದ ಪ್ರಾರ್ಥನೆ; ಧ್ವಂಸಗೊಂಡ ದೇವಾಲಯ ನವೀಕರಣ
ಮಹಾರಾಜ ಪರಮಹಂಸ ಜೀ ಅವರು 1919ರಲ್ಲಿ ತೇರಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಹೀಗಾಗಿ ಅವರ ಸ್ಮಾರಕಕ್ಕೆ ಮಂದಿರ ನಿರ್ಮಾಣವಾಗಿದೆ. ಈ ಪ್ರದೇಶ ಇಂದು ಹಿಂದು ಯಾತ್ರಾರ್ಥಿಗಳಿಂದ ಗಿಜಿಗುಡುತ್ತಿತ್ತು.
ಪೇಶಾವರ್: ವಾಯುವ್ಯ ಪಾಕಿಸ್ತಾನದಲ್ಲಿರುವ 100 ವರ್ಷ ಹಳೆಯದಾದ ನವೀಕೃತ ಮಹಾರಾಜ ಪರಮಹಂಸ ಜೀ(Maharaja Paramhans Ji) ದೇಗುಲದಲ್ಲಿ ನಿನ್ನೆ(ಹೊಸ ವರ್ಷದ ಮೊದಲ ದಿನ) ಭಾರತ, ಯುಎಸ್ ಮತ್ತು ಗಲ್ಫ್ ದೇಶಗಳ ಹಿಂದೂ ಯಾತ್ರಾರ್ಥಿಗಳು, ಬಿಗಿ ಭದ್ರತೆಯ ನಡುವೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೇಗುಲ ಒಂದು ವರ್ಷದ ಹಿಂದೆ ಸಾಂಪ್ರದಾಯಿಕ ಇಸ್ಲಾಂ ಕಟ್ಟಾವಾದಿಗಳಿಂದ ಧ್ವಂಸಗೊಂಡಿತ್ತು. ಅಂದಹಾಗೆ ಭಾರತದ 200 ಹಿಂದೂ ಭಕ್ತರು, ದುಬೈನ 15 ಜನರು ಮತ್ತು ಯುಎಸ್ ಹಾಗೂ ಗಲ್ಫ್ ದೇಶಗಳ ಭಕ್ತರು ಇಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಪರಮಹಂಸ ಅವರ ಸಮಾಧಿ ಮತ್ತು ಅದರ ಮಂದಿರ ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯಂದ ಕರಕ್ ಜಿಲ್ಲೆಯಲ್ಲಿದೆ. 2020ರ ಇದರ ಮೇಲೆ ಮುಸ್ಲಿಮರು ದಾಳಿ ಮಾಡಿ, ಧ್ವಂಸಗೊಳಿಸಿದ್ದರು. ಆದರೆ ಈ ಘಟನೆಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿತ್ತು. ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಅದಾದ ಬಳಿಕ ಮಂದಿರವನ್ನು ಮತ್ತೆ ಅಭಿವೃದ್ಧಿಗೊಳಿಸಲಾಗಿದೆ. ಭಾರತದ ಹಿಂದು ಯಾತ್ರಾರ್ಥಿಗಳು ಲಾಹೋರ್ ಸಮೀಪ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಈ ವೇಳೆ ಸಶಸ್ತ್ರ ಸಹಿತ ಸಿಬ್ಬಂದಿ ಅವರಿಗೆ ರಕ್ಷಣೆ ಒದಗಿಸಿದ್ದಾರೆ. ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವಾಗಲೂ ಕೂಡ ಹಿಂದು ಯಾತ್ರಾರ್ಥಿಗಳಿಗೆ ರಕ್ಷಣೆ ಒದಗಿಸಲಾಗಿತ್ತು ಎಂದು ಹೇಳಲಾಗಿದೆ. ಅಂದಹಾಗೇ, ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮವನ್ನು ಪಾಕಿಸ್ತಾನ ಹಿಂದೂ ಕೌನ್ಸಿಲ್, ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್ಲೈನ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿತ್ತು. ಇದು ಸ್ಮಾರಕ ವಂದನೆ ಕಾರ್ಯಕ್ರಮವಾಗಿದ್ದು, ಇಂದು ರಾತ್ರಿಯವರೆಗೂ ನಡೆಯಲಿದೆ. ಹಿಂದು ಯಾತ್ರಾರ್ಥಿಗಳಿಗಾಗಿ ಆಶ್ರಯ ಧಾಮಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಮಹಾರಾಜ ಪರಮಹಂಸ ಜೀ ಅವರು 1919ರಲ್ಲಿ ತೇರಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಹೀಗಾಗಿ ಅವರ ಸ್ಮಾರಕಕ್ಕೆ ಮಂದಿರ ನಿರ್ಮಾಣವಾಗಿದೆ. ಈ ಪ್ರದೇಶ ಇಂದು ಹಿಂದು ಯಾತ್ರಾರ್ಥಿಗಳಿಂದ ಗಿಜಿಗುಡುತ್ತಿತ್ತು. ಹಿಂದುಗಳ ಮಕ್ಕಳು, ಸ್ಥಳೀಯ ಮುಸ್ಲಿಂ ಮಕ್ಕಳೊಂದಿಗೆ ಸೇರಿ ಕ್ರಿಕೆಟ್ ಆಡುತ್ತಿದ್ದರು. ಹೀಗೆ ಯಾತ್ರೆಗೆ ಆಗಮಿಸಿದ ಹಿಂದುಗಳಿಗಾಗಿ ಪಾಕಿಸ್ತಾನ ಮಾಡಿದ ವ್ಯವಸ್ಥೆಯನ್ನು ಹಿಂದು ಸಮುದಾಯ ಕಾನೂನು ವ್ಯವಹಾರ ಮುಖ್ಯಸ್ಥ ರೋಹಿತ್ ಕುಮಾರ್ ಶ್ಲಾಘಿಸಿದ್ದಾರೆ. ಅಲ್ಲದೆ, ಕಳದೆ ವರ್ಷ ಈ ದೇಗುಲ ಧ್ವಂಸಗೊಂಡಿತ್ತು. ಅದರ ರಿಪೇರಿ ಕಾರ್ಯವನ್ನೂ ಬೇಗನೇ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ, ಪಾಕಿಸ್ತಾನದ ಈ ಮಂದಿರದಲ್ಲಿ ಹಿಂದುಗಳು ಮಾಡಿದ ಪ್ರಾರ್ಥನೆ, ಭಾರತಕ್ಕೆ ಒಂದು ಸಕಾರಾತ್ಮಕ ಸಂದೇಶವನ್ನು ಕೊಟ್ಟಿದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: Rashmika Mandanna: ಕೊಡಗಿನ ಕುವರಿ ರಶ್ಮಿಕಾ ಹೊಸ ವರ್ಷವನ್ನು ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಚಿತ್ರಗಳು